MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Viral News
  • ವಿಜ್ಞಾನವನ್ನೂ ಬೆಚ್ಚಿಬೀಳಿಸಿದ 7 ನಿಗೂಢ ರಹಸ್ಯಗಳು; ಜಗತ್ತನ್ನು ಕಾಡುತ್ತಿರುವ ಪ್ರಶ್ನೆಗಳು

ವಿಜ್ಞಾನವನ್ನೂ ಬೆಚ್ಚಿಬೀಳಿಸಿದ 7 ನಿಗೂಢ ರಹಸ್ಯಗಳು; ಜಗತ್ತನ್ನು ಕಾಡುತ್ತಿರುವ ಪ್ರಶ್ನೆಗಳು

ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಜಗತ್ತಿನಲ್ಲಿ ಇಂದಿಗೂ ಉತ್ತರ ಸಿಗದ ಹಲವಾರು ನಿಗೂಢ ರಹಸ್ಯಗಳಿವೆ. ಡಯಾಟ್ಲೋವ್ ಪಾಸ್ ಘಟನೆ, ಮೇರಿ ಸೆಲೆಸ್ಟ್ ಹಡಗಿನ ಸಿಬ್ಬಂದಿ ನಾಪತ್ತೆ, ಮತ್ತು ವೋಯ್ನಿಚ್ ಹಸ್ತಪ್ರತಿಯಂತಹ 7 ಘಟನೆಗಳು ವಿಜ್ಞಾನಿಗಳಿಗೆ ಮತ್ತು ಇತಿಹಾಸಕಾರರಿಗೆ ಇಂದಿಗೂ ಸವಾಲಾಗಿ ಉಳಿದಿವೆ.

2 Min read
Author : Mahmad Rafik
Published : Aug 22 2026, 05:53 PM IST
Share this Photo Gallery
  • FB
  • TW
  • Linkdin
  • Whatsapp
17
ಉತ್ತರ ಸಿಗದ ಕೆಲವು ಪ್ರಶ್ನೆ 7 ನಿಗೂಢ ರಹಸ್ಯ
Image Credit : stockPhoto

ಉತ್ತರ ಸಿಗದ ಕೆಲವು ಪ್ರಶ್ನೆ-7 ನಿಗೂಢ ರಹಸ್ಯ

ಮನುಷ್ಯ ಎಷ್ಟೇ ತಂತ್ರಜ್ಞಾನದಲ್ಲಿ ಮುಂದುವರೆದರೂ, ಜಗತ್ತಿನಲ್ಲಿ ಇಂದಿಗೂ ಉತ್ತರ ಸಿಗದ ಕೆಲವು ಪ್ರಶ್ನೆಗಳಿವೆ. ವಿಜ್ಞಾನಿಗಳು ಮತ್ತು ಇತಿಹಾಸಕಾರರು ವರ್ಷಗಟ್ಟಲೆ ಸಂಶೋಧನೆ ನಡೆಸಿದರೂ, ಕೆಲವು ರಹಸ್ಯಗಳು ಮಾತ್ರ ನಿಗೂಢವಾಗಿಯೇ ಉಳಿದಿವೆ. ಈ 7 ಘಟನೆಗಳಲ್ಲಿ ಕೆಲವಕ್ಕೆ ಉತ್ತರ ಸಿಗುವ ಸೂಚನೆಗಳಿದ್ದರೂ, ಪೂರ್ಣ ಸಾಕ್ಷ್ಯಗಳಿಲ್ಲದೆ ಇಂದಿಗೂ ನಿಗೂಢವಾಗಿಯೇ ಉಳಿದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಡಯಾಟ್ಲೋವ್ ಪಾಸ್ ಘಟನೆ – ಅಸಲಿಗೆ ಅಲ್ಲಿ ಏನಾಗಿತ್ತು?
Image Credit : Asianet News

ಡಯಾಟ್ಲೋವ್ ಪಾಸ್ ಘಟನೆ – ಅಸಲಿಗೆ ಅಲ್ಲಿ ಏನಾಗಿತ್ತು?

1959ರಲ್ಲಿ ರಷ್ಯಾದ ಉರಲ್ ಪರ್ವತಗಳಲ್ಲಿ ಸ್ಕೀಯಿಂಗ್‌ಗೆ ಹೋದ 9 ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರ ಟೆಂಟ್ ಒಳಗಿನಿಂದ ಹರಿದಿತ್ತು. ಕೆಲವರ ದೇಹದ ಮೇಲೆ ತೀವ್ರ ಗಾಯಗಳಾಗಿದ್ದು, ಇದು ದೊಡ್ಡ ರಹಸ್ಯವಾಗಿತ್ತು. ಹಿಮಕುಸಿತ, ಭಯಾನಕ ಹವಾಮಾನದಂತಹ ಹಲವು ಸಿದ್ಧಾಂತಗಳಿವೆ. ಇತ್ತೀಚಿನ ಸಂಶೋಧನೆಗಳು ಹಿಮಕುಸಿತದ ಸಾಧ್ಯತೆಯನ್ನು ಹೇಳಿದರೂ, ಈ ಘಟನೆಯ ಪ್ರತಿಯೊಂದು ಅಂಶಕ್ಕೂ ಇಂದಿಗೂ ಒಂದೇ ಉತ್ತರ ಸಿಕ್ಕಿಲ್ಲ.

Related Articles

Related image1
ಮಗು ಗಂಡೋ, ಹೆಣ್ಣೋ ಗೊತ್ತಾಗೋದೇ 12 ವರ್ಷ ಆದ್ಮೇಲೆ! ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿರೋ ಊರಿದು
Related image2
ಭೂಮಿಯ ಕಾಂತಕ್ಷೇತ್ರ ಗ್ರಹಿಸುವ ಬಾನೆಟ್‌ಹೆಡ್ ಶಾರ್ಕ್‌ಗಳು: ಸಾಗರದ ಅದೃಶ್ಯ 'ಜಿಪಿಎಸ್' ರಹಸ್ಯ ಭೇದಿಸಿದ ವಿಜ್ಞಾನಿಗಳು!
37
ಮೇರಿ ಸೆಲೆಸ್ಟ್ – ಸಿಬ್ಬಂದಿ ಎಲ್ಲಿಗೆ ಹೋದರು?
Image Credit : Getty

ಮೇರಿ ಸೆಲೆಸ್ಟ್ – ಸಿಬ್ಬಂದಿ ಎಲ್ಲಿಗೆ ಹೋದರು?

1872ರಲ್ಲಿ ಅಟ್ಲಾಂಟಿಕ್ ಮಹಾಸಾಗರದಲ್ಲಿ 'ಮೇರಿ ಸೆಲೆಸ್ಟ್' ಎಂಬ ಹಡಗು ಪತ್ತೆಯಾಗಿತ್ತು. ಹಡಗಿಗೆ ಹೆಚ್ಚು ಹಾನಿಯಾಗಿರಲಿಲ್ಲ, ಸರಕು ಕೂಡಾ ಹಾಗೆಯೇ ಇತ್ತು. ಆದರೆ, ಹಡಗಿನಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ನಾಪತ್ತೆಯಾಗಿದ್ದರು. ಅವರು ಎಲ್ಲಿಗೆ ಹೋದರು? ಏನಾದರು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಮುದ್ರದ ಬಿರುಗಾಳಿಯಿಂದ ಹಿಡಿದು ಹಡಗಿನೊಳಗಿನ ಅಪಘಾತದವರೆಗೆ ಹಲವು ಕಾರಣಗಳನ್ನು ಹೇಳಲಾಗುತ್ತದೆಯಾದರೂ, ನಿಜವಾದ ಕಾರಣ ನಿಗೂಢವಾಗಿಯೇ ಉಳಿದಿದೆ.

47
ಬ್ಲ್ಯಾಕ್ ಡಾಲಿಯಾ ಹ*ತ್ಯೆ – ಹಂತಕ ಯಾರು?
Image Credit : getty

ಬ್ಲ್ಯಾಕ್ ಡಾಲಿಯಾ ಹ*ತ್ಯೆ – ಹಂತಕ ಯಾರು?

1947ರಲ್ಲಿ ಅಮೆರಿಕದಲ್ಲಿ ಎಲಿಜಬೆತ್ ಶಾರ್ಟ್ ಎಂಬ ಯುವತಿಯ ಹ*ತ್ಯೆ ಪ್ರಕರಣ 'ಬ್ಲ್ಯಾಕ್ ಡಾಲಿಯಾ' ಎಂದೇ ಪ್ರಸಿದ್ಧವಾಯಿತು. ತನಿಖಾ ಸಂಸ್ಥೆಗಳು ಎಷ್ಟೇ ಪ್ರಯತ್ನಿಸಿದರೂ, ಹಂತಕ ಯಾರೆಂದು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಈ ಪ್ರಕರಣ ಇಂದಿಗೂ ಅಮೆರಿಕದ ಬಗೆಹರಿಯದ ಹತ್ಯಾ ರಹಸ್ಯಗಳಲ್ಲಿ ಒಂದಾಗಿದೆ.

57
ಅಮೆಲಿಯಾ ಇಯರ್‌ಹಾರ್ಟ್ ನಾಪತ್ತೆ
Image Credit : stockPhoto

ಅಮೆಲಿಯಾ ಇಯರ್‌ಹಾರ್ಟ್ ನಾಪತ್ತೆ

ವಿಶ್ವಪ್ರಸಿದ್ಧ ಪೈಲಟ್ ಅಮೆಲಿಯಾ ಇಯರ್‌ಹಾರ್ಟ್, 1937ರಲ್ಲಿ ಜಗತ್ತನ್ನು ಸುತ್ತುವ ಪ್ರಯತ್ನದಲ್ಲಿ ವಿಮಾನದೊಂದಿಗೆ ಕಣ್ಮರೆಯಾದರು. ಅವರ ವಿಮಾನ ಎಲ್ಲಿ ಪತನವಾಯಿತು? ಅವರಿಗೇನಾಯಿತು? ಎಂಬ ಪ್ರಶ್ನೆಗಳಿಗೆ ದಶಕಗಳಿಂದಲೂ ಉತ್ತರ ಹುಡುಕಲಾಗುತ್ತಿದೆ. ಆದರೆ, ಇಂದಿಗೂ ಯಾವುದೇ ಖಚಿತ ಸಾಕ್ಷ್ಯ ಸಿಕ್ಕಿಲ್ಲ.

67
ಟಾವೋಸ್ ಹಮ್ – ಈ ಶಬ್ದ ಎಲ್ಲಿಂದ ಬರುತ್ತದೆ?
Image Credit : stringer

ಟಾವೋಸ್ ಹಮ್ – ಈ ಶಬ್ದ ಎಲ್ಲಿಂದ ಬರುತ್ತದೆ?

ಜಗತ್ತಿನ ಕೆಲವು ಪ್ರದೇಶಗಳಲ್ಲಿ ಜನರು ಒಂದು ವಿಚಿತ್ರ, ಕಡಿಮೆ ಸ್ಥಾಯಿಯ ಶಬ್ದವನ್ನು ಕೇಳುತ್ತಿರುವುದಾಗಿ ಹೇಳುತ್ತಾರೆ. ಅಮೆರಿಕದ ನ್ಯೂ ಮೆಕ್ಸಿಕೋದ ಟಾವೋಸ್ ಪ್ರದೇಶದಲ್ಲಿ ಕೇಳಿಬಂದ ಈ ಶಬ್ದವನ್ನು 'ಟಾವೋಸ್ ಹಮ್' ಎನ್ನುತ್ತಾರೆ. ಕೆಲವೇ ಜನರಿಗೆ ಕೇಳಿಸುವ ಈ ಶಬ್ದಕ್ಕೆ ಕೈಗಾರಿಕೆಗಳು, ಹವಾಮಾನ ಅಥವಾ ಕಿವಿಯೊಳಗಿನ ಆಂತರಿಕ ಶಬ್ದಗಳೇ ಕಾರಣ ಎನ್ನಲಾಗುತ್ತದೆಯಾದರೂ, ನಿಜವಾದ ಕಾರಣ ಯಾರಿಗೂ ತಿಳಿದಿಲ್ಲ

77
Voynich Manuscript ವೋಯ್ನಿಚ್ ಹಸ್ತಪ್ರತಿ
Image Credit : Chat Gpt

Voynich Manuscript ವೋಯ್ನಿಚ್ ಹಸ್ತಪ್ರತಿ

ಹಲವು ಶತಮಾನಗಳಷ್ಟು ಹಳೆಯದಾದ ಈ ವಿಚಿತ್ರ ಪುಸ್ತಕ ಇಂದಿಗೂ ಭಾಷಾ ತಜ್ಞರಿಗೆ ಸವಾಲಾಗಿದೆ. ಇದನ್ನು 'ವೋಯ್ನಿಚ್ ಹಸ್ತಪ್ರತಿ' ಎಂದು ಕರೆಯುತ್ತಾರೆ. ಇದರಲ್ಲಿ ಗುರುತಿಸಲಾಗದ ಲಿಪಿ, ವಿಚಿತ್ರ ಸಸ್ಯಗಳು, ಖಗೋಳ ಕಾಯಗಳು ಮತ್ತು ಆಕೃತಿಗಳಿವೆ. ಈ ಪುಸ್ತಕವನ್ನು ಯಾರು, ಯಾವ ಭಾಷೆಯಲ್ಲಿ ಬರೆದರು? ಇದರಲ್ಲಿರುವ ಮಾಹಿತಿಯ ಅರ್ಥವೇನು? ಎಂಬ ಪ್ರಶ್ನೆಗಳಿಗೆ ಇಂದಿಗೂ ನಿಖರ ಉತ್ತರ ಸಿಕ್ಕಿಲ್ಲ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವೈರಲ್ ಸುದ್ದಿ

Latest Videos
Recommended Stories
Recommended image1
ರೀಲ್ಸ್‌ ನೋಡಿದ್ರೆ ನಿಮ್ಮ ಮೆದುಳು ಡಮಾರ್‌! ಭಯಾನಕ ಸತ್ಯ ಬಿಚ್ಚಿಟ್ಟ ಹೊಸ ಸಂಶೋಧನೆ..!
Recommended image2
ಇವ್ರು ನಮ್ಮ ಚೀಫ್ ಆಫೀಸರ್, ಮೆಟ್ರೋ ನಿಲ್ದಾಣದ ವೈರಲ್ ಬೆಕ್ಕಿಗೆ ಹುದ್ದೆ ಕೊಟ್ಟ ಮೆಟ್ರೋ ಲಿಮಿಟೆಡ್
Recommended image3
ಸಿಎಂ ಹೆಗಲ ಮೇಲೆ ಕೈ ಹಾಕಿ ಜಪಾನ್ ವಿದ್ಯಾರ್ಥಿಗಳು ಸೆಲ್ಫಿ ಫೋಟೋ! ವೈರಲ್ ವಿಡಿಯೋ
Related Stories
Recommended image1
ಮಗು ಗಂಡೋ, ಹೆಣ್ಣೋ ಗೊತ್ತಾಗೋದೇ 12 ವರ್ಷ ಆದ್ಮೇಲೆ! ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿರೋ ಊರಿದು
Recommended image2
ಭೂಮಿಯ ಕಾಂತಕ್ಷೇತ್ರ ಗ್ರಹಿಸುವ ಬಾನೆಟ್‌ಹೆಡ್ ಶಾರ್ಕ್‌ಗಳು: ಸಾಗರದ ಅದೃಶ್ಯ 'ಜಿಪಿಎಸ್' ರಹಸ್ಯ ಭೇದಿಸಿದ ವಿಜ್ಞಾನಿಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved