ಕೇಂದ್ರ ಸರ್ಕಾರವು ಟಿವಿ ಚಾನೆಲ್‌ಗಳಲ್ಲಿನ ಜಾಹೀರಾತು ಸಮಯದ ಮಿತಿಯನ್ನು ರದ್ದುಗೊಳಿಸಿದೆ. ಈ ಹಿಂದೆ ಗಂಟೆಗೆ 12 ನಿಮಿಷಗಳ ಜಾಹೀರಾತು ಮಿತಿ ಇದ್ದು, ಈಗ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳ ತಿದ್ದುಪಡಿಯೊಂದಿಗೆ ಈ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
TV Advertisements: ಟೆಲಿವಿಷನ್ ಪ್ರೇಕ್ಷಕರಿಗೆ, ಮುಖ್ಯವಾಗಿ ಧಾರಾವಾಹಿ, ಸಿನಿಮಾ, ಸುದ್ದಿಗಳು ಹಾಗೂ ನ್ಯೂಸ್ ನೋಡುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಇದುವರೆಗೂ ಒಂದು ಗಂಟೆಗೆ ಇಷ್ಟು ನಿಮಿಷ ಮಾತ್ರ ಜಾಹೀರಾತು ಮಾತ್ರ ನೀಡಬೇಕು ಎಂಬ ಕಠಿಣ ನಿಯಮಗಳು ಇತ್ತು. ಆದರೆ ಈಗ ಈ ನಿಯಮವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈಗ ಸಂಪೂರ್ಣವಾಗಿ ರದ್ದು ಮಾಡಿದೆ. ಇದಕ್ಕೆ ಸಂಬಂಧಿಸಿದ ಕೇವಲ್ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು 2026 ಅಡಿಯಲ್ಲಿ ಹೊಸ ತಿದ್ದುಪಡಿ ಪ್ರಕಟಿಸಿದೆ.
ಟಿವಿ ಜಾಹೀರಾತು: ಪ್ರೇಕ್ಷಕರಿಗೆ ಕಾದಿದೆಯೇ ಶಾಕ್?
ಟಿವಿ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಮೇಲೆ 2006ರಲ್ಲಿ ಒಂದು ಪ್ರಮುಖ ನಿರ್ಧಾರ ಕೈಗೊಂಡಿತ್ತು. 'ಕೇಬಲ್ ಟೆಲಿಷನ್ ನೆಟ್‌ವರ್ಕ್‌ಗಳು, 1994 ನಿಯಮ 7, ಉಪನಿಯಮ (11)'ರ ಅಡಿ ಜಾರಿ ಮಾಡಲಾಗಿತ್ತು. ಇದರ ಅನ್ವಯ ಅನ್ವಯ ಯಾವುದೇ ಟಿವಿ ಚಾನೆಲ್ ಆದರೂ ಗಂಟೆಗೆ ಕೇವಲ 12 ನಿಮಿಷಕ್ಕಿಂತ ಕಡಿಮೆ ಸಮಯ ಪ್ರಸಾರ ಮಾಡಬೇಕಿದೆ. ಅಂದರೆ ಪ್ರೇಕ್ಷಕರು ನೋಡುವ ಸಮಯದಲ್ಲಿ 48 ನಿಮಿಷಗಳಲ್ಲಿ ಕಂಟೆಂಟ್ ಇದ್ದರೆ, 12 ನಿಮಿಷ ಮಾತ್ರ ಜಾಹೀರಾತು ಇರ್ಬೇಕು.
ಮೊದಲು ನಿಯಮಗಳು ಏನಿತ್ತು?
ಆದರೆ, ಈಗ ಪರಿಸ್ಥಿತಿಗಳು ಬದಲಾವಣೆಯಾಗಿದೆ. ಬಹಳ ವಿಭಿನ್ನವಾದ ಮಾರುಕಟ್ಟೆ ವ್ಯವಸ್ಥೆ ಇದೆ. 2006ರಲ್ಲಿ ದೇಶದಲ್ಲಿ ಕೇವಲ 62 ಟಿವಿ ಚಾನೆಲ್‌ಗಳು ಮಾತ್ರ ಇತ್ತು. ಆದರೆ ಈಗ ಈ ಸಂಖ್ಯೆ 900ಕ್ಕೂ ಹೆಚ್ಚಾಗಿದೆ. ಇದರೊಂದಿಗೆ ಹಳೆ ರೂಲ್ಸ್ ರದ್ದು ಮಾಡಿರುವ ಸರ್ಕಾರ, ಈ 12 ನಿಮಿಷಗಳ ಮೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.
ಡಿಜಿಟಲ್ ಕ್ರಾಂತಿ ಸೃಷ್ಟಿಸುತ್ತಾ ಹೊಸ ನಿಯಮಗಳು
ಕೆಲವು ಸಂದರ್ಭದಲ್ಲಿ ಕೇಬುಲ್ ಮೂಲಕ ಬರುವ ಚಾನೆಲ್‌ಗಳು ಸೀಮಿತವಾಗಿರುತ್ತಿತ್ತು. ಕ್ವಾಲಿಟಿ ಕೂಡ ಕಡಿಮೆ ಇರುತ್ತಿತ್ತು. ಆದರೆ ಈಗ ಡಿಜಿಟಲ್ ಟೆಕ್ನಾಲಜಿ ಬಂದಿದ್ದು, ಡಿಟಿಎಚ್, ಐಪಿಟಿವಿ, ಕೇಬಲ್ ಮೂಲಕ ನೂರಾರು ಚಾನೆಲ್‌ಗಳು ಪ್ರಸಾರ ಆಗುತ್ತಿದೆ. ಒಂದು ಪ್ಲಾಟ್‌ಫರ್ಮ್ ಮೇಲೆ 300 ರಿಂದ 500ಕ್ಕೂ ಹೆಚ್ಚು ಚಾನೆಲ್‌ಗಳು ಪ್ರಸಾರ ಆಗುತ್ತಿದೆ. ಟಿವಿ ನೋಡುವವರು ತಮಗೆ ಇಷ್ಟ ಬಂದ ಚಾನೆಲ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಪ್ರಸಾರ ರಂಗದಲ್ಲಿ ಭಾರೀ ಪೈಪೋಟಿ ನಿರ್ಮಾಣವಾಗಿದೆ. ಈ ಬದಲಾವಣೆಗಳನ್ನ ಪರಿಗಣಿಸಿರುವ ಕೇಂದ್ರ ಸರ್ಕರ, ಈಗಿನ ಟ್ರೆಂಡ್‌ಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲ ಮಾಡಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದರಿಂದ ನ್ಯಾಯಯುತ ಸ್ಪರ್ಧೆಯನ್ನು ಸಕ್ರಿಯಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸರ್ಕಾರ ಜಾಹೀರಾತು ಅವಧಿಯ ಮಿತಿಯನ್ನು ತೆಗೆದುಹಾಕಲು ನಿರ್ಧರಿಸಿದೆ.


