ಉತ್ತರಪ್ರದೇಶದಲ್ಲಿ ಮಂಗಳವಾರ ಒಂದು ವಿಚಿತ್ರ ಘಟನೆ ನಡೆದಿದೆ. ಪತ್ನಿಯರಿಂದ ನಮ್ಮನ್ನು ರಕ್ಷಿಸುವಂತೆ ಆಗ್ರಾದ ಏಕ್ತಾ ಪೊಲೀಸ್ ಠಾಣೆಗೆ ಇಬ್ಬರು ಪತಿರಾಯರು ಬಂದಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ ಗೊತ್ತಾ? ಪತ್ನಿಯರು ಹಿಂಗೂ ಇರ್ತಾರಾ ದೇವ್ರೇ ಅನ್ಸುತ್ತೆ.
ಉತ್ತರ ಪ್ರದೇಶ (ಸ16): ಪತಿಯಿಂದ ಹಲ್ಲೆ, ಕಿರುಕುಳ ತಾಳಲಾರದೆ ಪತ್ನಿಯರು ಮೆಟ್ಟಿಲೇರುವುದು ದಿನನಿತ್ಯ ವರದಿ ನೋಡುತ್ತಲೇ ಇರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಹಲ್ಲೆಯಾಗಿರುವುದು ಪತ್ನಿಗಲ್ಲ, ಪತ್ನಿಯೇ ಪತಿಗೆ ಹಲ್ಲೆ ನಡೆಸಿ ಕಿರುಕುಳ ಕೊಟ್ಟ ಪರಿಣಾಮ ಪತ್ನಿಯಿಂದ ರಕ್ಷಿಸುವಂತೆ ಇಬ್ಬರು ಪತಿಯಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು. ಉತ್ತರ ಪ್ರದೇಶದ ಆಗ್ರಾದ ಏಕ್ತಾ ಪೊಲೀಸ್ ಠಾಣೆಯಲ್ಲಿ ಇಂಥದೊಂದು ಪ್ರಕರಣ ದಾಖಲಾಗಿದ ವಿಚಿತ್ರ ಘಟನೆ ಮಂಗಳವಾರ . ಠಾಣೆಗೆ ಬಂದ ಇಬ್ಬರು ಪುರುಷರು ಪ್ರತ್ಯೇಕವಾಗಿ ಪೊಲೀಸ್ ಠಾಣೆಗೆ ಬಂದು ತಮ್ಮ ಪತ್ನಿಯರಿಂದ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇಬ್ಬರೂ ಪತಿಗಳ ಮಹಾಶಯರ ಸಮಸ್ಯೆ ಒಂದೇ ಆಗಿದೆ. ನಮ್ಮ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಪತ್ನಿಯರ ವಿರುದ್ಧ ಗಂಭೀರ ಆರೋಪಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರುಗಳನ್ನು ಸ್ವೀಕರಿಸಲಾಗಿದ್ದು, ಆರೋಪಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ತೆ-ಮಾವನ ಮನೆಯಲ್ಲಿ ಹಲ್ಲೆ
ಮೊದಲ ಪ್ರಕರಣದಲ್ಲಿ ಫಿರೋಜಾಬಾದ್ ನಿವಾಸಿ ರೂಪ್ ಕಿಶೋರ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಯಾಗ್ ಹಿಡಿದು ಪೊಲೀಸ್ ಠಾಣೆಗೆ ಬಂದ ಅವರು ಪೊಲೀಸರ ಸಹಾಯ ಕೋರಿದ್ದಾರೆ. ಪೊಲೀಸ್ ಠಾಣೆಗೆ ಬಂದ ಮೇಲೆಯೂ ಇಬ್ಬರು ಮಹಿಳೆಯರು ನೇರ ಪೊಲೀಸ್ ಠಾಣೆಗೆ ಬಂದು ರೂಪ್ ಕಿಶೋರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಮಧ್ಯಪ್ರವೇಶಿಸಿ ಜಗಳವನ್ನು ತಡೆದಿದ್ದಾರೆ.
ರೂಪ್ ಕಿಶೋರ್ ನೀಡಿದ ದೂರಿನಲ್ಲೇನಿದೆ?
ಮೂರು ವರ್ಷಗಳ ಹಿಂದೆ ಡಿಗ್ನೇರ್ ನಿವಾಸಿ ಗೌರಿ ಎಂಬುವರನ್ನು ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ. ತಮ್ಮ ಪತ್ನಿ ತವರು ಮನೆಯಲ್ಲೇ ವಾಸಿಸುತ್ತಿದ್ದು, ಮನೆಗೆ ಮರಳಲು ಒಪ್ಪುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಪ್ರತಿ ತಿಂಗಳು ಹಣ ನೀಡುವಂತೆ ಪತ್ನಿ ಬೇಡಿಕೆ ಇಡುತ್ತಾರೆ. ಬೇರೆ ಬೇರೆ ಕಾರಣ ಹೇಳಿ ತವರು ಮನೆಗೆ ಕರೆಸಿಕೊಂಡು ಅಲ್ಲಿ ಪತ್ನಿ, ಅತ್ತೆ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಪತಿ ರೂಪ್ ಕಿಶೋರ್ ವಿದ್ಯಾವಂತ. ಜೋಧ್ಪುರದಲ್ಲಿ ಖಾಸಗಿ ಉದ್ಯೋಗ. ಮಂಗಳವಾರ ಪತ್ನಿ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ. ಬೆಳಗ್ಗೆ ಅಲ್ಲಿಗೆ ಹೋದಾಗ ಅಲ್ಲಿ ನನ್ನಿಂದ ಹಣ ಕಸಿದುಕೊಂಡು ಮೈಮೇಲಿನ ಬಟ್ಟೀ ಹರಿಯುವಂತೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ನಿ ಧರ್ಮ ಬದಲಿಸಿಕೊಂಡ ಬಳಿಕ ಬೆದರಿಕೆ:
ರೂಪ್ ಎಂಬುವವನದು ಒಂದು ಕತೆಯಾದರೆ ಇನ್ನೋವರ್ವನದು ವಿಚಿತ್ರ ಪ್ರಕರಣ. ಪತ್ನಿ ಧರ್ಮ ಬದಲಿಸಿಕೊಂಡ ಬಳಿಕ ಬೆದರಿಕೆ ಹಾಕುತ್ತಿದ್ದಾಳೆ ಎಂಬ ಆರೋಪ ಇವನದು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಹ್ರಾಯಿ ಮೋರ್ ನಿವಾಸಿ 40 ವರ್ಷದ ರಾಕೇಶ್ ಜಾದೌನ್ ಕೂಡ ಏಕ್ತಾ ಪೊಲೀಸ್ ಠಾಣೆಗೆ ಬಂದಿದ್ದಾರೆ. ಮದುವೆಯಾಗಿ 20 ವರ್ಷಗಳಾಗಿದ್ದು, ಮೂವರು ಮಕ್ಕಳಿದ್ದಾರೆ ಎಂದು ರಾಕೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪತ್ನಿ ಈಗ ಧರ್ಮ ಬದಲಿಸಿಕೊಂಡು ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡು ಅವನೊಂದಿಗೆ ವಾಸಿಸುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಇಷ್ಟೆ ಅಲ್ಲದೆ ಈಗ ಧರ್ಮ ಬದಲಿಸಿಕೊಂಡ ಬಳಿಕ ಪತ್ನಿ ನನ್ನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಜೀವ ರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಒಂದೇ ದಿನ ಎರಡೂ ವಿಚಿತ್ರ ದೂರುಗಳು:
ಒಂದೇ ದಿನ ಇಬ್ಬರು ಪತಿರಾಯರು ಸಂಸಾರಿಕ ಸಮಸ್ಯೆಗಗಳಿಂದ ಪತ್ನಿಯರಿಂದ ಹಲ್ಲೆ, ಬೆದರಿಕೆ ಎದುರಿಸುತ್ತಿದ್ದು ಈ ವಿಚಾರವಾಗಿ ಪೊಲೀಸ್ ಠಾಣೆಗೆ ಬಂದು ರಕ್ಷಣೆ ಕೋರಿರುವುದು ಗಮನ ಸೆಳೆದಿದೆ. ಸದ್ಯ ಪೊಲೀಸರು ಇಬ್ಬರ ದೂರುಗಳು ಸ್ವೀಕರಿಸಿದ್ದು, ಆರೋಪಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಎರಡೂ ಪ್ರಕರಣಗಳಲ್ಲಿನ ಆರೋಪಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.


