ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ
ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ, ಗೆಳೆಯ ಮಂಡಿಯೂರಿ ಮಾಡಿದ ಪ್ರಪೋಸಲ್‌ಗೆ ಕಣ್ಮುಚ್ಚಿ ಯೆಎಸ್ ಎಂದ ಈಕೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂತಸವನ್ನು ಮಾಜಿ ಸ್ಪರ್ಧಿ ಹಂಚಿಕೊಂಡಿದ್ದಾಳೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಎಂಗೇಜ್‌ಮೆಂಟ್
ಬಿಗ್ ಬಾಸ್ ಮಾಜಿ ಸ್ಪರ್ಧಿ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿ ಕೊಟ್ಟಿದ್ದಾನೆ. ಬಹುಕಾಲದ ಗೆಳೆಯನ ಪ್ರಪೋಸಲ್‌ಗೆ ಕಾಯುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ,ಪ್ರೇಮ ನಿವೇದನೆ ಮಾಡುತ್ತಿದ್ದಂತೆ ಒಕೆ ಎಂದಿದ್ದಾಳೆ. ಹೌದು, ಹಿಂದಿ ಬಿಗ್ ಬಾಸ್ 10ರ ಸ್ಪರ್ಧಿ ನಿತಿಬಾ ಕೌಲ್ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
ಪ್ರಣಯ ಹಕ್ಕಿಗಳಂತೆ ಸುತ್ತಾಡಿದ್ದ ಈ ಜೋಡಿ
ಕೆಲ ವರ್ಷಗಳ ಕಾಲ ಈ ಜೋಡಿ ಪ್ರಣಯ ಹಕ್ಕಿಗಳಂತೆ ಸುತ್ತಾಡಿತ್ತು. ಎಂಗೇಜ್‌ಮೆಂಟ್ ಪೋಸ್ಟ್‌ನಲ್ಲಿ ನಿತಿಬಾ ಕೌಲ್ ಈ ಕುರಿತು ಹೇಳಿಕೊಂಡಿದ್ದಾರೆ. ವರ್ಷಗಳ ಕಾಲ ತಡ ರಾತ್ರಿ ಕರೆ, ವಿಮಾನ ನಿಲ್ದಾಣಗಳಲ್ಲಿ ಗುಡ್ ಬೈ, ಹಲವು ಬಾರಿ ಕಣ್ಣೀರಿನ ಬಳಿಕ ಇದೀಗ ಬದುಕಿನ ಹೊಸ ಬಾಳಿಗೆ ಕಾಲಿಡುತ್ತಿದ್ದೇನೆ ಎಂದಿದ್ದಾರೆ.
ಬಾಳ ಸಂಗಾತಿಯಾಗಲು ಗೆಳಯನ ಪ್ರಪೋಸಲ್
ವರ್ಷಗಳ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ಗೆಳೆಯ ಮಂಡಿಯೂರಿ ಬಾಳಸಂಗಾತಿಯಾಗಲು ಪ್ರಪೋಸ್ ಮಾಡಿದ್ದ. ಇದಕ್ಕಿಂತ ಇನ್ನೇನು ಬೇಕು. ನನ್ನ ಕನಸಿನಂತೆ ಪ್ರಪೋಸಲ್, ಆತನ ನೀಡಿದ ಪ್ರೀತಿ, ಆರೈಕೆಗೆ ನಾನೇ ಅತೀ ಲಕ್ಕಿ ಗರ್ಲ್ ಎಂಬಂತೆ ಭಾಸವಾಗುತ್ತಿದೆ. ಇದೀಗ ನಮ್ಮ ಪ್ರೀತಿಯ ಪಯಣ ಎಂಗೇಜ್‌ಮೆಂಟ್ ಅರ್ಥ ಪಡೆದುಕೊಂಡಿದೆ ಎಂದು ನಿತಿಬಾ ಕೌಲ್ ಹೇಳಿಕೊಂಡಿದ್ದರೆ.
ಗೂಗಲ್ ಉದ್ಯೋಗ ಬಿಟ್ಟು ಬಿಗ್ ಬಾಸ್‌ಗೆ ಎಂಟ್ರಿ
ಬಾಚ್ಯುಲರ್ ಆಫ್ ಬಿಸಿನೆಸ್ ಸ್ಟಡೀಸ್ ಪದವಿ ಪಡೆದಿರುವ ನಿತಿಬಾ ಕೌಲ್, ಕ್ಯಾಂಪಸ್ ಇಂಟರ್ವ್ಯೂ ಮೂಲಕ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆದರೆ ಉದ್ಯೋಗ ತೊರೆದೆ ಎಂಟರ್ಟೈನ್ಮೆಂಟ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ 10ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಬಳಿಕ ಕಂಟೆಂಟ್ ಕ್ರಿಯೇಟರ್
ಬಿಗ್ ಬಾಸ್ ಬಳಿಕ ನಿತಿಬಾ ಕೌಲ್ ಕಂಟೆಂಡ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್‌ನಲ್ಲಿ ಸಿಕ್ಕ ಖ್ಯಾತಿಯಿಂದ ಯೂಟ್ಯೂಬ್್ ಮೂಲಕ ಕ್ರಿಯೇಟರ್ ಆಗಿ ಗಮನಸೆಳೆದಿದ್ದಾರೆ. ಹಲವು ವಿಡಿಯೋಗಳಲ್ಲಿ ತಮ್ಮ ಲೈಫ್ ಸ್ಟೈಲ್, ಬಾಲ್ಯದ ಕ್ರಶ್ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದ್ದಾರೆ.
ಬಿಗ್ ಬಾಸ್ ಬಳಿಕ ಕಂಟೆಂಟ್ ಕ್ರಿಯೇಟರ್
ನಿತಿಬಾ ಕೌಲ್‌ಗೆ ಶುಭಾಶಯಗಳ ಮಹಾಪೂರ
ಎಂಗೇಜ್‌ಮೆಂಟ್ ಮಾಡಿಕೊಂಡಿರುವ ನಿತಿಬಾ ಕೌಲ್‌ಗೆ ಬಿಗ್ ಬಾಸ್ 10ರ ಸಹ ಸ್ಪರ್ಧಿಗಳು ಶುಭಕೋರಿದ್ದಾರೆ. ಇದೇ ವೇಳೆ ಅಪಾರ ಅಭಿಮಾನಿಗಳು ಶುಭ ಕೋರಿದ್ದಾರೆ. ನಿತಿಬಾ ಕೌಲ್ ಪೋಸ್ಟ್ ಕ್ಷಣಾರ್ಧಧಲ್ಲಿ ಲಕ್ಷಾಂತರ ವೀವ್ಸ್ ಹಾಗೂ ಲೈಕ್ಸ್ ಪಡೆದಿದೆ.
ನಿತಿಬಾ ಕೌಲ್‌ಗೆ ಶುಭಾಶಯಗಳ ಮಹಾಪೂರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

