08:39 AM (IST) Oct 23

India News live ಕೇರಳದಲ್ಲಿ ಭೂಕುಸಿತ - ಹಳಿ ತಪ್ಪಿದ ರೈಲು, ಸಂಚಾರ ವ್ಯತ್ಯಯ, 6 ಪ್ರಯಾಣಿಕ ರೈಲುಗಳು ರದ್ದು

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಾರಶ್ಯಾಲ ರೈಲು ನಿಲ್ದಾಣದ ಬಳಿ ಭೂಕುಸಿತ ಸಂಭವಿಸಿದೆ. ಇದರಿಂದ ಬಿಲಾಸ್‌ಪುರ-ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದು, 6 ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಪರ್ಯಾಯ ಎಂಜಿನ್ ಬಳಸಿ ರೈಲು ಸಂಚಾರ ಸರಿಪಡಿಸುವ ಕಾರ್ಯ ನಡೆಯುತ್ತಿದೆ.
Read Full Story
08:20 AM (IST) Oct 23

India News live Belonging - A Journey of Love - ಇಟಲಿಯಲ್ಲಿನ ಬಾಲ್ಯ, ರಾಜೀವ್ ಗಾಂಧಿ ಭೇಟಿ ಮತ್ತು ಕುಟುಂಬದ ದುರಂತ ಸಾವುಗಳು... ಏನೆಲ್ಲ ಇದೆ ಹೇಳುತ್ತೆ ಆತ್ಮಚರಿತ್ರೆ?

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತು ಇನ್‌ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಈ ಪುಸ್ತಕವು ಇಟಲಿಯ ಬಾಲ್ಯ, ರಾಜೀವ್ ಗಾಂಧಿ ಭೇಟಿ, ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡ ರೀತಿ ಬಗ್ಗೆ ವಿವರಿಸುತ್ತದೆ.

Read Full Story