ದೀಪಾವಳಿ ಹಬ್ಬಕ್ಕೆ ಮಲ್ಲಿಕಾರ್ಜುನ್ ಖರ್ಗೆ ಶುಭಕೋರಿದ್ದಾರೆ. ಆದರೆ ಶುಭಾಶಯದಲ್ಲೂ ಮುಸ್ಲಿಂ ಒಲೈಕೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಕಾರಣವಾಗಿದ್ದು ಖರ್ಗೆಯ ದೀಪಾವಳಿ ಖುಷಿಯ ಈದ್ ಮಿಲಾದ್ ಹೇಳಿಕೆ.

ನವದೆಹಲಿ (ನ.08) ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಮುಖ ನಾಯಕರು, ಗಣ್ಯರು, ಉದ್ಯಮಿಗಳು, ಸೆಲೆಬ್ರೆಟಿಗಳು ಸೇರಿದಂತೆ ಎಲ್ಲರು ಶುಭಾಶಯ ವಿನಿಮಯ ಮಾಡುತ್ತಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ದೀಪಾವಳಿ ಹಬ್ಬ ಖುಷಿಯ ಈದ್ ಮಿಲಾದ್ ಎಂದಿದ್ದಾರೆ. ಇದು ಸುದೀರ್ಘ ಕಾಲ ಆಚರಿಸುವ ಈದ್ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ವಿರೋಧಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಖರ್ಗೆ ಹೇಳಿಕೆ ಖಂಡಿಸಿದೆ. ಹಿಂದೂಗಳ ದೀಪಾವಳಿ ಹಬ್ಬದ ಶುಭಾಶಯದಲ್ಲೂ ಕಾಂಗ್ರೆಸ್ ಮುಸ್ಲಿಂ ಒಲೈಕೆ ಮಾಡುತ್ತಿದೆ ಎಂದು ಆರೋಪಿಸಿದೆ.

ಸನಾತನ ವಿರೋಧಿ ಹೇಳಿಕೆ ಎಂದು ಬಿಜೆಪಿ

ಮಲ್ಲಿಕಾರ್ಜುನ ಖರ್ಗೆ ದೀಪಾವಳಿ ಹಬ್ಬದಲ್ಲಿ ಈದ್ ಮಿಲಾದ್ ತಂದು ಮುಸ್ಲಿಂ ಒಲೈಕೆ ಮಾಡಲು ಯತ್ನಿಸಿದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸನಾತನ ವಿರೋಧಿ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಒಲೈಕೆಗಾಗಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ. ನಿನ್ನೆ ಸೋನಿಯಾ ಗಾಂಧಿ ಬಾಬ್ರಿ ಮಸೀದಿ ಹೇಳಿಕೆ ನೀಡಿದ್ದರೆ, ಇಂದು ಖರ್ಗೆ ದೀಪಾವಳಿಯನ್ನೇ ಈದ್ ಮಾಡಿದ್ದಾರೆ ಎಂದು ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು, ಇದು ಅತೀ ದೊಡ್ಡ ಹಬ್ಬ, ನಮ್ಮ ಹಿಂದೂಸ್ತಾನದಲ್ಲಿ ಎಲ್ಲರೂ ದೀಪಾವಳಿ ಆಚರಿಸುತ್ತಾರೆ. ಇದರ ಮುಖ್ಯ ಕಾರಣ ದೀಪಾವಳಿ ಖುಷಿಯ ಈದ್ ಹಬ್ಬ. ಈ ಈದ್ ಹಬ್ಬ ಸುದೀರ್ಘ ಕಾಲ ಆಚರಿಸಲಾಗುತ್ತದೆ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ದೀಪಾವಳಿ ಹಬ್ಬದಲ್ಲಿ ಈದ್ ಸೇರಿಸಿ ನೀಡಿದ ಶುಭಾಶಯವನ್ನು ಬಿಜೆಪಿ ಖಂಡಿಸಿದೆ. ಹಿಂದೂಗಳ ಪವಿತ್ರ ಹಬ್ಬದಲ್ಲಿ ಈ ರೀತಿಯ ಒಲೈಕೆ ಯಾಕೆ ಎಂದು ಪ್ರದೀಪ್ ಭಂಡಾರಿ ಪ್ರಶ್ನಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ದೀಪಾವಳಿ ಹಬ್ಬವನ್ನು ಆಚರಿಸದಿದ್ದರೂ, ಶುಭಾಶಯ ಹೇಳದಿದ್ದರೂ, ವಿರೋಧವಿದ್ದರೂ ಪರ್ವಾಗಿಲ್ಲ, ಆದರೆ ಹೇಳುವುದಿದ್ದರೆ ಸರಿಯಾಗಿ ಹೇಳಿ, ಈದ್ ಸೇರಿಸುವುದು ಬೇಡ ಎಂದು ಕಮೆಂಟ್ಸ್ ವ್ಯಕ್ತವಾಗಿದೆ. ಇದೇ ವೇಳೆ ಕೆಲವರು ಖರ್ಗೆ ಪರವಾಗಿ ಕಮೆಂಟ್ಸ್ ಮಾಡಿದ್ದಾರೆ. ಎಲ್ಲಾ ಹಬ್ಬಗಳ ಆಶಯ ಒಂದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹೃದಯದಲ್ಲಿ ಬಾಬರ್

ಸೋನಿಯಾ ಗಾಂಧಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಾಗ ವಾಹನಿಗಳಲ್ಲಿ ಸುದ್ದಿ ನೋಡಿ ಅತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಈ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಈಗಲೂ ಕಾಂಗ್ರೆಸ್ ಹೃದಯದಲ್ಲಿ ಬಾಬರ್ ಇದ್ದಾನೆ ಹೊರತು ಶ್ರೀರಾಮನಿಲ್ಲ ಎಂದು ಬಿಜೆಪಿ ಹೇಳಿತ್ತು.

Scroll to load tweet…