ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆ ಬಿಡುಗಡೆಗೂ ಮುನ್ನ 1992ರ ಬಾಬರಿ ಮಸೀದಿ ಧ್ವಂಸದ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರು ದೂರದರ್ಶನದಲ್ಲಿ ನೋಡಿ ಅತ್ತಿದ್ದಾಗಿ ಹೇಳಿದ್ದಾರೆ, ಆದರೆ ಅಂದು ಆ ಘಟನೆ ಪ್ರಸಾರವಾಗಿರಲಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ.
ದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲೋಂಗಿಂಗ್: ಎ ಜರ್ನಿ ಆಫ್ ಲವ್' ಇದೇ 10ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸೋನಿಯಾ ಅವರು ವಿವಿಧೆಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಸೋನಿಯಾ ಅವರು, 1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವನ್ನು ದೂರದರ್ಶನದಲ್ಲಿ ನಾನು ವೀಕ್ಷಿಸಿದೆ. ಆಗ ಜೋರಾಗ ಅತ್ತಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ಇದಾಗಲೇ ಬಿಜೆಪಿ ಬೆಂಬಲಿಗರಿಂದ ಸಿಕ್ಕಾಪಟ್ಟೆ ಟ್ರೋಲ್ಗಳ ಸುರಿಮಳೆಯಾಗುತ್ತಿದೆ. ಬಾಬರ್ ಅವರು ಕಾಂಗ್ರೆಸ್ ಹೃದಯದಲ್ಲಿ ಇದ್ದರು ಮತ್ತು ಇನ್ನೂ ಇದ್ದಾರೆ ಎಂದು ಅವರ ಹೇಳಿಕೆ ತೋರಿಸುತ್ತದೆ ಎಂದು ಒಂದೆಡೆ ಹೇಳುತ್ತಿದ್ದರೆ, ಇದೀಗ ಅವರು ನೀಡಿರುವ ಹೇಳಿಕೆಯೇ ವಿವಾದಕ್ಕೆ ಸಿಲುಕಿದೆ. ಅಂದು ದೂರದರ್ಶನದಲ್ಲಿ ಇದನ್ನು ವೀಕ್ಷಿಸಿರುವುದಾಗಿ ಹೇಳಿದ ಸೋನಿಯಾ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದು, ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋನಿಯಾ ಗಾಂಧಿ ಮಾತು
ಅಷ್ಟಕ್ಕೂ ಆಗಿದ್ದೇನೆಂದರೆ, ಡಿಸೆಂಬರ್ 6, 1992 ರಂದು ತಾವು ದೂರದರ್ಶನ ನೋಡಿ ಕಣ್ಣೀರಿಟ್ಟೆ ಎಂದಿದ್ದಾರೆ ಸೋನಿಯಾ ಗಾಂಧಿ. ಆದರೆ ಅಸಲಿಗೆ ಅಂದು ದೂರದರ್ಶನದಲ್ಲಿ ಅದನ್ನು ಪ್ರಸಾರ ಮಾಡಿಯೇ ಇರಲಿಲ್ಲ. ಆ ಸಮಯದಲ್ಲಿ ಪ್ರಸಾರ ಆಗಬೇಕಿದ್ದರೆ ಅದು ಕೇವಲ ಡಿಡಿನ್ಯೂಸ್ ಮಾತ್ರ. ಆದರೆ ಈ ವಿಷಯ ಸ್ಥಳದಲ್ಲಿ ಇದ್ದವರಿಗೆ ಬಿಟ್ಟರೆ ಯಾರಿಗೂ ತಿಳಿದೇ ಇರಲಿಲ್ಲ. ಆ ರಾತ್ರಿ, ರಾತ್ರಿ 8.45 ಕ್ಕೆ, ಆಗಿನ ಪ್ರಧಾನಿ ನರಸಿಂಹ ರಾವ್ ದೂರದರ್ಶನ ಸುದ್ದಿ ಪ್ರಸಾರವನ್ನು ಅಡ್ಡಿಪಡಿಸಿ ಶುದ್ಧ ಉರ್ದು ಭಾಷೆಯಲ್ಲಿ ತಮ್ಮ ಸರ್ಕಾರ ಉತ್ತರ ಪ್ರದೇಶ ಆಡಳಿತವನ್ನು ವಜಾಗೊಳಿಸಿದೆ ಎಂದು ಘೋಷಿಸಿದರು. ಆದ್ದರಿಂದ ಇದು ದೇಶದ ಯಾವ ಭಾಗದ ಜನತೆಗೂ ತಿಳಿದೇ ಇರಲಿಲ್ಲ. ಹಾಗಿದ್ದ ಮೇಲೆ, ನಿಮ್ಮ ಕಣ್ಣಲ್ಲಿ ನೀರು ತರಿಸಿದ ಯಾವ ಭಾರತೀಯ ದೂರದರ್ಶನ ಚಾನೆಲ್ ಅನ್ನು ನೀವು ನೋಡುತ್ತಿದ್ದಿರಿ ಎಂದು ಸುಧಾಂಶು ತ್ರಿವೇದಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ವ್ಯಂಗ್ಯ
ಆ ದಿನ ಬೆಳಿಗ್ಗೆ 11.30 ಕ್ಕೆ 'ಕರಸೇವಕರು' ಸ್ಥಳಕ್ಕೆ ಪ್ರವೇಶಿಸಿದರು ಮತ್ತು ಸಂಜೆ 5 ಗಂಟೆಯ ಹೊತ್ತಿಗೆ, ರಚನೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆ ಎಂಬ ಸುದ್ದಿ ಬಂದಾಗ, ಕಲ್ಯಾಣ್ ಸಿಂಗ್ ಸರ್ಕಾರ (ಉತ್ತರ ಪ್ರದೇಶದಲ್ಲಿ) ರಾಜೀನಾಮೆ ನೀಡಿತು. ರಾತ್ರಿ 8.45 ಕ್ಕೆ, ಆಗಿನ ಪ್ರಧಾನಿ ನರಸಿಂಹ ರಾವ್ ದೂರದರ್ಶನ ಸುದ್ದಿ ಪ್ರಸಾರವನ್ನು ಅಡ್ಡಿಪಡಿಸಿ ಶುದ್ಧ ಉರ್ದು ಭಾಷೆಯಲ್ಲಿ ತಮ್ಮ ಸರ್ಕಾರ ಉತ್ತರ ಪ್ರದೇಶ ಆಡಳಿತವನ್ನು ವಜಾಗೊಳಿಸಿದೆ ಎಂದು ಘೋಷಿಸಿದ್ದರು ಎಂದಿದ್ದಾರೆ. ಇದೇ ವೇಳೆ ಅವರು ಸೋನಿಯಾ ಗಾಂಧಿ ಅವರ ಹೇಳಿಕೆಗಳು ಕಾಂಗ್ರೆಸ್ ಎರಡು ಮುಖಗಳನ್ನು ಹೊಂದಿರುವ ಪಕ್ಷವಾಗಿದೆ ಮತ್ತು ಅದು ಕೇವಲ ಮುಸ್ಲಿಂ ಸಮುದಾಯದೊಂದಿಗೆ ನಿಲ್ಲುವುದಿಲ್ಲ, ಬದಲಾಗಿ "ಮುಸ್ಲಿಮರಲ್ಲಿ ತೀವ್ರಗಾಮಿ ಅಂಶಗಳೊಂದಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುತ್ತದೆ" ಎಂದು ಸ್ಪಷ್ಟಪಡಿಸುತ್ತದೆ ಎಂದು ಅವರು ಆರೋಪಿಸಿದರು.
"ದಿವಂಗತ ರಾಜೀವ್ ಗಾಂಧಿ ಅವರು 1989 ರ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದ ಪ್ರಾರಂಭಿಸಿದರು, ಭಗವಾನ್ ರಾಮನ ಹೆಸರನ್ನು ಪ್ರಾರ್ಥಿಸಿದರು. ಇಂದು, ಸೋನಿಯಾ ಗಾಂಧಿ, ಬಾಬ್ರಿಯನ್ನು ಕರೆಯುವ ಮೂಲಕ, ಗಾಜಾ ಬಗ್ಗೆ ದುಃಖ ವ್ಯಕ್ತಪಡಿಸುವ ಮೂಲಕ ಮತ್ತು ಬಾಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಆರೋಪಿಗಳಿಗಾಗಿ ಕಣ್ಣೀರು ಸುರಿಸುವುದರ ಮೂಲಕ, ಕಾಂಗ್ರೆಸ್ನ ನಿಜವಾದ ಆಧಾರವಾಗಿರುವ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ" ಎಂದು ಬಿಜೆಪಿಯ ರಾಜ್ಯಸಭಾ ಸಂಸದರು ಹೇಳಿದರು. "ಸೋನಿಯಾ ಗಾಂಧಿ, ನಿಮ್ಮ ಕುಟುಂಬದ ಮೂರು ತಲೆಮಾರುಗಳು ಆಹ್ವಾನವಿಲ್ಲದೆಯೇ ಬಾಬರ್ ಸಮಾಧಿಗೆ ಭೇಟಿ ನೀಡಿ ಅಲ್ಲಿ 'ಸಿಜ್ದಾ' (ನಮಸ್ಕಾರ) ಸಲ್ಲಿಸಿವೆ. 1959 ರಲ್ಲಿ ಜವಾಹರಲಾಲ್ ನೆಹರು, 1968 ರಲ್ಲಿ ಇಂದಿರಾ ಗಾಂಧಿ ಮತ್ತು 2005 ರಲ್ಲಿ ಮನಮೋಹನ್ ಸಿಂಗ್ ಅವರೊಂದಿಗೆ ರಾಹುಲ್ ಗಾಂಧಿ ಸಮಾಧಿಗೆ ಭೇಟಿ ನೀಡಿದರು" ಎಂದು ತ್ರಿವೇದಿ ಹೇಳಿದರು, "ನಿಮ್ಮ ಹೃದಯದಲ್ಲಿ ನಿಜವಾಗಿಯೂ ಏನಿತ್ತು ಎಂಬುದು ಈಗ ಮುನ್ನೆಲೆಗೆ ಬಂದಿದೆ" ಎಂದಿದ್ದಾರೆ.














