11:00 PM (IST) Nov 08

India Latest News Live 8 November 2026 ಇಸ್ರೇಲ್‌ನಲ್ಲಿ ರಾಜಕೀಯ ಸಂಚಲನ, ನೇತನ್ಯಾಹುವಿಗೆ ಆಹ್ವಾನ ಕೊಟ್ಟ ಐಸನ್‌ಕೋಟ್, 28 ದಿನ ಡೆಡ್‌ಲೈನ್

ಇಸ್ರೇಲ್‌ನಲ್ಲಿ ಹೊಸ ಸರ್ಕಾರ ರಚನೆಗೆ ಐಸನ್‌ಕೋಟ್‌ಗೆ ಆಹ್ವಾನ ನೀಡಲಾಗಿದೆ.28 ದಿನದಲ್ಲಿ ಬಹುಮತ ಸಾಬೀತುಪಡಿಸಲು ಡೆಡ್‌ಲೈನ್ ಕೂಡ ನೀಡಲಾಗಿದೆ. ಇದರ ನಡುವೆ ರಾಜಕೀಯ ಸಂಚಲನ ನಡೆದಿದೆ. ಐಸನ್‌ಕೋಟ್, ನೇತನ್ಯಾಹುವಿಗೆ ಆಹ್ವಾನ ನೀಡಿದ್ದಾರೆ.

Read Full Story
10:39 PM (IST) Nov 08

India Latest News Live 8 November 2026 ಅನಿರುದ್ಧ್ ಇಂದು ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಲು ಇವರೇ ಕಾರಣ - ರಜನಿ ಪುತ್ರಿ ಹೇಳಿಕೆ ವೈರಲ್

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಯಶಸ್ಸಿನ ಹಿಂದೆ ನಟ ಧನುಷ್ ಅವರ ಪಾತ್ರ ದೊಡ್ಡದಿದೆ ಎಂದು ಐಶ್ವರ್ಯಾ ರಜನಿಕಾಂತ್ ಈ ಹಿಂದೆ ಹೇಳಿದ್ದರು. ಅನಿರುದ್ಧ್ ಅವರನ್ನು ಸಿಂಗಾಪುರಕ್ಕೆ ಕಳುಹಿಸುವ ಬದಲು..

Read Full Story
10:11 PM (IST) Nov 08

India Latest News Live 8 November 2026 ಅಜ್ಜಿ ಕಣ್ಣೀರ ಮನವಿಗೆ ಪುಟ್ಟ ಕಂದನಿಗೆ ಮರು ಜೀವ, ಸೋನು ಸೂದ್ ದೀಪಾವಳಿ ಗಿಪ್ಟ್‌ಗೆ ಹಲವರ ಕಣ್ಣಾಲಿ ತೇವ

ತನ್ನ 1 ವರ್ಷದ ಮೊಮ್ಮಗಳ ಬದುಕಿಸಲು 90ರ ಅಜ್ಜಿ ಮನವಿಯೊಂದಿಗೆ ಸೋನು ಸೂದ್ ಭೇಟಿಯಾಗಿದ್ದಾರೆ. ಅಜ್ಜಿಯ ಕಣ್ಣೀರ ಮನವಿಗೆ ಸೋನು ಸೂದ್ ತಕ್ಷಣವೇ ಸ್ಪಂದಿಸಿದ್ದಾರೆ. ಪರಿಣಾಮ ದೀಪಾವಳಿ ಹಬ್ಬಕ್ಕೆ ಪುಟ್ಟ ಕಂದನಿಗೆ ಮರು ಜೀವ ಸಿಕ್ಕಿದೆ.

Read Full Story
09:52 PM (IST) Nov 08

India Latest News Live 8 November 2026 ಹಾಡುಗಾರ ಮಾತ್ರವಲ್ಲ, ನಟನಾಗಿಯೂ ಮಿಂಚಿದ್ದ ಎಸ್‌ಪಿಬಿ - ರಶ್ಮಿಕಾ ಜೊತೆಗಿನ ಆ ಸಿನಿಮಾ ನೆನಪಿದೆಯಾ?

ಗಾಯನ, ಸಿನಿಮಾದಲ್ಲಿ ಮಾತ್ರವಲ್ಲ, ಎಸ್‌ಪಿಬಿ ಕಿರುತೆರೆಯಲ್ಲೂ ಜನಪ್ರಿಯತೆ ಗಳಿಸಿದ್ದರು. ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ಅನೇಕ ಶೀರ್ಷಿಕೆ ಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಿಯಾಲಿಟಿ ಶೋಗಳ ನಿರೂಪಕ ಹಾಗೂ ತೀರ್ಪುಗಾರರಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡದ ಜನಪ್ರಿಯ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ನಡೆಸಿಕೊಟ್ಟು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

Read Full Story
09:07 PM (IST) Nov 08

India Latest News Live 8 November 2026 ದೀಪಾವಳಿ ದಿನವೇ ಫ್ಯಾನ್ಸ್‌ ಕ್ಷಮೆ ಯಾಚಿಸಿದ ಅಮಿತಾಭ್ ಬಚ್ಚನ್; ಆ ನೋವಿನಿಂದ ಬಳಲುತ್ತಿರುವ ಬಿಗ್ ಬಿ

ಕೊನೆಯಲ್ಲಿ ಸಂತೋಷವನ್ನೇ ಆರಿಸಿಕೊಳ್ಳಬೇಕೋ ಅಥವಾ ಮನಸ್ಸಿನಲ್ಲಿ ಅಸಮಾಧಾನವನ್ನು ಉಳಿಸಿಕೊಳ್ಳಬೇಕೋ? ಒಂದು ಆಯ್ಕೆ ಮನಸ್ಸಿಗೆ ನೆಮ್ಮದಿ ನೀಡಿದರೆ, ಮತ್ತೊಂದು ನೋವಿನ ನೆನಪನ್ನು ಉಳಿಸುತ್ತದೆ. ಜೀವನದ ವೈವಿಧ್ಯತೆಯೇ ಅದರ ರಹಸ್ಯ ಎಂದು ‘ಬಿಗ್ ಬಿ’ ಅಮಿತಾಭ್ ಬರೆದಿದ್ದಾರೆ.

Read Full Story
08:44 PM (IST) Nov 08

India Latest News Live 8 November 2026 ಒಂದೇ ಬಾರಿಗೆ 3-4 ಬರ್ಗರ್ ತಿನ್ನುತ್ತಿದ್ದ ಖ್ಯಾತ ಗಾಯಕ; ತಮ್ಮ ತೂಕ ಇಳಿಕೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಅದ್ನಾನ್ ಸಾಮಿ

ಖ್ಯಾತ ಗಾಯಕ ಅದ್ನಾನ್ ಸಾಮಿ ಅವರು ಪಾಡ್‌ಕಾಸ್ಟ್‌ನಲ್ಲಿ ತಮ್ಮ ಭಾರೀ ತೂಕದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆಹಾರದ ಮೇಲಿನ ವ್ಯಾಮೋಹ ಹಾಗೂ ಅತಿಯಾಗಿ ತಿನ್ನುವ ಅಭ್ಯಾಸವೇ ಅವರ 230 ಕೆಜಿ ತೂಕಕ್ಕೆ ಕಾರಣವಾಗಿತ್ತು ಎಂದು ವಿವರಿಸಿದ್ದಾರೆ.
Read Full Story
07:33 PM (IST) Nov 08

India Latest News Live 8 November 2026 ಇಶಾನ್ ಕಿಶನ್ ಮೇಲೆ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ - ವಿಡಿಯೋ ವೈರಲ್

ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ತಮ್ಮ ಸಹ ಆಟಗಾರ ಇಶಾನ್ ಕಿಶನ್ ಅವರ ನಡೆಯುವ ಶೈಲಿಯನ್ನು ಅಣುಕಿಸುವ ಮೂಲಕ ಹಿಂದಿನ ಕೀಟಲೆಗೆ ಸೇಡು ತೀರಿಸಿಕೊಂಡಿದ್ದಾರೆ. ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ನಡೆದ ಈ ತಮಾಷೆಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story
07:22 PM (IST) Nov 08

India Latest News Live 8 November 2026 ದೀಪಾವಳಿ ಖುಷಿಯ ಈದ್ ಹಬ್ಬ, ವಿವಾದ ಸೃಷ್ಟಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭಾಶಯ

ದೀಪಾವಳಿ ಹಬ್ಬಕ್ಕೆ ಮಲ್ಲಿಕಾರ್ಜುನ್ ಖರ್ಗೆ ಶುಭಕೋರಿದ್ದಾರೆ. ಆದರೆ ಶುಭಾಶಯದಲ್ಲೂ ಮುಸ್ಲಿಂ ಒಲೈಕೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಕಾರಣವಾಗಿದ್ದು ಖರ್ಗೆಯ ದೀಪಾವಳಿ ಖುಷಿಯ ಈದ್ ಮಿಲಾದ್ ಹೇಳಿಕೆ.

Read Full Story
05:58 PM (IST) Nov 08

India Latest News Live 8 November 2026 'ಒನಿಟ್ಸುಕಾ ಟೈಗರ್' ಜೊತೆ ನಟಿ ರಶ್ಮಿಕಾ ಸ್ಟೈಲಿಷ್ ಆಟ - ಈ ಫ್ಯಾಷನ್ ವಿಶೇಷತೆ ಬಗ್ಗೆ ಗೊತ್ತಾ?

ಅಂತಾರಾಷ್ಟ್ರೀಯ ಬ್ರ್ಯಾಂಡ್ ಒನಿಟ್ಸುಕಾ ಟೈಗರ್ ಜೊತೆಗಿನ ಸಹಯೋಗದಲ್ಲಿ ರಶ್ಮಿಕಾ ಮಂದಣ್ಣ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಳದಿ ಶೂ, ಚೆಕ್ಸ್ ಶರ್ಟ್‌ನಲ್ಲಿನ ನಟಿಯ ಸ್ಟೈಲಿಷ್ ಲುಕ್ ಗಮನ ಸೆಳೆಯುತ್ತಿದೆ.

Read Full Story
05:55 PM (IST) Nov 08

India Latest News Live 8 November 2026 ಸುಂದರಿಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ಚಿಪ್​ ದೈತ್ಯ Nvidia ಸಿಇಒ! ಚೀನಾದ ಕಿತಾಪತಿಗೆ ಅಮೆರಿಕ ಅಲ್ಲೋಲ ಕಲ್ಲೋಲ

ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಚೀನಾದ ಗುಪ್ತಚರ ಸಂಸ್ಥೆ ಎಂಎಸ್‌ಎಸ್‌ನ ಹನಿಟ್ರ್ಯಾಪ್‌ಗೆ ಸಿಲುಕಿದ್ದಾರೆ ಎಂಬ ವರದಿ ಅಮೆರಿಕದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕದ ಚಿಪ್ ನಿಷೇಧವನ್ನು ತಪ್ಪಿಸಲು ಚೀನಾ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.
Read Full Story
05:49 PM (IST) Nov 08

India Latest News Live 8 November 2026 23 ಬಳಿಕ ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್ ಇರುವ ದಿಗ್ಗಜರ ದಾಖಲೆ ಪಟ್ಟಿಗೆ ಸೇರಿದ ಗುರ್ನೂರ್ ಬ್ರಾರ್

ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತವು ಡಕ್ವರ್ತ್ ಲೂಯಿಸ್ ನಿಯಮದನ್ವಯ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಗುರ್ನೂರ್ ಬ್ರಾರ್ ಅವರ 4 ವಿಕೆಟ್‌ಗಳ ಸ್ಮರಣೀಯ ಬೌಲಿಂಗ್ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
Read Full Story
05:44 PM (IST) Nov 08

India Latest News Live 8 November 2026 '21 ವರ್ಷಗಳ ವನವಾಸ ಮುಗಿದಿದೆ' ರಾಮಾಯಣದಲ್ಲಿ ಲಕ್ಷ್ಮಣನಾಗಿ ಮಿಂಚಿದ ರವಿ ದುಬೆ ಪತ್ನಿಯ ಕಣ್ಣೀರ ಕತೆ

ರಾಮಾಯಣ ಸಿನಿಮಾದಲ್ಲಿ ರವಿ ದುಬೆ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ರವಿ ದುಬೆ ಪತ್ನಿ ಪ್ರಸಿದ್ಧ ನಟಿ ಸುರ್ಗುಣ್ ಮೆಹ್ತಾ ಭಾವುಕರಾಗಿದ್ದಾರೆ. ರವಿ ದುಬೆಗೆ ಸಿಕ್ಕ ಗೆಲುವುನ್ನು ಕೊಂಡಾಡಿ, ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

Read Full Story
05:35 PM (IST) Nov 08

India Latest News Live 8 November 2026 ಬಾಬ್ರಿ ಮಸೀದಿ ಕೆಡವಿದ್ದು ನೋಡಿ ಅತ್ತಿದ್ದೆ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ರಾ ಸೋನಿಯಾ? ಅಂದು ಏನಾಗಿತ್ತು? ಬಿಜೆಪಿ ವ್ಯಂಗ್ಯ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆ ಬಿಡುಗಡೆಗೂ ಮುನ್ನ 1992ರ ಬಾಬರಿ ಮಸೀದಿ ಧ್ವಂಸದ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರು ದೂರದರ್ಶನದಲ್ಲಿ ನೋಡಿ ಅತ್ತಿದ್ದಾಗಿ ಹೇಳಿದ್ದಾರೆ, ಆದರೆ ಅಂದು ಆ ಘಟನೆ ಪ್ರಸಾರವಾಗಿರಲಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ.
Read Full Story
05:32 PM (IST) Nov 08

India Latest News Live 8 November 2026 'ಧನುಷ್ ಸರ್ ನಡೆದಾಡಿದರೆ ವಿಭೂತಿ ಪರಿಮಳ ಬರುತ್ತೆ' - ನಟನ ವರ್ಣಿಸಿದ್ಯಾಕೆ ಗೊತ್ತಾ ಶ್ರೀಲೀಲಾ?

ನಟ ಧನುಷ್ ಅವರ ವ್ಯಕ್ತಿತ್ವವನ್ನು ವಿಭಿನ್ನವಾಗಿ ವರ್ಣಿಸಿದ ನಟಿ ಶ್ರೀಲೀಲಾ. ‘ಧನುಷ್ ಸರ್ ನಡೆದಾಡಿದರೆ ವಿಭೂತಿಯ ಪರಿಮಳ ಬರುತ್ತೆ’ ಎಂಬ ಅವರ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Read Full Story
05:11 PM (IST) Nov 08

India Latest News Live 8 November 2026 ಮೊದಲ ತಮಿಳು ಸಿನಿಮಾದಲ್ಲೇ ದುನಿಯಾ ವಿಜಯ್‌ಗೆ ಸಿಕ್ತು ಭರ್ಜರಿ ಪ್ರತಿಕ್ರಿಯೆ - ಆ ಪಾತ್ರ ಎಂಥದ್ದು?

ನಟಿ ನಯನತಾರಾ ನಟನೆಯ ‘ಮೂಕುತಿ ಅಮ್ಮನ್ 2’ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಎರಡು ವಿಭಿನ್ನ ಪಾತ್ರಗಳಲ್ಲಿ ವಿಜಯ್ ಅಬ್ಬರಿಸಿದ್ದಾರೆ.

Read Full Story
04:43 PM (IST) Nov 08

India Latest News Live 8 November 2026 ಇದ್ದಕ್ಕಿದ್ದಂತೆ ತಮಿಳು ಸಿನಿಮಾಗಳ ಜಪ ಶುರುಮಾಡಿದ ನಟಿ ಜಾನ್ವಿ - ಹೊಸ ಅಧ್ಯಾಯ ಶುರುವಾಗುತ್ತಾ?

ಟಾಲಿವುಡ್‌ನಲ್ಲಿ ದೇವರ, ಪೆದ್ದಿ ಸಿನಿಮಾಗಳ ಬಳಿಕ ಟೀಕೆ ಎದುರಿಸಿದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈಗ ತಮಿಳು ಸಿನಿಮಾಗಳನ್ನು ಹೊಗಳಿದ್ದಾರೆ. ಕಾಲಿವುಡ್ ಎಂಟ್ರಿಗೆ ಸಿದ್ಧತೆ ನಡೆಸುತ್ತಿದ್ದಾರಾ?

Read Full Story
03:50 PM (IST) Nov 08

India Latest News Live 8 November 2026 ಅಮೆರಿಕದಲ್ಲಿದ್ದರೂ ದೇಸಿ ಸಂಪ್ರದಾಯ ಮರೆಯದ ನಟಿ ಪ್ರಿಯಾಂಕಾ - ಮಗಳಿಗೆ ಭಾರತೀಯ ಸಂಸ್ಕೃತಿಯ ಪಾಠ

ಲಾಸ್ ಏಂಜಲೀಸ್‌ನಲ್ಲಿ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲತಿ ಮೇರಿ ಜೊತೆ ಪ್ರಿಯಾಂಕಾ ಚೋಪ್ರಾ ದೀಪಾವಳಿ ಆಚರಿಸಿದ್ದಾರೆ. ಅವರ ಸುಂದರ ದೇಸಿ ಲುಕ್ ಮತ್ತು ಫ್ಯಾಮಿಲಿ ಫೋಟೋಗಳು ವೈರಲ್ ಆಗಿವೆ.

Read Full Story
02:40 PM (IST) Nov 08

India Latest News Live 8 November 2026 ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಕಷ್ಟ, ಶೇ.75ರಷ್ಟು ಕುಸಿತ ಕಂಡ ದೇಣಿಗೆ, 2025-26ರ ಹಣ ಸಂಗ್ರಹ ಇಷ್ಟೇನಾ?

2025-26ರ ಸಾಲಿನಲ್ಲಿ ಕಾಂಗ್ರೆಸ್‌ಗೆ 20 ಸಾವಿರ ರೂ ಮೇಲ್ಪಟ್ಟ ದೇಣಿಗೆ ನೀಡುವವರ ಸಂಖ್ಯೆ ಶೇಕಡಾ 75ರಷ್ಟು ಕುಸಿತ ಕಂಡಿದೆ. 25-26ರ ಸಾಲಿನಲ್ಲಿ ಕಾಂಗ್ರೆಸ್ ಸಂಗ್ರಹಿಸಿದ ದೇಣಿಗೆ ನೋಡಿದರೆ ಪಾರ್ಟಿ ಮುನ್ನಡೆಯುವುದೇ ಕಷ್ಟವಾಗಿದೆ.

Read Full Story
02:28 PM (IST) Nov 08

India Latest News Live 8 November 2026 SMAT ನಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ, ಬೆನ್ನಲ್ಲೇ ಸಹೋದರ ಕೃನಾಲ್‌ಗೆ ದೊಡ್ಡ ಜವಾಬ್ದಾರಿ!

ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. 2026 ಮತ್ತು 2027 ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಅವರನ್ನು ಕೈಬಿಡಲಾಗಿದೆ. ಅವರು ಬರೋಡಾ ತಂಡವನ್ನು ಪ್ರತಿನಿಧಿಸುತ್ತಿದ್ದರು. ಅವರ ಬದಲಿಗೆ ಸಹೋದರ ಕೃನಾಲ್‌ಗೆ ಕ್ಯಾಪ್ಟನ್ಸಿ ನೀಡಲಾಗಿದೆ.

Read Full Story
01:26 PM (IST) Nov 08

India Latest News Live 8 November 2026 ಚಿನ್ನದ ಬೆಲೆ ವಿಶ್ವದಲ್ಲಿ ಶೇ.24, ಭಾರತದಲ್ಲಿ ಶೇ.20 ಕುಸಿತ; ಶೇ.4 ವ್ಯತ್ಯಾಸ ಏಕೆ?

Gold Price ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಶೇ.24ರಷ್ಟು ಕುಸಿದಿದ್ದರೆ, ಭಾರತದಲ್ಲಿ ಕೇವಲ ಶೇ.20ರಷ್ಟು ಕಡಿಮೆಯಾಗಿದೆ. ಜನವರಿ 29ರ ಬೆಲೆಗೆ ಹೋಲಿಸಿದ್ರೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಮಾತ್ರ ಕಡಿಮೆಯಾಗಿದೆ.

Read Full Story