ಇಸ್ರೇಲ್‌ನಲ್ಲಿ ಹೊಸ ಸರ್ಕಾರ ರಚನೆಗೆ ಐಸನ್‌ಕೋಟ್‌ಗೆ ಆಹ್ವಾನ ನೀಡಲಾಗಿದೆ.28 ದಿನದಲ್ಲಿ ಬಹುಮತ ಸಾಬೀತುಪಡಿಸಲು ಡೆಡ್‌ಲೈನ್ ಕೂಡ ನೀಡಲಾಗಿದೆ. ಇದರ ನಡುವೆ ರಾಜಕೀಯ ಸಂಚಲನ ನಡೆದಿದೆ. ಐಸನ್‌ಕೋಟ್, ನೇತನ್ಯಾಹುವಿಗೆ ಆಹ್ವಾನ ನೀಡಿದ್ದಾರೆ.
ಇಸ್ರೇಲ್ (ನ.08) ಇಸ್ರೇಲ್‌ನಲ್ಲಿ ರಾಜಕೀಯ ಸಂಚನಲ ಸೃಷ್ಟಿಯಾಗಿದೆ. ಸ್ಪಷ್ಟ ಬಹುಮತ ಪಡೆಯದ ಹಾಲಿ ಪ್ರಧಾನಿ ನೇತನ್ಯಾಹು ಆಡಳಿತರೂಢ ಲಿಕುಡ್ ಪಕ್ಷ ಹಾಗೂ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ಅವರ ರಾಷ್ಟ್ರೀಯ ಐಕ್ಯತಾ ಪಕ್ಷದ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರ ರಚನೆಗೆ ಐಸೆನ್‌ಕೋಟ್‌ಗೆ ಇಸ್ರೇಲ್ ಅಧ್ಯಕ್ಷರು ಆಹ್ವಾನ ನೀಡಿದ್ದಾರೆ. ಬಹುಮತ ಸಾಬೀತುಪಡಿಸಲು 28 ದಿನಗಳ ಗಡುವು ನೀಡಿದ್ದಾರೆ. ಈ ಬೆಳವಣಿಗೆ ನಡುವೆ ಐಸನ್‌ಕೋಟ್ ನೇತನ್ಯಾಹು ಅವರ ಲಿಕುಡ್ ಪಕ್ಷಕ್ಕೆ ಮುಕ್ತ ಆಹ್ವಾನ ನೀಡಿದ್ದಾರೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
ಐಸನ್‌ಕೋಟ್ ಪ್ರಧಾನಿ ಪಟ್ಟ
ಸರ್ಕಾರ ರಚನೆ ಹಾಗೂ ಬಹುಮತ ಸಾಬೀತಪುಡಿಸಲು 28 ದಿನಗಳ ಗಡುವು ಪಡೆದ ಬೆನ್ನಲ್ಲೇ ಇಸ್ರೇಲ್ ರಾಜಕೀಯ ಸ್ವರೂಪ ಬದಲಾಗುತ್ತಿದೆ. ಇತ್ತ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿಯಾಗಿ ಮುಂದುವರಿಯಲು ಬಯಸಿದ್ದರು. ಆದರೆ ಬಹುಮತವಿಲ್ಲದ ಕಾರಣ ನೇತನ್ಯಾಹು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಸರ್ಕಾರ ರಚನೆ ಆಹ್ವಾನ ಪಡೆದಿರುವ ಐಸನ್‌ಕೋಟ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಭದ್ರತಾ ಹಾಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ತುರ್ತು ಸರ್ಕಾರದ ಅಗತ್ಯವಿದೆ. ಹೀಗಾಗಿ ನೇತನ್ಯಾಹು ಪಕ್ಷದ ನಾಯಕರು ತಮ್ಮ ಜೊತೆ ಕೈಜೋಡಿಸಬಹುದು ಎಂದು ಆಹ್ವಾನ ನೀಡಿದ್ದಾರೆ.
ಈ ಮೈತ್ರಿ ಸರ್ಕಾರದ ಚುಕ್ಕಾಣಿ ತಾವು ಹಿಡಿಯುವುದಾಗಿ ಹೇಳಿದ್ದಾರೆ. ಬೆಂಜಮಿನ್ ನೇತನ್ಯಾಹು ಹೊರತುಪಡಿಸಿ ಲಿಕುಡ್ ಪಕ್ಷದ ನಾಯಕರು ತಮ್ಮ ಜೊತೆ ಕೈಜೋಡಿಸಲು ಸುಳಿವು ನೀಡಿದ್ದಾರೆ. ಸುಸ್ಥಿರ ಹಾಗೂ ಸುಭದ್ರ ಸರ್ಕಾರಕ್ಕೆ ತಮ್ಮ ನಾಯಕತ್ವ ಸೂಕ್ತ ಎಂದಿರುವ ಐಸೆನ್‌ಕೋಟ್, ಲಿಕುಡ್ ನಾಯಕರ ಬೆಂಬಲ ಕೋರಿದ್ದಾರೆ.
ಐಸೆನ್‌ಕೋಟ್ ಮುಕ್ತ ಆಹ್ವಾನ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲ ನಾಯಕರು ಐಸನ್‌ಕೋಟ್‌ಗೆ ಬೆಂಬಲ ನೀಡಲು ತಯಾರಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ರಾಜಕೀಯ ಬಿಕಟ್ಟು, ಯುದ್ಧ ಸೇರಿದಂತೆ ಹಲವು ಸವಾಲುಗಳ ನಡುವೆ ಇಸ್ರೇಲ್ ಇದೀಗ ಮೈತ್ರಿ ಕೂಟದ ಸರ್ಕಾರ ರಚನೆಯಾಗುತ್ತಾ ಅನ್ನೋ ಕುತೂಹಲ ಮೂಡಿದೆ. 28 ದಿನಗಳಲ್ಲಿ ಐಸೆನ್‌ಕೋಟ್ ಬಹುಮತ ಸಾಬೀತುಪಡಿಸಲು ವಿಫಲವಾದಲ್ಲಿ, ಅವಧಿಗೂ ಮುನ್ನವೇ ಇಸ್ರೇಲ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.














