ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಬಿಟ್ಟು ಜನರಿಂದ ಛೀಮಾರಿ ಹಾಕಿಸಿಕೊಂಡ ಕೇರಳ ಸರ್ಕಾರ
ಕೇರಳ ಸರ್ಕಾರವು ಆಲಪ್ಪುಳದಿಂದ ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆದರೆ, ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ಬೆಂಗಳೂರಿಗೆ ವಲಸೆ ಹೋಗಲು ಪ್ರೋತ್ಸಾಹಿಸುತ್ತಿದೆ ಎಂದು ಕೇರಳದ ಯುವ ಸಮುದಾಯವೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೇರಳಂ ಸರ್ಕಾರಕ್ಕೆ ಛೀಮಾರಿ
ಇತ್ತೀಚೆಗಷ್ಟೇ ಕೇರಳಂ ಸರ್ಕಾರ ಆಲಪ್ಪುಳದಿಂದ ಬೆಂಗಳೂರಿಗೆ ಲಕ್ಷುರಿಯಾದ ಬಸ್ ಆರಂಭಿಸಿದೆ. ಕೇರಳ ಪ್ರಯಾಣಿಕರು ಈ ಬಸ್ ಮೂಲಕ ಬೆಂಗಳೂರಿಗೆ ತೆರಳಬಹುದು ಎಂಬ ಸಂದೇಶವುಳ್ಳ ಮಾಹಿತಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಆದ್ರೆ ಈ ಬಸ್ ಆರಂಭಕ್ಕೆ ಕೇರಳಿಗರೇ ತಮ್ಮ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
ಕೇರಳದಲ್ಲಿ ಉದ್ಯೋಗ ಸೃಷ್ಟಿಯ ಕೂಗು
ಕೇರಳದ ಬಹುತೇಕರು ಉದ್ಯೋಗ ಅರಸಿ ಬೆಂಗಳೂರಿನತ್ತ ಮುಖ ಮಾಡುತ್ತಾರೆ. ಮತ್ತೆ ಕೆಲವರು ಗಲ್ಫ್ ರಾಷ್ಟಗಳಿಗೆ ತೆರಳುತ್ತಾರೆ. ಕೇರಳದಲ್ಲಿ ಉದ್ಯೋಗ ಸೃಷ್ಟಿ ಆಗಬೇಕೆಂಬ ಕೂಗು ಕೇಳಿ ಬರುತ್ತಿರುತ್ತದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇರಳಂ ಸರ್ಕಾರದಿಂದ ಬೆಂಗಳೂರಿಗೆ ಬಸ್ ಬಿಟ್ಟಿರೋದಕ್ಕೆ ಯುವ ಸಮುದಾಯ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮಲ್ಲಿ ಕೆಲಸ ಇಲ್ಲವಾ?
Chief Minister Keralam ಎಕ್ಸ್ ಖಾತೆಯಲ್ಲಿ ನೂತನ್ ಬಸ್ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಳಕೆದಾರರು, ಬೆಂಗಳೂರಿಗೆ ಬಸ್ ಒದಗಿಸಿದ್ದು ನಿಮ್ಮ ಸಾಧನೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಬಿಹಾರಗಿಂತ ಕೇರಳ ರಾಜ್ಯ ಶ್ರೀಮಂತರಾಗಿದ್ರೂ ಜನರು ಕೆಲಸಕ್ಕಾಗಿ ಪಕ್ಕದ ರಾಜ್ಯಕ್ಕೆ ಯಾಕೆ ಹೋಗ್ತಾರೆ ಎಂಬುದನ್ನು ತಿಳಿದುಕೊಂಡು ಸಮಸ್ಯೆಯನ್ನು ಪರಿಹಾರ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಶೇ.100ರಷ್ಟು ಸಾಕ್ಷರತೆ ಇದ್ರೂ ಏನು ಪ್ರಯೋಜನ?
ಈ ಬಸ್ ಮೂಲಕ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಅಂತ ಹೇಳ್ತಿದ್ದೀರಾ ಎಂದು ಪ್ರಶ್ನೆ ಮಾಡಿರುವ ಜನರು, ಶೇ.100ರಷ್ಟು ಸಾಕ್ಷರತೆ ಹೊಂದಿರುವ ರಾಜ್ಯ ಆಗಿದ್ದರೂ ಇಲ್ಲಿ ಕೆಲಸ ಇಲ್ಲ ಎಂದಿದ್ದಾರೆ. ಇನ್ನು ಇದೇ ಟ್ವೀಟ್‌ಗೆ ಕೆಲ ಕನ್ನಡಿಗರು ತಮ್ಮ ಅಭಿಪ್ರಾಯುವನ್ನು ವ್ಯಕ್ತಪಡಿಸಿದ್ದಾರೆ.
ನಿಮ್ಮ ರಾಜ್ಯದಲ್ಲಿಯೇ ಉದ್ಯೋಗ ನೀಡಿ
ದಯವಿಟ್ಟು ನಿಮ್ಮ ರಾಜ್ಯದಲ್ಲಿಯೇ ಕೇರಳಿಗರಿಗೆ ಉದ್ಯೋಗಗಳನ್ನು ಸೃಷ್ಟಿಸಿ. ಬೆಂಗಳೂರಿಗೆ/ಕರ್ನಾಟಕಕ್ಕೆ ಕೆಲಸಗಾರರನ್ನು ರಫ್ತು ಮಾಡುವುದನ್ನು ನಿಲ್ಲಿಸಿ. ನೀವು ಯಶಸ್ವಿಯಾದರೆ, ಅದು ನಿಮ್ಮ ನಿಜವಾದ ಸಾಧನೆಯಾಗುತ್ತದೆ. ಈ ರೀತಿಯ ತೋರಿಕೆಯ ಸಾಧನೆಗಳಿಂದ ಅಭಿವೃದ್ಧಿ ಆಗಲ್ಲ. ಅಭಿವೃದ್ಧಿಯ ಕೊರತೆಯಿಂದಾಗಿ ಕೇರಳದ ಜನರು ವಲಸೆ ಹೋಗುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

