ಗ್ರೇಟರ್ ನೋಯ್ಡಾದಲ್ಲಿ, ತನ್ನ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ದಕ್ಷಿಣ ಕೊರಿಯಾದ ಪ್ರಜೆಯನ್ನು ಮಣಿಪುರದ ಯುವತಿಯೊಬ್ಬಳು ಹತ್ಯೆ ಮಾಡಿದ್ದಾಳೆ.
ತನ್ನ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬಳು ಸಾಯಿಸಿದ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮಣಿಪುರ ಮೂಲದ ಮಹಿಳೆಯೊಬ್ಬರು ವಿದೇಶಿ ಪ್ರಜೆ ದಕ್ಷಿಣ ಕೊರಿಯಾದ ವ್ಯಕ್ತಿಯ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದು, ಗ್ರೇಟರ್ ನೋಯ್ಡಾದಲ್ಲಿ ವಾಸಮಾಡುತ್ತಿದ್ದರು.
ಡಕ್ ಹೀ ಯುಹ್ ಪ್ರೇಯಸಿಯಿಂದಲೇ ಕೊಲೆಯಾದ ದಕ್ಷಿಣ ಕೊರಿಯಾ ಪ್ರಜೆ. ನಾಲೆಡ್ಜ್ ಪಾರ್ಕ್ ಪೊಲೀಸರಿಗೆ ಜಿಐಎಂಎಸ್ ಆಸ್ಪತ್ರೆಯವರು ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿದ ಮಣಿಪುರ ಯುವತಿ ಲುಂಜೀನಾ ಪಮೈ ಬಳಿಕ ಆತನ ಸ್ಥಿತಿ ಕೈಮೀರುತ್ತಿದ್ದಂತೆ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದಳು. ಆದರೆ ಜಿಐಎಂಎಸ್ ಆಸ್ಪತ್ರೆಗೆ ಬರುವ ಮೊದಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಗಾಯಕಿ ಚಿತ್ರಾ ಅಯ್ಯರ್‌ಗೆ ಸರಣಿ ಆಘಾತ: ತಂದೆಯ ಸಾವಾಗಿ ತಿಂಗಳು ಕಳೆಯುವ ಮೊದಲೇ ಸೋದರಿಯೂ ಸಾವು
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ಗೆಳತಿ, ಲೀವಿಂಗ್ ಪಾರ್ಟನರ್ ಲುಂಜೀನಾ ಪಮೈನನ್ನು ವಶಕ್ಕೆಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆಕೆ ತನ್ನ ಬಾಯ್‌ಫ್ರೆಂಡ್ ಡಕ್ ಹೀ ಯುಹ್, ಆಗಾಗ ಮದ್ಯಸೇವಿಸಿ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಆತನ ಕಿರುಕುಳ ತಾಳಲಾರದೇ ಕೋಪದ ಭರದಲ್ಲಿ ಆತನ ಮೇಲೆ ತಾನು ಹಲ್ಲೆ ಮಾಡಿದ್ದಾಗಿ ಲುಂಜೀನಾ ಹೇಳಿದ್ದಾಳೆ.
ಇದನ್ನೂ ಓದಿ: ವಾಹನ ಹಿಡಿದ ಟ್ರಾಫಿಕ್ ಪೊಲೀಸರಿಗೆ ಹಾವು ತೋರಿಸಿ ಆಟೋದೊಂದಿಗೆ ಎಸ್ಕೇಪ್ ಆದ ಕುಡುಕ: ವೀಡಿಯೋ ವೈರಲ್
ಜೋಡಿ ಗ್ರೇಟರ್ ನೋಯ್ಡಾದ ಗಗನಚುಂಬಿ ಕಟ್ಟಡದಲ್ಲಿವ ವಾಸ ಮಾಡ್ತಿದ್ರು. ಡಕ್ ಹೀ ಮೊಬೈಲ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಪೊಲೀಸರ ಪ್ರಕಾರ, ಇಬ್ಬರು ಕುಡಿಯುವ ಸಮಯದಲ್ಲಿಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಬಳಿಕ ಕೊಲೆಯಾಗಿದೆ. ಆ ಸಮಯದಲ್ಲಿ ಕೋಪದ ಭರದಲ್ಲಿ ಲುಂಜೀನಾ ಪಮೈ ತನ್ನ ಬಾಯ್‌ಫ್ರೆಂಡ್‌ನ ಎದೆಗೆ ಇರಿದಿದ್ದಾಳೆ. ನಂತರ ಸೀದಾ ಆಸ್ಪತ್ರೆಗೆ ಕರೆ ತಂದಿದ್ದಾಳೆ. ಪೊಲೀಸರು ಸ್ಥಳಕ್ಕೆ ಬರುವವವರೆಗೂ ಆಕೆ ಆಸ್ಪತ್ರೆಯಲ್ಲಿ ಇದ್ದಳು. ನಂತರ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆತ ಕುಡಿದ ನಂತರ ಹಿಂಸೆಗೆ ಇಳಿಯುತ್ತಿದ್ದ. ತನಗೆ ಆತನನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ. ಪೊಲೀಸರು ಈಗ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


