11:12 PM (IST) Aug 22

India News Live 22nd August: Saifullah Kasuri - ಪಿಒಕೆ ಹೊತ್ತಿ ಉರಿಯವ ಹೊತ್ತಲ್ಲಿ ಕಾಶ್ಮೀರದ ಬಗ್ಗೆ ವಿಷ ಕಕ್ಕಿದ ಲಷ್ಕರ್ ಉಗ್ರ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.

Read Full Story
09:54 PM (IST) Aug 22

India News Live 22nd August: Dimagi Naxals - 'ನಮಗೆ ದೇಶಭಕ್ತಿಯ ಪಾಠ ಮಾಡಬೇಡಿ..' ಪ್ರಧಾನಿ ಮೋದಿ ದಿಮಾಗಿ ನಕ್ಸಲ್ ಹೇಳಿಕೆಗೆ ಖರ್ಗೆ ತಿರುಗೇಟು!

ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಗಮನಹರಿಸಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

Read Full Story
09:38 PM (IST) Aug 22

India News Live 22nd August: ನಾಲ್ಕು ವರ್ಷದ ಮಕ್ಕಳಿಗೆ ಈ ಔಷಧಿ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ

4 ವರ್ಷದೊಳಗಿನ ಮಕ್ಕಳಿಗೆ ಶೀತ ಮತ್ತು ಅಲರ್ಜಿಗಾಗಿ ಬಳಸಲಾಗುವ ಕ್ಲೋರ್‌ಫೆನಿರಮೈನ್ ಮಲೇಟ್ ಹಾಗೂ ಫೆನೈಲೆಫ್ರಿನ್ ಹೈಡ್ರೋಕ್ಲೋರೈಡ್ ಕಾಂಬಿನೇಷನ್ (FDC) ಔಷಧಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಔಷಧಗಳ ಲೇಬಲ್ ಮತ್ತು ಪ್ಯಾಕೆಟ್‌ಗಳ ಮೇಲೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದನ್ನು ಬಳಸಬಾರದು ಎಂಬ ಎಚ್ಚರಿಕೆಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ.

Read Full Story
08:45 PM (IST) Aug 22

India News Live 22nd August: ಅಣ್ಣಾ, ಹತ್ತು ದಿನದಲ್ಲಿ ರಾಖಿ ಹಬ್ಬ ಇದೆ, ಆಗ ಯಾರಿಗೆ ಫೋನ್ ಮಾಡಲಿ? ಅಣ್ಣನ ಮೃತದೇಹ ನೋಡಿ ತಂಗಿ ಕಣ್ಣೀರು

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್‌ಗಾಗಿ ನಡೆದ ಜಗಳದ ಬಳಿಕ ಮಗ ಬೆಟ್ಟದಿಂದ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮೃತ ಸಹೋದರನ ಶವ ಕಂಡು ಕಣ್ಣೀರಿಟ್ಟ ತಂಗಿ, ಇನ್ನು ಹತ್ತು ದಿನದಲ್ಲಿ ರಾಖಿ ಇದೆ, ಈಗ ನಾನು ಯಾರಿಗೆ ಫೋನ್ ಮಾಡಲಿ? ಎಂದು ಕರುಣಾಜನಕವಾಗಿ ರೋದಿಸಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

Read Full Story
08:41 PM (IST) Aug 22

India News Live 22nd August: ‘ಫೌಜಿ’, ‘ಟಾಕ್ಸಿಕ್’ ನಡುವೆ ಕ್ಯೂಟ್ ಲವ್ ಸ್ಟೋರಿಗಳ ಲಗ್ಗೆ - ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾಗಳದ್ದೇ ಹವಾ?

ಸದ್ಯ ಸಿನಿಮಾ ಪ್ರೇಮಿಗಳ ಮಾತಿನಲ್ಲಿ ‘ಫೌಜಿ’, ‘ವಿಶ್ವಂಭರ’, ‘ಟಾಕ್ಸಿಕ್’ನಂತಹ ಬಿಗ್ ಬಜೆಟ್ ಸಿನಿಮಾಗಳದ್ದೇ ಸದ್ದು. ಆದರೆ ಮುಂದಿನ ಎರಡು ತಿಂಗಳು ಬಾಕ್ಸ್ ಆಫೀಸ್‌ನಲ್ಲಿ ಕೇವಲ ದೊಡ್ಡ ಸಿನಿಮಾಗಳದ್ದೇ ಅಬ್ಬರವಿರಲ್ಲ.

Read Full Story
07:07 PM (IST) Aug 22

India News Live 22nd August: ಅಧಿಕೃತವಾಗಿ ಮದುವೆಯಾದ ನಟ ಅರ್ಜುನ್ ರಾಂಪಾಲ್; ಇಲ್ಲೊಂದು ಭಾರೀ ಟ್ವಿಸ್ಟ್ ಇದೆ ನೋಡಿ!

ಯಾವುದೇ ಆರ್ಭಟವಿಲ್ಲದೆ, ಕೇವಲ ಪ್ರೀತಿ ಮತ್ತು ಕಾನೂನಿನ ಗೌರವದೊಂದಿಗೆ ಸತಿ-ಪತಿಯರಾಗಿರುವ ಅರ್ಜುನ್ ಮತ್ತು ಗೇಬ್ರಿಯೆಲಾ ಜೋಡಿಗೆ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಆದರೆ, ಈ ಜೋಡಿಯ ಮದುವೆಯಲ್ಲಿ ಒಂದು ಟ್ವಿಸ್ಟ್ ಇದೆ..! ಅದೇನ್ ಗೊತ್ತಾ?

Read Full Story
06:42 PM (IST) Aug 22

India News Live 22nd August: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್ - ಚಿರತೆ ನಿಗಾಕ್ಕೆ ಬರಲಿದೆ ರೋಬೋಟಿಕ್ ನಾಯಿಗಳು

ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್‌ ನಾಯಿಗಳು!

Read Full Story
06:34 PM (IST) Aug 22

India News Live 22nd August: ಹಳದಿಯಾಗಿ ಬದಲಾದ ಫೋನ್ ಕವರನ್ನು ಹೊಸದಾಗಿ ಕಾಣುವಂತೆ ಮಾಡಿ; ಮನೆಯಲ್ಲಿರುವ 2 ವಸ್ತುಗಳು ಸಾಕು!

ಕಾಲಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವ ಪಾರದರ್ಶಕ ಮೊಬೈಲ್ ಕವರ್‌ಗಳನ್ನು ಪ್ರತಿ ಬಾರಿ ಬದಲಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಬೇಕಿಂಗ್ ಸೋಡಾ, ವಿನೆಗರ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಹಳೆಯ ಕವರ್‌ಗೆ ಹೊಸ ಹೊಳಪನ್ನು ನೀಡುವ ಸರಳ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story
05:53 PM (IST) Aug 22

India News Live 22nd August: ವಿಜ್ಞಾನವನ್ನೂ ಬೆಚ್ಚಿಬೀಳಿಸಿದ 7 ನಿಗೂಢ ರಹಸ್ಯಗಳು; ಜಗತ್ತನ್ನು ಕಾಡುತ್ತಿರುವ ಪ್ರಶ್ನೆಗಳು

ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಜಗತ್ತಿನಲ್ಲಿ ಇಂದಿಗೂ ಉತ್ತರ ಸಿಗದ ಹಲವಾರು ನಿಗೂಢ ರಹಸ್ಯಗಳಿವೆ. ಡಯಾಟ್ಲೋವ್ ಪಾಸ್ ಘಟನೆ, ಮೇರಿ ಸೆಲೆಸ್ಟ್ ಹಡಗಿನ ಸಿಬ್ಬಂದಿ ನಾಪತ್ತೆ, ಮತ್ತು ವೋಯ್ನಿಚ್ ಹಸ್ತಪ್ರತಿಯಂತಹ 7 ಘಟನೆಗಳು ವಿಜ್ಞಾನಿಗಳಿಗೆ ಮತ್ತು ಇತಿಹಾಸಕಾರರಿಗೆ ಇಂದಿಗೂ ಸವಾಲಾಗಿ ಉಳಿದಿವೆ.
Read Full Story
05:53 PM (IST) Aug 22

India News Live 22nd August: ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ.. ಈ ಬ್ಯಾಂಕ್‌ನಲ್ಲಿ 2,482 ಹುದ್ದೆಗಳಿಗೆ ಅರ್ಜಿ ಆಹ್ವಾನ..

ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ ಒಟ್ಟು 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪದವಿ ಜೊತೆಗೆ ಕನಿಷ್ಠ ಒಂದು ವರ್ಷದ ಬ್ಯಾಂಕಿಂಗ್ ಅಧಿಕಾರಿ ಹುದ್ದೆಯ ಅನುಭವ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Read Full Story
05:23 PM (IST) Aug 22

India News Live 22nd August: 'ಈ ಪಾತ್ರ ನನ್ನನ್ನು ಬದಲಿಸಿದೆ' - ‘ಮಹಾಕಾಳಿ’ಗಾಗಿ ಇಷ್ಟು ತಯಾರಿ ನಡೆಸಿದ್ರಾ ಬಿಗ್‌ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ

Mahakali The End Begins: ನಟಿ ಭೂಮಿ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಬಹುನಿರೀಕ್ಷಿತ ಸಿನಿಮಾ ‘ಮಹಾಕಾಳಿ-ದಿ ಎಂಡ್ ಬಿಗಿನ್ಸ್’ನಲ್ಲಿ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Read Full Story
04:52 PM (IST) Aug 22

India News Live 22nd August: ಟಿವಿ ನೋಡುವವರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ

ಕೇಂದ್ರ ಸರ್ಕಾರವು ಟಿವಿ ಚಾನೆಲ್‌ಗಳಲ್ಲಿನ ಜಾಹೀರಾತು ಸಮಯದ ಮಿತಿಯನ್ನು ರದ್ದುಗೊಳಿಸಿದೆ. ಈ ಹಿಂದೆ ಗಂಟೆಗೆ 12 ನಿಮಿಷಗಳ ಜಾಹೀರಾತು ಮಿತಿ ಇದ್ದು, ಈಗ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳ ತಿದ್ದುಪಡಿಯೊಂದಿಗೆ ಈ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
Read Full Story
04:52 PM (IST) Aug 22

India News Live 22nd August: ಕನ್ನಡಿಗರಿಗೂ ಪರಿಚಿತ ನಟಿ ರೆಜಿನಾ ಸಿನಿ ಕೆರಿಯರ್‌ನಲ್ಲಿ ಹೊಸ ಅಧ್ಯಾಯ - ವಿಲನ್ ಪಾತ್ರಕ್ಕೆ ಗ್ರೀನ್ ಸಿಗ್ನಲ್?

ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ರೆಜಿನಾ ಕ್ಯಾಸಂಡ್ರಾ, ಚಿತ್ರರಂಗದಲ್ಲಿ ಬರೋಬ್ಬರಿ 20 ವರ್ಷಗಳನ್ನು ಪೂರೈಸಿದ್ದಾರೆ.

Read Full Story
04:43 PM (IST) Aug 22

India News Live 22nd August: ಭೂಮಿಯ ಕಾಂತಕ್ಷೇತ್ರ ಗ್ರಹಿಸುವ ಬಾನೆಟ್‌ಹೆಡ್ ಶಾರ್ಕ್‌ಗಳು - ಸಾಗರದ ಅದೃಶ್ಯ 'ಜಿಪಿಎಸ್' ರಹಸ್ಯ ಭೇದಿಸಿದ ವಿಜ್ಞಾನಿಗಳು!

ಶಾರ್ಕ್‌ಗಳು ಸಾಗರದಲ್ಲಿ ದಾರಿ ತಪ್ಪದೆ ಸಾವಿರಾರು ಕಿಲೋಮೀಟರ್ ಹೇಗೆ ಚಲಿಸುತ್ತವೆ ಎಂಬುದು ಬಹುಕಾಲದ ರಹಸ್ಯವಾಗಿತ್ತು. ಫ್ಲೋರಿಡಾದಲ್ಲಿ ನಡೆದ ಅಧ್ಯಯನವೊಂದು, ಶಾರ್ಕ್‌ಗಳು ಭೂಮಿಯ ಕಾಂತಕ್ಷೇತ್ರವನ್ನು ಕೇವಲ ದಿಕ್ಸೂಚಿಯಂತೆ ಅಲ್ಲ, ಬದಲಾಗಿ ತಮ್ಮ ಸ್ಥಾನವನ್ನು ಗುರುತಿಸುವ 'ಕಾಂತೀಯ ನಕ್ಷೆ'ಯಾಗಿ ಬಳಸುತ್ತವೆ ಎಂಬುದಕ್ಕೆ ಪ್ರಾಯೋಗಿಕ ಸಾಕ್ಷ್ಯವನ್ನು ಒದಗಿಸಿದೆ.

Read Full Story
04:35 PM (IST) Aug 22

India News Live 22nd August: ಮಗು ಗಂಡೋ, ಹೆಣ್ಣೋ ಗೊತ್ತಾಗೋದೇ 12 ವರ್ಷ ಆದ್ಮೇಲೆ! ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿರೋ ಊರಿದು

ಡೊಮಿನಿಕನ್ ರಿಪಬ್ಲಿಕ್‌ನ ಸಲೀನಾಸ್ ಎಂಬ ವಿಚಿತ್ರ ಗ್ರಾಮದಲ್ಲಿ, ಮಕ್ಕಳು ಹುಟ್ಟುವಾಗ ಹೆಣ್ಣಿನಂತೆ ಕಂಡರೂ 12 ವರ್ಷ ತುಂಬುತ್ತಿದ್ದಂತೆ ಗಂಡಾಗಿ ಬದಲಾಗುತ್ತಾರೆ. 'ಗೆವೆಡೋಸಸ್' ಎಂದು ಕರೆಯಲ್ಪಡುವ ಈ ವಿದ್ಯಮಾನವು 5-ಆಲ್ಫಾ-ರಿಡಕ್ಟೇಸ್ ಎಂಬ ಎಂಜೈಮ್ ಕೊರತೆಯಿಂದ ಉಂಟಾಗುವ ಅಪರೂಪದ ತಳೀಯ ಅಸ್ವಸ್ಥತೆಯಾಗಿದೆ. ಈ ಕುರಿತ ಸಂಶೋಧನೆಯು ವೈದ್ಯಕೀಯ ಲೋಕದಲ್ಲಿ ಹೊಸ ಔಷಧಿಗಳ ಆವಿಷ್ಕಾರಕ್ಕೆ ಕಾರಣವಾಗಿದೆ.
Read Full Story
04:30 PM (IST) Aug 22

India News Live 22nd August: ಮೆಗಾ158 ಅಲ್ಲ... ಇನ್ಮುಂದೆ ‘ಕಾಕ’ - ಹುಟ್ಟುಹಬ್ಬದಂದು ಚಿರಂಜೀವಿ ಹೊಸ ಸಿನಿಮಾದ ಟೈಟಲ್ ರಿವೀಲ್

ಮೆಗಾಸ್ಟಾರ್ ಚಿರಂಜೀವಿ ಅವರ 70ನೇ ಹುಟ್ಟುಹಬ್ಬದ ದಿನ ಅವರ ಮುಂದಿನ ಸಿನಿಮಾ Mega158ಗೆ 'ಕಾಕ' ಎಂದು ಹೆಸರಿಡಲಾಗಿದೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದ ಗ್ಲಿಂಪ್ಸ್‌ನಲ್ಲಿ ಚಿರಂಜೀವಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
04:17 PM (IST) Aug 22

India News Live 22nd August: ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಬಿಟ್ಟು ಜನರಿಂದ ಛೀಮಾರಿ ಹಾಕಿಸಿಕೊಂಡ ಕೇರಳ ಸರ್ಕಾರ

ಕೇರಳ ಸರ್ಕಾರವು ಆಲಪ್ಪುಳದಿಂದ ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆದರೆ, ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ಬೆಂಗಳೂರಿಗೆ ವಲಸೆ ಹೋಗಲು ಪ್ರೋತ್ಸಾಹಿಸುತ್ತಿದೆ ಎಂದು ಕೇರಳದ ಯುವ ಸಮುದಾಯವೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Read Full Story
04:14 PM (IST) Aug 22

India News Live 22nd August: FDI ದೇಶದ ನೆರೆ ರಾಷ್ಟ್ರಗಳಿಗೆ ಬಿಗ್ ಆಫರ್, ಭಾರತಕ್ಕೆ ಹರಿದುಬಂತು ₹4,895 ಕೋಟಿ ವಿದೇಶಿ ಹಣ!

ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳಿಗೆ ಹೂಡಿಕೆ ನಿಯಮಗಳನ್ನು ಸಡಿಲಗೊಳಿಸಿದ ನಂತರ, ದೇಶಕ್ಕೆ ₹4,895 ಕೋಟಿ ಮೌಲ್ಯದ ವಿದೇಶಿ ನೇರ ಹೂಡಿಕೆ (FDI) ಬಂದಿದೆ. ಈ ಹೂಡಿಕೆಗಳು ಐಟಿ, ಉತ್ಪಾದನೆ, ಮತ್ತು ಫಾರ್ಮಾದಂತಹ ಕ್ಷೇತ್ರಗಳಲ್ಲಿ ಬಂದಿದ್ದು, ಶೇ. 10ಕ್ಕಿಂತ ಕಡಿಮೆ ಪಾಲುದಾರಿಕೆಗೆ 'ಸ್ವಯಂಚಾಲಿತ ಮಾರ್ಗ'ದ ಮೂಲಕ ಅವಕಾಶ ಕಲ್ಪಿಸಲಾಗಿದೆ.
Read Full Story
03:59 PM (IST) Aug 22

India News Live 22nd August: ಎಂತ ಕಷ್ಟ ಬಂತು! ರಸ್ತೆ ಬದಿ ಕೂತು ತರಕಾರಿ ಮಾರಾಟಕ್ಕೆ ಇಳಿದ ನಟ; ವಿಡಿಯೋ ವೈರಲ್!

ಕಾಲಿವುಡ್ ನಟ ವಿಮಲ್ ತಮ್ಮ ಸ್ವಂತ ಊರಿನ ಸಂತೆಯಲ್ಲಿ ತರಕಾರಿ ವ್ಯಾಪಾರಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶೂಟಿಂಗ್ ವೇಳೆ ಸ್ಥಳೀಯ ವ್ಯಾಪಾರಿಗಳೊಂದಿಗೆ ಬೆರೆತು, ಅವರಿಗೆ ಆರ್ಥಿಕ ಸಹಾಯವನ್ನೂ ಮಾಡಿ ತಮ್ಮ ಸರಳತೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
Read Full Story
03:31 PM (IST) Aug 22

India News Live 22nd August: ರೀಲ್ಸ್‌ ನೋಡಿದ್ರೆ ನಿಮ್ಮ ಮೆದುಳು ಡಮಾರ್‌! ಭಯಾನಕ ಸತ್ಯ ಬಿಚ್ಚಿಟ್ಟ ಹೊಸ ಸಂಶೋಧನೆ..!

ಶಾರ್ಟ್ಸ್, ರೀಲ್ಸ್‌ಗಳಂತಹ ಕಿರು ವಿಡಿಯೋಗಳನ್ನು ಅತಿಯಾಗಿ ನೋಡೋದ್ರಿಂದ ಮೆದುಳಿನ ಪ್ರಿಫ್ರಂಟಲ್ ಭಾಗದ ಮೇಲೆ ಪರಿಣಾಮ ಉಂಟಾಗಿ, ಏಕಾಗ್ರತೆ, ಸ್ವಯಂ ನಿಯಂತ್ರಣದ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳ ಅಗತ್ಯವಿದ್ದರೂ, ಮಾನಸಿಕ ಗಮನ ಮತ್ತು ಬೌದ್ಧಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಬೈಲ್ ಬಳಕೆಯ ಸಮಯ ಮಿತಿಗೊಳಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸಿದ್ದಾರೆ.

Read Full Story