ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. 2026 ಮತ್ತು 2027 ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಅವರನ್ನು ಕೈಬಿಡಲಾಗಿದೆ. ಅವರು ಬರೋಡಾ ತಂಡವನ್ನು ಪ್ರತಿನಿಧಿಸುತ್ತಿದ್ದರು. ಅವರ ಬದಲಿಗೆ ಸಹೋದರ ಕೃನಾಲ್‌ಗೆ ಕ್ಯಾಪ್ಟನ್ಸಿ ನೀಡಲಾಗಿದೆ.

ಬೆಂಗಳೂರು: ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಅವರು ಮತ್ತೆ ಮರಳುವುದು ಸದ್ಯಕ್ಕಿಲ್ಲ. 2026 ಮತ್ತು 2027 ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಅವರನ್ನು ಕೈಬಿಡಲಾಗಿದೆ. ಅವರು ಬರೋಡಾ ತಂಡವನ್ನು ಪ್ರತಿನಿಧಿಸುತ್ತಿದ್ದರು.

ನವೆಂಬರ್ 14 ರಿಂದ ಪಂದ್ಯಾವಳಿಗಳು ಶುರುವಾಗಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ಸಹೋದರ ಕೃನಾಲ್ ಪಾಂಡ್ಯ ಅವರು ಬರೋಡಾ ತಂಡವನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಇದ್ದಾರೆ. ಅವರು 2026 ಮೇ 24 ರಂದು ಕೊನೆಯ ಬಾರಿಗೆ ಐಪಿಎಲ್ ಆಡಿದ್ದರು. ಅದೇ ಅವರ ಲಾಸ್ಟ್ ಪಂದ್ಯವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಪಂದ್ಯವನ್ನ ಆಡಿಲ್ಲ.

ಕಳೆದ ಐಪಿಎಲ್ ಸಂದರ್ಭದಲ್ಲಿ ಪಾಂಡ್ಯ ಅವರು ಬೆನ್ನು ನೋವು ಮತ್ತು ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ನಂತರ ಬೆಂಗಳೂರಿನ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನೊ ಕೊನೆಯ ಅಂತಾರಾಷ್ಟ್ರೀಯ ಪಂದ್ಯ 2026 ಟಿ-20 ವಿಶ್ವಕಪ್ ಫೈನಲ್ ಪಂದ್ಯ ಕೊನೆಯದಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಪಂದ್ಯಗಳನ್ನ ಆಡಲಿದೆ. ಮೂರು ಏಕದಿನ ಹಾಗೂ ಟಿ-20 ಪಂದ್ಯಗಳನ್ನ ಆಡಲಿದೆ. ಆದರೆ ಹಾರ್ದಿಕ್ ಪಾಂಡ್ಯ ಆಡುತ್ತಾರೋ ಇಲ್ಲವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ವಿಶ್ವಕಪ್ ಗಮನದಲ್ಲಿ ಇಟ್ಟುಕೊಂಡು ಬಿಸಿಸಿಐ ಯಾವುದೇ ರಿಸ್ಕ್ ತೆಗೆದುಕೊಳ್ಳಲು ರೆಡಿ ಇಲ್ಲ ಎಂದು ವರದಿಯಾಗಿದೆ.

ಈ ಬಗ್ಗೆ ಖುದ್ದು ಕೋಚ್ ಗೌತಮ್ ಗಂಭೀರ್ ಅವರೇ ಸ್ಪಷ್ಟಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರಿತ್ ಬುಮ್ರಾ ಅವರಂಥ ಆಟಗಾರರನ್ನು ಅವರು ಸಂಪೂರ್ಣ ಫಿಟ್ ಆಗುವ ವರೆಗೂ ನಾವು ಮೈದಾನಕ್ಕೆ ಇಳಿಸುವುದಿಲ್ಲ, ಅಪೂರ್ಣ ಫಿಟ್ ಹೊಂದಿರೋರರನ್ನು ವಿಶ್ವಕಪ್‌ಗೆ ಕರೆದೊಯ್ಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಟೀಂ ಇಂಡಿಯಾ ಪೆರ 94 ಏಕದಿನ ಪಂದ್ಯಗಳನ್ನ ಆಡಿರುವ ಪಾಂಡ್ಯ, 68 ಇನ್ನಿಂಗ್ಸ್‌ನಲ್ಲಿ 1904 ರನ್‌ಗಳನ್ನ ಬಾರಿಸಿದರೆ, 138 ಟಿ-ಪಂದ್ಯಗಳನ್ನ ಆಡಿರುವ ಅವರು, 2288 ರನ್‌ಗಳನ್ನ ಬಾರಿಸಿದ್ದಾರೆ. ಇನ್ನು 11 ಟೆಸ್ಟ್ ಪಂದ್ಯಗಳನ್ನ ಆಡಿದ್ದಾರೆ.

ಬರೋಡಾ ತಂಡವನ್ನು ಹಾರ್ದಿಕ್ ಬದಲಿಗೆ ಅವರ ಸಹೋದರ ಕೃನಾಲ್ ಪಾಂಡ್ಯ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಅನುಭವಿ ದೀಪಕ್ ಹೂಡಾ, ಬೌಲಿಂಗ್ ಮಾಂತ್ರಿಕ ರಸಿಕ್ ಸಲಾಂ ದಾರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ತಂಡದಲ್ಲಿ ಯಾರೆಲ್ಲ ಇದ್ದಾರೆ?

ಕೃನಾಲ್ ಪಾಂಡ್ಯ (ಕ್ಯಾಪ್ಟನ್), ಅತಿತ್ ಸೇಠ್ (ಉಪನಾಯಕ), ದೀಪಕ್ ಹೂಡಾ, ಶಿವಾಲಿಕ್ ಶರ್ಮಾ, ಶಾಶ್ವತ್ ರಾವತ್, ಅಮಿತ್ ಪಾಸಿ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭಾನು ಪಾನಿಯಾ, ಮಹೇಶ್ ಪಿಥಿಯಾ, ಪರೀಕ್ಷಿತ್ ಪಾಟೀದಾರ್, ರಾಜ್ ದುರ್ಲಮ್, ರಾಸ್ ದುರ್ಲಮ್, ಪಟೇಲ್ ಮತ್ತು ಸಫ್ಫಾನ್ ಪಟೇಲ್ ತಂಡದಲ್ಲಿದ್ದಾರೆ.