ಕಾಲಿವುಡ್ ನಟ ವಿಮಲ್ ತಮ್ಮ ಸ್ವಂತ ಊರಿನ ಸಂತೆಯಲ್ಲಿ ತರಕಾರಿ ವ್ಯಾಪಾರಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶೂಟಿಂಗ್ ವೇಳೆ ಸ್ಥಳೀಯ ವ್ಯಾಪಾರಿಗಳೊಂದಿಗೆ ಬೆರೆತು, ಅವರಿಗೆ ಆರ್ಥಿಕ ಸಹಾಯವನ್ನೂ ಮಾಡಿ ತಮ್ಮ ಸರಳತೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಸಿನಿಮಾ ಕಲಾವಿದರು ತೆರೆಯ ಮೇಲೆ ಗ್ಲಾಮರ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿ ಕೆಲವೊಮ್ಮೆ ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಿದೆ. ಬಣ್ಣದ ಪ್ರಪಂಚಕ್ಕೆ, ಪ್ರಚಾರಕ್ಕೆ ದೂರವಾಗಿ ಸಾಮಾನ್ಯ ಪ್ರಜೆಗಳಿಗೆ ಹತ್ತಿರವಾಗಿ ಜೀವನ ನಡೆಸುತ್ತಾರೆ. ಕಾಲಿವುಡ್ ನಟ ವಿಮಲ್ ವಿಚಾರದಲ್ಲಿ ಇದೇ ನಡೆದಿದೆ. ತಮ್ಮ ಸ್ವತಃ ಊರಿನಲ್ಲಿ ಅವರು ಮಾಡಿದ ಒಂದು ಕೆಲಸ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಓರ್ವ ಸಿನಿಮಾ ಹೀರೋ ಆಗಿ ಯಾವುದೇ ಹಂಗಮಾ ಇಲ್ಲದೆ, ಸ್ಥಳೀಯ ಸಂತೆಯೊಂದರಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.

ಸಂತೆಯಲ್ಲಿ ತರಕಾರಿ ಮಾರಿದ ನಟ ವಿಮಲ್: ಅಚ್ಚರಿಯ ಕಾರಣ

ಘಟನೆ ವಿವರಗಳಿಗೆ ಹೋದರೆ, ತಮಿಳುನಾಡಿನ ತಿರುಚನಾಪಳ್ಳಿಯ ಮನಪ್ಪರೈ ಸಮೀಪದ ಸ್ವತಃ ಊರಿನಲ್ಲಿ ವಿಮಲ್‌ ಒಂದು ಸಿನಿಮಾ ಶೂಟಿಂಗ್ಗಾಗಿ ತೆರಳಿದ್ದರು. ಈ ವೇಳೆ ಅಲ್ಲಿ ನಡೆಯುತ್ತಿದ್ದ ಸಂತೆಗೆ ಹೋಗಿದ್ದರು. ಅಲ್ಲಿಗೆ ಕೇವಲ ಬಂದು ಹೋಗದೆ, ನೇರವಾಗಿ ಅಲ್ಲಿಯ ಸಣ್ಣ ವ್ಯಾಪಾರಿಗಳ ಪಕ್ಕದಲ್ಲೇ ಕುಳಿತುಕೊಂಡು ತರಕಾರಿ ಮಾರಾಟ ಆರಂಭಿಸಿದ್ದರು. ನಟ ಏಕಾಏಕಿ ಸಂತೆಗೆ ಬಂತು ಆತ್ಮೀಯವಾಗಿ ಮಾತನಾಡಿ, ತಮ್ಮೊಂದಿಗೆ ಬೆರೆತು ನಡೆದುಕೊಂಡಿದ್ದು ಅಲ್ಲಿನ ಸ್ಥಳೀಯರಿಗೆ ಅಚ್ಚರಿಯೊಂದಿಗೆ ಸಂತಸವನ್ನು ನೀಡಿತ್ತು.

ನಟ ವಿಮಲ್ ಮಾರುಕಟ್ಟೆಯಲ್ಲಿದ್ದ ಸಾಮಾನ್ಯ ರೈತರು ಮತ್ತು ವ್ಯಾಪಾರಿಗಳೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಮಾರಾಟ ಕಾರ್ಯದಲ್ಲಿ ನೆರವಾದರು. ಅಷ್ಟಕ್ಕೇ ಸೀಮಿತವಾಗದೆ, ಅವರೊಂದಿಗೆ ಸ್ವಲ್ಪ ಸಮಯ ಕಳೆದ ನಂತರ, ಸ್ಥಳೀಯವಾಗಿ ಸಣ್ಣ ಪ್ರಮಾಣದ ವ್ಯಾಪಾರ ನಡೆಸುವ ಹಲವರಿಗೆ ತಲಾ ₹500 ರಷ್ಟು ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಉದಾರತೆಯನ್ನು ಮೆರೆದರು. ಎಷ್ಟೇ ಬೆಳೆದರೂ, ತನ್ನ ಮೂಲವನ್ನು ಮರೆಯಬಾರದು. ಸ್ವತಃ ಊರಿನ ಜನರನ್ನು ಮರತೆಯದೆ ಅವರ ಪಕ್ಕ ಕುಳಿತುಕೊಂಡು ಸ್ಥಳೀಯರ ಮನಗೆದಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿರು ನಟಯ ಸರಳತೆಗೆ ಮೆಚ್ಚುಗೆ ಸೂಚಿಸಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಚೆಕ್ ಬೌನ್ಸ್ ಕೇಸ್, ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಇತ್ತೀಚೆಗೆ ಒಂದು ವಿವಾದದಲ್ಲಿ ಸುಲುಕಿಕೊಂಡಿದ್ದ ವಿಮಲ್ ಭಾರೀ ಸುದ್ದಿಯಾಗಿದ್ದರು. 4.5 ಕೋಟಿ ವ್ಯವಹಾರದಲ್ಲಿ ಚೆಕ್ ಬೌನ್ಸ್ ಆಗುವುದರೊಂದಿಗೆ ಕೋರ್ಟ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಇದನ್ನು ಮೇಲ್ಮನವಿ ಮಾಡಿದ ನಂತರ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ಇಂತಹ ಒತ್ತಡ, ವಿವಾದಗಳ ನಡುವೆ ತಮ್ಮ ಸ್ವಗ್ರಾಮದಲ್ಲಿ ಜನಸಾಮಾನ್ಯರೊಂದಿಗೆ ಎಷ್ಟೋ ಸಂತಸದಿಂದ ಸಮಯ ಕಳೆದಿದ್ದಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ವಿಮಲ್, ಸ್ಕ್ರೀನ್ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ತಾವು ಬಹಳ ಸರಳ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

View post on Instagram