MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Kushboo Sundar Daughter Marriage: ಅಬ್ಬರವಿಲ್ಲ‌, ಜನಜಂಗುಳಿ ಇಲ್ಲ; ಮಗಳ ಮದುವೆ ಮಾಡಿದ 55ರ ಖುಷ್ಬೂ ಸುಂದರ್

Kushboo Sundar Daughter Marriage: ಅಬ್ಬರವಿಲ್ಲ‌, ಜನಜಂಗುಳಿ ಇಲ್ಲ; ಮಗಳ ಮದುವೆ ಮಾಡಿದ 55ರ ಖುಷ್ಬೂ ಸುಂದರ್

Kushboo Sundar Daughter Wedding: ರಣಧೀರ ಸಿನಿಮಾ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದ 55ರ ಹರೆಯದ ಖುಷ್ಬೂ ಸುಂದರ್‌ ಈಗ ಮಗಳ ಮದುವೆ ಖುಷಿಯಲ್ಲಿದ್ದಾರೆ. ಮಗಳ ಮದುವೆಯ ಫೋಟೋಗಳ ಸಮೇತ ಅವರು ಸೋಶಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ನೋಡಿ.‌ 

1 Min read
Author : Padmashree Bhat
Published : Jun 26 2026, 06:45 PM IST
Share this Photo Gallery
  • FB
  • TW
  • Linkdin
  • Whatsapp
15
ಗೋವಾದಲ್ಲಿ ಮದುವೆ
Image Credit : actress kushboo sundar instagram

ಗೋವಾದಲ್ಲಿ ಮದುವೆ

ನಟಿ ಖುಷ್ಬೂ ಸುಂದರ್‌ ಅವರು ಗೋವಾದ ರೆಸಾರ್ಟ್‌ನಲ್ಲಿ ಮಗಳ ಮದುವೆ ಮಾಡಿದ್ದಾರೆ. ನಟ ಚಿರಂಜೀವಿ, ಅನಿಲ್‌ ಕಪೂರ್‌, ತ್ರಿಶಾ ಕೃಷ್ಣನ್‌ ಸೇರಿದಂತೆ ತೆಲುಗು, ತಮಿಳು, ಹಿಂದಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ
Image Credit : actress kushboo sundar instagram

ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ

“ಈ ಕ್ಷಣದಲ್ಲಿ ನಮ್ಮ ಮನಸ್ಸು ಮಾತುಗಳಿಗೂ ನಿಲುಕದ ಭಾವುಕತೆಯಿಂದ ತುಂಬಿಹೋಗಿದೆ, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಾಲದಾಗಿವೆ. ಪೋಷಕರಾಗಿ, ಕುಟುಂಬವೇ ಯಾವಾಗಲೂ ನಮ್ಮ ಪ್ರಾಣ, ಸರ್ವಸ್ವವಾಗಿದೆ. ಹಾಗೆಯೇ, ‘ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ’ ಎಂದು ನಾವು ಬಲವಾಗಿ ನಂಬಿದ್ದೇವೆ” ಎಂದು ಖುಷ್ಬೂ ಸುಂದರ್‌ ಹೇಳಿಕೊಂಡಿದ್ದಾರೆ.

Related Articles

Related image1
Kushboo Sundar Daughter: ಮಗಳ ಮದುವೆ ಸಂಭ್ರಮದಲ್ಲಿ 'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್!‌ ಹುಡುಗ ಯಾರು?
Related image2
ಮದ್ವೆಯಾಗಿ 28 ವರ್ಷ ಆದ್ರೂ ಗಂಡನಿಗೆ ಈ ಮಾತು ಹೇಳಿಲ್ಲ: ನೆಟ್ಟಿಗರಿಂದ Kushboo ಒತ್ತಾಯ
35
ಮಗಳ ಮದುವೆ ಮಾಡಿದ್ವಿ, ಆನಂದದ ಕಣ್ಣೀರು ಬಂತು
Image Credit : actress kushboo sundar instagram

ಮಗಳ ಮದುವೆ ಮಾಡಿದ್ವಿ, ಆನಂದದ ಕಣ್ಣೀರು ಬಂತು

ನಮ್ಮ ಪ್ರೀತಿಯ ಮಗಳಾದ ಕುಮಾರಿ ಆವಂತಿಕಾ ಸುಂದರ್, ಚಿರಂಜೀವಿ ಶ್ರವಣ್ ಶ್ರೀನಿವಾಸನ್ ಅವರ ವಿವಾಹವು 25 ಜೂನ್ 2026 ರಂದು ನೆರವೇರಿದೆ ಎಂಬ ಸಂತೋಷದ ಸುದ್ದಿ ಹಂಚಿಕೊಳ್ಳುತ್ತಿದ್ದೇವೆ. ಕುಟುಂಬದವರು ಹಾಗೂ ಆಪ್ತ ಸ್ನೇಹಿತರ ಪ್ರೀತಿಯ ಸಮ್ಮುಖದಲ್ಲಿ, ನಮ್ಮ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಉಳಿಯುವ ಆ ಕ್ಷಣಕ್ಕೆ ನಾವು ಸಾಕ್ಷಿಯಾದೆವು. ಆ ಸಮಯದಲ್ಲಿ ನಮಗೆ ಸಿಕ್ಕ ಪ್ರೀತಿ, ಮಮತೆ ಮತ್ತು ಶುಭಹಾರೈಕೆಗಳು ಆ ಸಂದರ್ಭವನ್ನೇ ಒಂದು ಮಾಯಾಲೋಕವನ್ನಾಗಿ ಮಾಡಿದ್ದವು. ಆ ಆನಂದದ ಕಣ್ಣೀರು ಇನ್ನು ನಮ್ಮ ಕಣ್ಣುಗಳಲ್ಲಿ ಹಾಗೇ ಇದೆ, ನಮ್ಮ ಹೃದಯಗಳು ಕೃತಜ್ಞತೆ ಮತ್ತು ಅಪಾರ ಸಂತೋಷದಿಂದ ತುಂಬಿ ತುಳುಕುತ್ತಿವೆ ಎಂದು ಹೇಳಿದ್ದಾರೆ.

45
ಅಬ್ಬರವಿಲ್ಲದೆ ಮದುವೆ ಮಾಡಿದ್ವಿ
Image Credit : actress kushboo sundar instagram

ಅಬ್ಬರವಿಲ್ಲದೆ ಮದುವೆ ಮಾಡಿದ್ವಿ

ನವದಂಪತಿಗಳು ಬಯಸಿದಂತೆಯೇ, ಇದು ಅತ್ಯಂತ ಸರಳ ಮತ್ತು ಆಪ್ತರಷ್ಟೇ ನೆರೆದಿದ್ದ ಸುಂದರ ಸಮಾರಂಭವಾಗಿತ್ತು. ಅವರ ಈ ಆಸೆಯನ್ನು ಈಡೇರಿಸಿದ್ದು ನಮಗೆ ಹೆಮ್ಮೆಯ ವಿಷಯ. ಕೆಲವು ಅತ್ಯಂತ ಸುಂದರವಾದ ಕ್ಷಣಗಳು ನಮಗೆ ತುಂಬಾ ಮುಖ್ಯವಾದವರ ಜೊತೆ, ಯಾವುದೇ ಅಬ್ಬರವಿಲ್ಲದೆ ಆಚರಿಸಿದಾಗ ಮಾತ್ರ ಹೆಚ್ಚು ಅರ್ಥಪೂರ್ಣವಾಗುತ್ತವೆ ಎಂದು ಖುಷ್ಬೂ ಸುಂದರ್‌ ಹೇಳಿದ್ದಾರೆ.

55
ಖುಷಿ ಆಯ್ತು
Image Credit : actress kushboo sundar instagram

ಖುಷಿ ಆಯ್ತು

ಆವಂತಿಕಾ ಮತ್ತು ಶ್ರವಣ್ ತಮ್ಮ ಜೀವನದ ಈ ಅದ್ಭುತವಾದ ಹೊಸ ಅಧ್ಯಾಯವನ್ನು ಒಟ್ಟಿಗೆ ಆರಂಭಿಸುತ್ತಿದ್ದಾರೆ. ಅವರಿಬ್ಬರ ಜೀವನವು ಸದಾ ಸಂತೋಷ, ಒಡನಾಟ ಮತ್ತು ಮರೆಯಲಾಗದ ಸವಿನೆನಪುಗಳಿಂದ ತುಂಬಿರಲಿ ಎಂದು ನಿಮ್ಮ ಪ್ರೀತಿ ಹಾಗೂ ಶುಭ ಹಾರೈಕೆಗಳನ್ನು ಮಾತ್ರ ನಾವು ಕೋರುತ್ತೇವೆ. ಅಪಾರ ಪ್ರೀತಿ ಮತ್ತು ಹೆಮ್ಮೆಯೊಂದಿಗೆ, ನಮ್ಮ ನವದಂಪತಿಗಳನ್ನು ನಿಮ್ಮ ಮುಂದೆ ಪರಿಚಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಮದುವೆ
ಸೆಲೆಬ್ರಿಟಿಗಳು
ಮದುವೆ

Latest Videos
Recommended Stories
Recommended image1
Pawan Kalyan: DCM ಡ್ಯೂಟಿ ಮಧ್ಯೆಯೇ 'OG 2' ಅನೌನ್ಸ್; ಓಜಸ್ ಗಂಭೀರನ ಜಪಾನೀಸ್ ಸೀಕ್ರೆಟ್ ಏನು?
Recommended image2
Nandamuri Balakrishna Movie: 112ನೇ ಸಿನಿಮಾ ಮುಹೂರ್ತದಲ್ಲಿ ನಂದಮೂರಿ ಬಾಲಕೃಷ್ಣ; ಸಖತ್‌ ಕಾಂಬಿನೇಶನ್‌ ಇದು
Recommended image3
Priyanka Chopra: ಹಾಲಿವುಡ್‌ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ; ಇದಕ್ಕಾಗಿ ನಟಿ ಕಂಡುಕೊಂಡ ದಾರಿ ಯಾವುದು ಗೊತ್ತಾ?
Related Stories
Recommended image1
Kushboo Sundar Daughter: ಮಗಳ ಮದುವೆ ಸಂಭ್ರಮದಲ್ಲಿ 'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್!‌ ಹುಡುಗ ಯಾರು?
Recommended image2
ಮದ್ವೆಯಾಗಿ 28 ವರ್ಷ ಆದ್ರೂ ಗಂಡನಿಗೆ ಈ ಮಾತು ಹೇಳಿಲ್ಲ: ನೆಟ್ಟಿಗರಿಂದ Kushboo ಒತ್ತಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved