ರಾಮಾಯಣ ಸಿನಿಮಾದಲ್ಲಿ ರವಿ ದುಬೆ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ರವಿ ದುಬೆ ಪತ್ನಿ ಪ್ರಸಿದ್ಧ ನಟಿ ಸುರ್ಗುಣ್ ಮೆಹ್ತಾ ಭಾವುಕರಾಗಿದ್ದಾರೆ. ರವಿ ದುಬೆಗೆ ಸಿಕ್ಕ ಗೆಲುವುನ್ನು ಕೊಂಡಾಡಿ, ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ರಾಮಾಯಣ ಸಿನಿಮಾದಲ್ಲಿ ರವಿ ದುಬೆ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ರವಿ ದುಬೆ ಪತ್ನಿ ಪ್ರಸಿದ್ಧ ನಟಿ ಸುರ್ಗುಣ್ ಮೆಹ್ತಾ ಭಾವುಕರಾಗಿದ್ದಾರೆ. ರವಿ ದುಬೆಗೆ ಸಿಕ್ಕ ಗೆಲುವುನ್ನು ಕೊಂಡಾಡಿ, ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ಏನಂದ್ರು ಸುರ್ಗುಣ್ ಮೆಹ್ತಾ?

ನಾನು ಹೇಳಿದ್ದೆ.. ಈ ದೀಪಾವಳಿಗೆ ನಮ್ಮ ವನವಾಸ ಮುಗಿಯುತ್ತದೆ ಎಂದು..

ವಾಲ್ಮೀಕಿ ರಾಮಾಯಣದಲ್ಲಿ ಲಕ್ಷ್ಮಣನು ಶ್ರೀರಾಮನಿಗೆ ಹೇಳುವ ಒಂದು ಮಾತಿದೆ. ಅದು ಏನೆಂದರೆ.. ದೃಢಸಂಕಲ್ಪ ಮತ್ತು ಉತ್ಸಾಹಕ್ಕಿಂತ ದೊಡ್ಡ ಶಕ್ತಿ ಬೇರೊಂದಿಲ್ಲ. ಆ ಉತ್ಸಾಹವನ್ನು ಮನಸ್ಸಿನಲ್ಲಿ ಜೀವಂತವಾಗಿ ಇಟ್ಟುಕೊಂಡಿರುವವನಿಗೆ ಈ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು.

ನಿಮ್ಮ ಅಂತರಂಗಕ್ಕೆ ಇದು ಮೊದಲಿನಿಂದಲೂ ತಿಳಿದಿತ್ತು. 21 ವರ್ಷಗಳ ಕಾಯುವಿಕೆ, ಏಳು-ಬೀಳುಗಳು, ತಿರಸ್ಕಾರಗಳು, ಜನರ ತೀರ್ಪುಗಳು ಮತ್ತು ಅಡೆತಡೆಗಳೆಲ್ಲವೂ ಇಂದು ನಿಮ್ಮ ಅಚಲ ನಂಬಿಕೆ ಹಾಗೂ ಪರಿಶ್ರಮದ ಮುಂದೆ ಸೋತು ಹೋಗಿವೆ.

ಅತ್ಯಂತ ಕಷ್ಟದ ದಿನಗಳಲ್ಲೂ ಸಹ ನೀವು ಎಂದಿಗೂ ಕೆಟ್ಟದಾಗಿ ಮಾತನಾಡಲಿಲ್ಲ, ತಪ್ಪುಗಳನ್ನ ಮಾಡಲಿಲ್ಲ. ಪ್ರತಿ ಕಷ್ಟದಲ್ಲೂ ತಪಸ್ಸಿನಂತೆ ಶ್ರಮಪಟ್ಟಿರಿ. ಸಮಯ ಬಂದಾಗ ಯಾವುದೇ ನೆಪ ಇರಬಾರದು ಎಂಬ ಕಾರಣಕ್ಕೆ. ನಿಮ್ಮನ್ನು ನೀವು ಉತ್ತಮಗೊಳಿಸಿಕೊಳ್ಳಲು ಮತ್ತು ಹೊಸತನ್ನು ಕಲಿಯಲು ಸಿದ್ಧರಾಗಿದ್ದಿರಿ.

ಇಂದು ನಾನು ಯಾರನ್ನು ಭೇಟಿಯಾದರೂ, ಇಂಟರ್ನೆಟ್‌ನಲ್ಲಿ ಏನೇ ನೋಡಿದರೂ ನಿಮ್ಮ ಈ ಗೆಲುವು ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಗೆಲುವಿನಂತೆ ಭಾಸವಾಗುತ್ತಿದೆ. ನಿಮ್ಮ ಜಯವು ಜನರಿಗೆ ಭರವಸೆ ನೀಡುತ್ತದೆ; 'ಒಳ್ಳೆಯತನಕ್ಕೆ ಯಾವಾಗಲೂ ಗೆಲುವು ಸಿಗುತ್ತದೆ' ಎಂಬ ನಂಬಿಕೆ ಮೂಡಿಸುತ್ತದೆ.

ಇಂದು ನನ್ನ ಮನಸ್ಸು ತುಂಬಿ ಬಂದಿದೆ. ಏಕೆಂದರೆ ನಾನು ಯಾವಾಗಲೂ ಹೇಳುತ್ತಿದ್ದ ಮಾತು. ನನ್ನ ಪತಿ ದೇವರಿಗೆ ಸಮಾನ (ಮೇರಾ ಬಂದಾ ರಬ್ ಹೈ) ಎಂಬುದನ್ನು ಇನ್ಮುಂದೆ ಎಲ್ಲರೂ ಒಪ್ಪಿ ಹೇಳುತ್ತಾರೆ. ನಾನು ನಿಮ್ಮ ಬಗ್ಗೆ ಯಾವಾಗಲೂ ಹೆಮ್ಮೆ ಪಡುವ ಹೆಂಡತಿ; ಅಷ್ಟೇ ಅಲ್ಲದೆ ಜೀವನಪೂರ್ತಿ ನಿಮ್ಮ ಅತಿದೊಡ್ಡ ಮತ್ತು ಅತ್ಯಂತ ಹೆಮ್ಮೆಯ ಅಭಿಮಾನಿ ಕೂಡ ನಾನೇ.

ನೀವೇ ನನ್ನ ಬೆಳಕು. ನೀವು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಿ. ಈ ದೀಪಾವಳಿಯನ್ನು ನನ್ನ ಜೀವನದ ಅತ್ಯಂತ ಪ್ರಕಾಶಮಾನವಾದ ಹಬ್ಬವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

View post on Instagram
 

ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಭಗವಾನ್ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ನಟಿಸಿದ್ದಾರೆ. ಕಥೆಯು ಋಷಿ ವಿಶ್ವಾಮಿತ್ರರ ಜೊತೆ ರಾಮನ ತರಬೇತಿ, ಮಿಥಿಲಾದಲ್ಲಿ ಶಿವನ ಬಿಲ್ಲು ಮುರಿದ ನಂತರ ಸೀತಾ (ಸಾಯಿ ಪಲ್ಲವಿ) ಅವರೊಂದಿಗಿನ ವಿವಾಹ ಮತ್ತು ಅಯೋಧ್ಯೆಯಿಂದ ಅವನ 14 ವರ್ಷಗಳ ವನವಾಸದ ಬಗ್ಗೆ ಕಥೆ ಹೇಳುತ್ತದೆ. ರಾಮ, ಸೀತೆ ಮತ್ತು ಲಕ್ಷ್ಮಣ ಕಾಡಿನಲ್ಲಿ ನೆಲೆಸುತ್ತಿದ್ದಂತೆ ರಾವಣನ ಸಹೋದರಿ ಶೂರ್ಪನಖಿಯೊಂದಿಗಿನ ಮುಖಾಮುಖಿಯು ಸೀತೆಯ ಅಪಹರಣಕ್ಕೆ ಕಾರಣವಾಗುವ ಘಟನೆಗಳ ಸರಮಾಲೆಯನ್ನೂ ತಿಳಿಸುತ್ತದೆ.

ರಾಮಾಯಣದ ಎರಡನೇ ಭಾಗವು 2028 ರ ದೀಪಾವಳಿಗೆ ಬರಲಿದೆ. 2027 ರ ಬಿಡುಗಡೆಗೆ ನಿಗದಿಯಾಗಿದ್ದ ಚಿತ್ರದ ರಿಲೀಸ್‌ ಡೇಟ್‌ ಮತ್ತೆ ಮುಂದಕ್ಕೆ ಹಾಕಲಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಮೊದಲ ಭಾಗ ಚೆನ್ನಾಗಿ ಓಡಿದರೆ ಮೂರನೇ ಭಾಗವನ್ನೂ ಮಾಡುವ ಬಗ್ಗೆ ಪರೋಕ್ಷವಾಗಿ ಚಿತ್ರತಂಡ ಸುಳಿವು ನೀಡಿದೆ.