ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ರಾತ್ರಿ ಮಲಗಿದ್ದಾಗ 12 ಅಡಿ ಉದ್ದದ ದೈತ್ಯ ಹೆಬ್ಬಾವೊಂದು ಆಕೆಯ ಹಾಸಿಗೆಗೆ ಬಂದಿದೆ. ಮುಂದೆ ಏನೆಲ್ಲ ಆಗಿಹೋಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
ಮಧ್ಯಪ್ರದೇಶ: ಒಮ್ಮೆ ಹಾಗೆ ಕಲ್ಪಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಕಾಡು ಇದೆ. ಕಾಡಿನ ಮಧ್ಯೆ ನಿಮ್ಮ ಮನೆ ಇದೆ. ರಾತ್ರಿ ಆಗಿದೆ. ಮಲಗುವ ಸಮಯ. ಹಾಸಿಗೆ ಹಾಸಿ ನಿದ್ದೆಗೆ ಜಾರಿದ್ದೂ ಆಗಿದೆ. ಮಧ್ಯರಾತ್ರಿ ನೀವು ಮಲಗಿದ್ದ ಸ್ಥಳಕ್ಕೆ ಹೆಬ್ಬಾವು ಒಂದು ಎಂಟ್ರಿ ನೀಡಿದೆ. ಕೋಣೆಯಲ್ಲಿ ನೀವು ಒಬ್ಬರೇ ಇದ್ದೀರಿ. ಈಗ ಆ ಹಾವು ನಿಮ್ಮ ಪಕ್ಕದಲ್ಲಿ ಬಂದು ಮಲಗಿದ್ರೆ ಪರಿಸ್ಥಿತಿ ಹೇಗೆಗಾಬೇಡ?
ನಿದ್ದೆಯಲ್ಲೇ ಹೌಹಾರಿ ಇಡೀ ಊರಿಗೆ ಕೂಗುವಂತೆ ಬೆಚ್ಚಿಬೀಳೋದು ಗ್ಯಾರಂಟಿ ಅಲ್ವಾ? ಅದೇ ರೀತಿಯ ಘಟನೆ ಇದೀಗ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ರೇವಾದಲ್ಲಿ ವಾಸಿಸುವ ಮುನ್ಶಿ ಪ್ರೇಮ್ಚಂದ್ ಎಂಬ ಮಹಿಳೆಯೊಬ್ಬರು ರಾತ್ರಿ 11 ಗಂಟೆ ಬಳಿಕ ತನ್ನ ರೂಮಿನ ಬಾಗಿಲು ಹಾಕಿಕೊಂಡು ನಿದ್ದೆಗೆ ಜಾರಿದ್ದಳು. ರಾತ್ರಿ ಗಾಢ ನಿದ್ದೆಯಲ್ಲಿರುವ ಹೊತ್ತಿಗೆ ದೈತ್ಯ ಹೆಬ್ಬಾವು ಆಕೆಯ ಕೋಣೆಗೆ ನುಗ್ಗಿದೆ.
ಇದು ಮಲಗಿದ್ದ ಮುನ್ಶಿ ಪ್ರೇಮ್ಚಂದ್ಗೆ ಗೊತ್ತಾಗಲಿಲ್ಲ. ಅಲ್ಲಿಗೆ ಎಂಟ್ರಿ ನೀಡಿದ್ದ ಹೆಬ್ಬಾವು ಮಹಿಳೆಯ ತಲೆಯ ಪಕ್ಕದಲ್ಲಿ ಸುರಳಿ ಸುತ್ತಿ ತಾನೂ ಹಾಯಾಗಿ ಮಲಗಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಆ ಮಹಿಳೆಗೆ ಇದ್ದಕ್ಕಿದ್ದಂತೆ ಎಚ್ಚರ ಆಗಿದೆ. ರೂಮಿನಲ್ಲಿ ಏನೋ ಒಂದು ರೀತಿಯ ಕಲುಷಿತ ವಾತಾವರಣ ನಿರ್ಮಾಣ ಆಗಿರುವ ಅನುಮಾನ ಆಕೆಗೆ ಬಂದಿದೆ. ನಿದ್ದೆಯಲ್ಲಿ ಅತ್ತ, ಇತ್ತ ತಡಬಡಿಸಿದ್ದಾಳೆ. ಆಗ ಆಕೆಗೆ ತನ್ನ ಪಕ್ಕದಲ್ಲೇ ಹಾವು ಬಂದು ಕೂತಿರೋದು ಗಮನಕ್ಕೆ ಬಂದಿದೆ.
ಲೈಟ್ ಹಾಕಿ ನೋಡಿದಾಗ ಆಕೆ ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ. ಹೇಗಪ್ಪ ಇದರಿಂದ ಪಾರಾಗೋದು ಅಂತಾ ಆ ಮಹಿಳೆ ಗಾಬರಿಯಲ್ಲಿ ಜೋರಾಗಿ ಕಿರುಚಾಡದೇ ರೂಮಿನಿಂದ ಎಸ್ಕೇಪ್ ಆಗಿದ್ದಾಳೆ. ಬಳಿಕ ತನ್ನ ಮನೆಯವನ್ನ ಎಬ್ಬಿಸಿ ಹಾವು ಮಲಗಿರೋದನ್ನು ತಿಳಿಸಿದ್ದಾರೆ. ನಂತರ ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ದಯಮಾಡಿ ಬನ್ನಿ ಸರ್ ಮಲಗುವ ಕೋಣೆಯಲ್ಲಿ ಹೆಬ್ಬಾವು ಬಂದಿದೆ ಎಂದು.
ಅಲ್ಲಿಗೆ ಎಂಟ್ರಿ ನೀಡಿದ ಉರಗ ತಜ್ಞರು, ಹಾವನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೊನೆಗೆ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಆ ಹೆಬ್ಬಾವನ್ನು ಅಳೆತ ಮಾಡಿದಾಗ ಬರೋಬ್ಬರಿ 12 ಅಡಿ ಉದ್ದ ಇತ್ತು. ದೈತ್ಯ ಹೆಬ್ಬಾವು ಇದಾಗಿದ್ದು, ಆಕೆಗೆ ಎಚ್ಚರ ಆಗಿದ್ದಿದ್ದರೆ ದೊಡ್ಡ ದುರಂತ ನಡೆದರೂ ಅಚ್ಚರಿ ಇರಲಿಲ್ಲ. ಯಾವಾಗ ಹಾವನ್ನು ಹಿಡಿಯುತ್ತಿದ್ದಂತೆಯೇ ಇಡೀ ಮನೆ ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ ಮಲಗಿ ಬೆಳಗ್ಗೆ ಆಗೋದ್ರೊಳಗ್ಗೆ ಏನೆಲ್ಲ ನಡೆದು ಹೋಯ್ತಲ್ಲ ಅಂತಾ ಸ್ಥಳೀಯರು ಮಾತಾಡಿಕೊಳ್ತಿದ್ದಾರೆ..
ಕಾಡಿಗೆ ಬಿಟ್ಟುಬಂದ ಉರಗ ತಜ್ಞರು
ದೈತ್ಯ ಹೆಬ್ಬಾವನ್ನು ರಕ್ಷಣೆ ಮಾಡಿರುವ ಉರಗ ತಜ್ಞರು ಅದನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ಕಾಡಿನ ಅಂಚಿನಲ್ಲಿರುವ ಮನೆಗಳಿಗೆ ಹಾವುಗಳು ನುಗ್ಗೋದು ಹೊಸದೇನೂ ಅಲ್ಲ. ಆದರೂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹುಷಾರಾಗಿರಬೇಕು.







