10:26 PM (IST) Jun 26

India Latest News Live 26 June 2026ಗ್ರಾಹಕರಿಗೆ ಆಪಲ್ ಶಾಕ್; ಭಾರತದಲ್ಲಿ ಮ್ಯಾಕ್‌ಬುಕ್, ಐಪ್ಯಾಡ್, ಆಪಲ್ ಟಿವಿ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಳ!

ಮೆಮೊರಿ ಘಟಕಗಳ ಬೆಲೆ ಏರಿಕೆಯಿಂದಾಗಿ ಆಪಲ್ ಭಾರತದಲ್ಲಿ ತನ್ನ ಮ್ಯಾಕ್‌ಬುಕ್, ಐಪ್ಯಾಡ್, ಮತ್ತು ಹೋಮ್‌ಪಾಡ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳ ಬೇಡಿಕೆಯೇ ಈ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಸದ್ಯಕ್ಕೆ ಐಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Read Full Story
09:50 PM (IST) Jun 26

India Latest News Live 26 June 2026ಟಿ20 ವಿಶ್ವ ಚಾಂಪಿಯನ್‌ ಟೀಮ್ ಇಂಡಿಯಾಗೆ ಶಾಕ್!; ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಭಾರತಕ್ಕೆ 34 ರನ್‌ಗಳ ಹೀನಾಯ ಸೋಲು!

ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾ 34 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, ಸರಣಿ ಸಮಬಲಕ್ಕಾಗಿ ಹೋರಾಡಬೇಕಿದೆ.
Read Full Story
08:04 PM (IST) Jun 26

India Latest News Live 26 June 2026ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣದ Inside Story - ಸಿಸಿಟಿವಿ ಕಣ್ಣು ತಪ್ಪಿಸಿ ಕೋಟ್ಯಂತರ ಹಣ ಲೂಟಿ ಮಾಡಿದ ಕಿರಾತಕರು!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಮತ್ತು ಚಿನ್ನಾಭರಣಗಳನ್ನು ನೌಕರರೇ ಕಳ್ಳತನ ಮಾಡಿರುವ ಹಗರಣ ಬಯಲಾಗಿದೆ. ಹಿಡನ್ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಬ್ಯಾಂಕ್ ಠೇವಣಿಯಲ್ಲಾದ ವ್ಯತ್ಯಾಸಗಳಿಂದ ಈ ಕೃತ್ಯ ಬೆಳಕಿಗೆ ಬಂದಿದೆ.

Read Full Story
07:03 PM (IST) Jun 26

India Latest News Live 26 June 2026ಮನೆ ಅಂಗಳದಲ್ಲಿ ಸಿಕ್ಕ ಕಾಂಡೋಮ್‌ - ವಿದೇಶದಲ್ಲಿರೋ ಪತ್ನಿಗೆ ವಿಷಯ ತಿಳಿಸಿದ್ದಕ್ಕೆ ಅತ್ತೆಯನ್ನೇ ರೇ* ಮಾಡಿದ ಅಳಿಯ

ಕೇರಳದ ಕೊಲ್ಲಂನಲ್ಲಿ, ಅಕ್ರಮ ಸಂಬಂಧದ ಬಗ್ಗೆ ವಿದೇಶದಲ್ಲಿದ್ದ ಮಗಳಿಗೆ ತಿಳಿಸಿದ್ದಕ್ಕೆ ಅಳಿಯನೇ ವೃದ್ಧ ಅತ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಲವು ದಿನಗಳಿಂದ ನಡೆಯುತ್ತಿದ್ದ ಈ ಕಿರುಕುಳವನ್ನು ವೃದ್ಧೆ ಸಂಬಂಧಿಕರಿಗೆ ತಿಳಿಸಿದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read Full Story
06:46 PM (IST) Jun 26

India Latest News Live 26 June 2026Operation Sindoor ಹುತಾತ್ಮ 6 ಸೈನಿಕರ ಹೆಸರನ್ನು ಮೊದಲ ಬಾರಿಗೆ ಪ್ರಕಟಿಸಿದ ಕೇಂದ್ರ ಸರ್ಕಾರ

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ನಡೆದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಆರು ಸಶಸ್ತ್ರ ಪಡೆಗಳ ಸಿಬ್ಬಂದಿ ಹೆಸರುಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವೀರ ಯೋಧರ ಹೆಸರುಗಳನ್ನು ನವದೆಹಲಿಯ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಕೆತ್ತಿಸಿ ಗೌರವಿಸಲಾಗುವುದು.

Read Full Story
06:45 PM (IST) Jun 26

India Latest News Live 26 June 2026Kushboo Sundar Daughter Marriage - ಅಬ್ಬರವಿಲ್ಲ‌, ಜನಜಂಗುಳಿ ಇಲ್ಲ; ಮಗಳ ಮದುವೆ ಮಾಡಿದ 55ರ ಖುಷ್ಬೂ ಸುಂದರ್

Kushboo Sundar Daughter Wedding: ರಣಧೀರ ಸಿನಿಮಾ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದ 55ರ ಹರೆಯದ ಖುಷ್ಬೂ ಸುಂದರ್‌ ಈಗ ಮಗಳ ಮದುವೆ ಖುಷಿಯಲ್ಲಿದ್ದಾರೆ. ಮಗಳ ಮದುವೆಯ ಫೋಟೋಗಳ ಸಮೇತ ಅವರು ಸೋಶಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ನೋಡಿ.

Read Full Story
06:16 PM (IST) Jun 26

India Latest News Live 26 June 2026ಅಜ್ಮಲ್‌ ಕಸಬ್‌ಗೆ ಶಿಕ್ಷೆ ಕೊಡಿಸಿದ್ದ ಹಿರಿಯ ವಕೀಲ ಉಜ್ವಲ್‌ ನಿಕಮ್‌, ಕೇತನ್‌ ಅಗರ್ವಾಲ್‌ ಕೇಸ್‌ನಲ್ಲಿ SPP

ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಭಾವಿ ಪತ್ನಿ ಹಾಗೂ ಆಕೆಯ ಪ್ರೇಮಿಯಿಂದ ಕೊಲೆಯಾದ ಕೇತನ್ ಅಗರ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೃತನ ಕುಟುಂಬಕ್ಕೆ ನ್ಯಾಯದ ಭರವಸೆ ನೀಡಿದ್ದಾರೆ. 

Read Full Story
05:26 PM (IST) Jun 26

India Latest News Live 26 June 20266,526 ಕೋಟಿ ರೂ. ದುರುಪಯೋಗ ಪ್ರಕರಣ - ಅಂಬಾನಿಗೆ ಜತೆ ಸಂಧಾನಕ್ಕೆ ಒಪ್ಪದ ಸೆಬಿ, ರಿಲಯನ್ಸ್ ಷೇರು ವಹಿವಾಟು ಸ್ಥಗಿತ!

ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ 6,526 ಕೋಟಿ ರೂ. ನಿಧಿ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ, ಉದ್ಯಮಿ ಅನಿಲ್ ಅಂಬಾನಿ ಸಲ್ಲಿಸಿದ್ದ ರಾಜಿ ಸಂಧಾನದ ಅರ್ಜಿಯನ್ನು ಸೆಬಿ ತಿರಸ್ಕರಿಸಿದೆ. ಪ್ರಕರಣದ ಗಂಭೀರತೆ ಮತ್ತು ಸಿಬಿಐ, ಇಡಿ ಯಂತಹ ಇತರ ತನಿಖಾ ಸಂಸ್ಥೆಗಳ ಒಳಗೊಳ್ಳುವಿಕೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಂಬಾನಿ ಮತ್ತು ಅವರ ಕಂಪನಿಗಳು ಕಠಿಣ ಕ್ರಮಗಳನ್ನು ಎದುರಿಸುವ ಸಾಧ್ಯತೆಯಿದೆ.
Read Full Story
04:38 PM (IST) Jun 26

India Latest News Live 26 June 2026ಐರ್ಲೆಂಡ್‌ನಲ್ಲಿ ಜೋರಾಯ್ತು ವೈಭವ್ ಸೂರ್ಯವಂಶಿ ಕ್ರೇಜ್! ಭಾರತ-ಐರ್ಲೆಂಡ್ ಪಂದ್ಯದ ಟಿಕೆಟ್‌ಗಳು ನಿಮಿಷಗಳಲ್ಲೇ ಸೋಲ್ಡ್ ಔಟ್

15 ವರ್ಷದ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಅವರ ನಿರೀಕ್ಷಿತ ಅಂತಾರಾಷ್ಟ್ರೀಯ ಪದಾರ್ಪಣೆಯು ಐರ್ಲೆಂಡ್‌ನಲ್ಲಿ 'ವೈಭವ್ ಫೀವರ್' ಸೃಷ್ಟಿಸಿದೆ. ಭಾರತ-ಐರ್ಲೆಂಡ್ ಟಿ20 ಸರಣಿಯ ಟಿಕೆಟ್‌ಗಳು ನಿಮಿಷಗಳಲ್ಲಿ ಮಾರಾಟವಾಗಿದ್ದು, ಕಡಿಮೆ ಸಾಮರ್ಥ್ಯದ ಕ್ರೀಡಾಂಗಣ ಆಯ್ಕೆ ಮಾಡಿದ್ದಕ್ಕೆ ಕ್ರಿಕೆಟ್ ಐರ್ಲೆಂಡ್ ಮಂಡಳಿ ಅಭಿಮಾನಿಗಳ ಆಕ್ರೋಶ ಎದುರಿಸುತ್ತಿದೆ.
Read Full Story
04:33 PM (IST) Jun 26

India Latest News Live 26 June 2026ಸನಾತನ ಧರ್ಮದ ನಂಬಿಕೆಯ ಜೊತೆ ಆಟವಾಡಿದವರ ಸುಮ್ಮನೆ ಬಿಡೋದಿಲ್ಲ - ದೇಣಿಗೆ ಹಗರಣದ ಬೆನ್ನಲ್ಲೇ ಯೋಗಿ ಆದಿತ್ಯನಾಥ್‌ ಎಚ್ಚರಿಕೆ

ಅಯೋಧ್ಯೆ ರಾಮಮಂದಿರ ದೇಣಿಗೆಯಲ್ಲಿನ ದುರುಪಯೋಗದ ಆರೋಪಗಳ ಕುರಿತು ಸಿಎಂ ಯೋಗಿ ಆದಿತ್ಯನಾಥ್ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿರುವವರು, ಸಾಕ್ಷ್ಯಗಳಿದ್ದರೆ ಎಸ್‌ಐಟಿ ಮುಂದೆ ಹಾಜರುಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

Read Full Story
04:32 PM (IST) Jun 26

India Latest News Live 26 June 2026ಈಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಸಿಗುತ್ತೆ ಕ್ಲಾಸಿಕ್ ಲುಕ್‌ನ 'ಜಾವಾ 42 ಐವರಿ' ಬೈಕ್! ಬುಕ್‌ ಮಾಡೋದು ಹೇಗೆ?

ರೆಟ್ರೋ ವಿನ್ಯಾಸದ ಜಾವಾ 42 ಐವರಿ ಬೈಕ್ ಇದೀಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಬುಕಿಂಗ್‌ಗೆ ಲಭ್ಯವಿದೆ. ಶಕ್ತಿಶಾಲಿ ಎಂಜಿನ್, ಆಕರ್ಷಕ ನೋಟ ಹೊಂದಿರುವ ಈ ಬೈಕ್, ಅತ್ಯುತ್ತಮ ವಾರಂಟಿ ಮತ್ತು ರೋಡ್‌ಸೈಡ್ ಅಸಿಸ್ಟೆನ್ಸ್ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.
Read Full Story
04:10 PM (IST) Jun 26

India Latest News Live 26 June 2026ಬಾಂಗ್ಲಾದೇಶ ಎದುರು ಗೆಲ್ಲುತ್ತಿದ್ದಂತೆಯೇ ಭಾರತದ ಸೆಮೀಸ್ ಹಾದಿ ಮತ್ತಷ್ಟು ಸುಗಮ! ಟಿ20 ವಿಶ್ವಕಪ್ ಸೆಮೀಸ್ ಲೆಕ್ಕಾಚಾರ ಇಲ್ಲಿದೆ

ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಭಾರತ ಮಹಿಳಾ ತಂಡವು ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಈ ಗೆಲುವಿನಿಂದ ಸೆಮಿಫೈನಲ್ ಆಸೆ ಜೀವಂತವಾಗಿದ್ದು, ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫಲಿತಾಂಶದ ಮೇಲೆ ಸೆಮೀಸ್ ಪ್ರವೇಶ ನಿರ್ಧಾರವಾಗಲಿದೆ.
Read Full Story
04:05 PM (IST) Jun 26

India Latest News Live 26 June 2026Nandamuri Balakrishna Movie - 112ನೇ ಸಿನಿಮಾ ಮುಹೂರ್ತದಲ್ಲಿ ನಂದಮೂರಿ ಬಾಲಕೃಷ್ಣ; ಸಖತ್‌ ಕಾಂಬಿನೇಶನ್‌ ಇದು

Actor Nandamuri Balakrishna Movie: ತೆಲುಗು ನಟ ಬಾಲಯ್ಯ 112ನೇ ಸಿನಿಮಾ ಅಮರಾವತಿಯಲ್ಲಿ ಸೆಟ್ಟೇರಿದೆ. ಈ ಅದ್ದೂರಿ ಮುಹೂರ್ತ ಸಮಾರಂಭಕ್ಕೆ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್, ಕಂದುಲ ದುರ್ಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Read Full Story
04:05 PM (IST) Jun 26

India Latest News Live 26 June 2026ಆಡಿ ಮತ್ತು ಪೋರ್ಷೆ ತಯಾರಿಕಾ ಕಂಪೆನಿ ವೋಕ್ಸ್‌ವ್ಯಾಗನ್‌ನಲ್ಲಿ 1ಲಕ್ಷ ನೌಕರರ ವಜಾ! - 4 ಕಾರ್ಖಾನೆಗಳ ಮುಚ್ಚಲು ನಿರ್ಧಾರ!

ಜಾಗತಿಕ ಪೈಪೋಟಿ ಎದುರಿಸಲು, ವೋಕ್ಸ್‌ವ್ಯಾಗನ್ ಸಿಇಒ ಆಲಿವರ್ ಬ್ಲೂಮ್ ಒಂದು ಲಕ್ಷ ಉದ್ಯೋಗ ಕಡಿತ ಮತ್ತು ಜರ್ಮನಿಯ ನಾಲ್ಕು ಪ್ರಮುಖ ಕಾರ್ಖಾನೆಗಳನ್ನು ಮುಚ್ಚುವ ಕಠಿಣ ಯೋಜನೆ ಪ್ರಸ್ತಾಪಿಸಿದ್ದಾರೆ. ಈ ವೆಚ್ಚ ಕಡಿತದ ಕ್ರಮವು ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದೆ, ಇದು ಕಂಪನಿಯಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
Read Full Story
02:36 PM (IST) Jun 26

India Latest News Live 26 June 2026ಕ್ರಿಕೆಟ್ ಬಿಡಲು ನಿರ್ಧರಿಸಿದ್ದ ಯುವಕ ಈಗ ಭಾರತಕ್ಕೆ ಸವಾಲು; ಜೈ ಮುಂದ್ರಾ ಸ್ಪೂರ್ತಿದಾಯಕ ಪಯಣ!

ರಾಜಸ್ಥಾನ ಮೂಲದ ಆಲ್‌ರೌಂಡರ್ ಜೈ ಮುಂದ್ರಾ, ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಒಂದು ಕಾಲದಲ್ಲಿ ಕ್ರಿಕೆಟ್ ವೃತ್ತಿಜೀವನವನ್ನೇ ತೊರೆಯುವ ಹಂತದಲ್ಲಿದ್ದ ಮುಂದ್ರಾ, ಐರ್ಲೆಂಡ್‌ಗೆ ತೆರಳಿದ ನಂತರ ತಮ್ಮ ಕಠಿಣ ಪರಿಶ್ರಮದಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Read Full Story
01:50 PM (IST) Jun 26

India Latest News Live 26 June 2026Priyanka Chopra - ಹಾಲಿವುಡ್‌ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ; ಇದಕ್ಕಾಗಿ ನಟಿ ಕಂಡುಕೊಂಡ ದಾರಿ ಯಾವುದು ಗೊತ್ತಾ?

ಪ್ರಿಯಾಂಕಾ ಚೋಪ್ರಾ ಅಮೆರಿಕಕ್ಕೆ ಕಾಲಿಟ್ಟಾಗ ಅಲ್ಲಿನ ಸ್ಟುಡಿಯೋಗಳು ಭಾರತೀಯ ನಟಿಯರನ್ನು ಕೇವಲ ಸಣ್ಣ ಅಥವಾ ಪೋಷಕ ಪಾತ್ರಗಳಿಗೆ ಸೀಮಿತಗೊಳಿಸಿದ್ದವು. ಆದರೆ ಪ್ರಿಯಾಂಕಾ ಅವರಿಗೆ ಬೇಕಾಗಿದ್ದು ಸೈಡ್ ರೋಲ್ ಅಲ್ಲ, ಬದಲಿಗೆ ಕಥೆಯನ್ನು ಮುನ್ನಡೆಸುವ ನಾಯಕಿ ಪಾತ್ರ.

Read Full Story
12:50 PM (IST) Jun 26

India Latest News Live 26 June 2026ಭಾರತ-ಐರ್ಲೆಂಡ್ ಮೊದಲ ಟಿ20ಗೆ ಮಳೆ ಭೀತಿ! 15ರ ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚೊಚ್ಚಲ ಅವಕಾಶ?

ಶುಕ್ರವಾರದಿಂದ ಭಾರತ ಮತ್ತು ಐರ್ಲೆಂಡ್‌ ನಡುವಿನ ಟಿ20 ಸರಣಿ ಆರಂಭವಾಗಲಿದ್ದು, ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ತಂಡ ಕಣಕ್ಕಿಳಿಯಲಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
Read Full Story
12:44 PM (IST) Jun 26

India Latest News Live 26 June 2026ವಂದೇ ಭಾರತ್ ರೈಲಿನಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್, ಬಾಕ್ಸ್​​ ಬುಕ್​ ಮಾಡೋದು ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಈಗ ಸಾಕುಪ್ರಾಣಿಗಳಿಗಾಗಿ ವಿಶೇಷ ಪೆಟ್ ಬಾಕ್ಸ್ ಬುಕಿಂಗ್ ಸೌಲಭ್ಯ ಲಭ್ಯವಿದೆ. ಪ್ರಯಾಣಿಕರು ದೃಢೀಕೃತ ಟಿಕೆಟ್ ಮತ್ತು ಅಗತ್ಯ ದಾಖಲೆಗಳೊಂದಿಗೆ ನಿಲ್ದಾಣದ ಪಾರ್ಸೆಲ್ ಕಚೇರಿಯಲ್ಲಿ ಈ ಸೇವೆಯನ್ನು ಬುಕ್ ಮಾಡಬಹುದು. ಸಾಕುಪ್ರಾಣಿಗಳನ್ನು ಪ್ರಯಾಣಿಕರ ಕ್ಯಾಬಿನ್‌ಗಳ ಒಳಗೆ ಅನುಮತಿಸಲಾಗುವುದಿಲ್ಲ, ಬದಲಿಗೆ ಮೀಸಲಾದ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ.
Read Full Story
12:04 PM (IST) Jun 26

India Latest News Live 26 June 2026ವೈಭವ್​ ಸೂರ್ಯವಂಶಿಗಾಗಿ ಪಾಕಿಸ್ತಾನದಲ್ಲಿ ಗೂಗಲ್ ಹುಡುಕಾಟ - ಏನೆಲ್ಲಾ ಸರ್ಚ್​ ಮಾಡಿದ್ರು ನೋಡಿ

15 ವರ್ಷದ ಭಾರತೀಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಯಿಂದ ಪಾಕಿಸ್ತಾನದಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಗೂಗಲ್ ಟ್ರೆಂಡ್ಸ್ ಪ್ರಕಾರ, ಪಾಕಿಸ್ತಾನಿ ಅಭಿಮಾನಿಗಳು ಅವರ ಬಗ್ಗೆ ಹೆಚ್ಚು ಹುಡುಕಾಟ ನಡೆಸುತ್ತಿದ್ದಾರೆ.

Read Full Story
11:47 AM (IST) Jun 26

India Latest News Live 26 June 2026ಕೇತನ್ ಬದುಕಿದ್ದಾನೆ ಎಂದಾಗ ಭಯಗೊಂಡ ಸಿಯಾ? ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಅಂಶಗಳು!

ಪುಣೆಯ ಕೇತನ್ ಅಗರ್ವಾಲ್‌ ಹತ್ಯೆ ಪ್ರಕರಣದಲ್ಲಿ, ಆರೋಪಿಗಳಾದ ಸಿಯಾ ಗೋಯಲ್‌ ಮತ್ತು ಆಕೆಯ ಪ್ರಿಯಕರ ಚೇತನ್‌ ಚೌಧರಿ ವಿಚಾರಣೆ ವೇಳೆ ಪರಸ್ಪರ ದೋಷಾರೋಪಣೆ ಮಾಡುತ್ತಿದ್ದಾರೆ. ಹತ್ಯೆಗೂ ಮುನ್ನ ಇಬ್ಬರೂ 6 ತಿಂಗಳಲ್ಲಿ 2004 ಬಾರಿ ಕರೆ ಮಾಡಿ, 238 ಗಂಟೆಗಳ ಕಾಲ ಮಾತನಾಡಿದ್ದರು ಎಂಬ ಆಘಾತಕಾರಿ ಅಂಶವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
Read Full Story