ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನಾಮಿಕನ ಜೊತೆ ಪರಿಚಯ, ಕಾಫಿ , ಮೂವಿ ಸೇರಿದಂತೆ ಮೊದಲ ಆ್ಯಪ್ ಡೇಟಿಂಗ್ ಅನುಭವವನ್ನು ಮಿಲನ ನಟಿ ಪಾರ್ವತಿ ಬಿಚ್ಚಿಟ್ಟಿದ್ದಾರೆ.
- Home
- News
- India News
- India Latest News Live: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನುಭವ ಬಿಚ್ಚಿಟ್ಟ ನಟಿ ಪಾರ್ವತಿ
India Latest News Live: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನುಭವ ಬಿಚ್ಚಿಟ್ಟ ನಟಿ ಪಾರ್ವತಿ

ಗುಜರಾತ್ನಲ್ಲಿರುವ ಐತಿಹಾಸಿಕ ಸೋಮನಾಥ ದೇಗುಲದ ಮೇಲೆ ನಡೆದ ಮೊದಲ ದಾಳಿಗೆ 1000 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಇದಕ್ಕೂ ಮೊದಲು ನಡೆದ ಶೌರ್ಯ ಯಾತ್ರೆಯಲ್ಲೂ ಭಾಗಿಯಾಗಿದ್ದ ಅವರು, ಶಿವನ ಆಯುಧ ‘ಡಮರು’ ನುಡಿಸಿ ಗಮನ ಸೆಳೆದರು.
India Latest News Live 12 January 2026 ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನುಭವ ಬಿಚ್ಚಿಟ್ಟ ನಟಿ ಪಾರ್ವತಿ
India Latest News Live 12 January 2026 ಪೌರೋಹಿತ್ಯ ಮಾಡಿಕೊಂಡು ಹೆಂಡ್ತಿ ಕನಸಿಗೆ ಜೀವ ತುಂಬಿದ ಗಂಡನಿಗೆ ಡಿವೋರ್ಸ್ ಭಾಗ್ಯ ನೀಡಿದ ಸಬ್ ಇನ್ಸ್‌ಪೆಕ್ಟರ್
ಗಂಡಂದಿರು ತಮ್ಮ ಪತ್ನಿಯ ಕನಸಿಗೆ ಬೆನ್ನೆಲುಬಾಗಿ ನಿಂತು ಅವರನ್ನು ಓದಿಸುತ್ತಾರೆ. ಅನೇಕರು ಉದ್ಯೋಗವನ್ನು ಗಿಟ್ಟಿಸಿ ಗಂಡನ ಜೊತೆ ಸಂಸಾರ ಸರಿದೂಗಿಸುವುದಕ್ಕೆ ನೆರವಾಗುತ್ತಾರೆ. ಆದರೆ ಕನಸೆಲ್ಲಾ ಈಡೇರಿದ ಮೇಲೆ ತನಗೆ ಏಣಿಯಂತೆ ನಿಂತ ಪತಿಯನ್ನೇ ದೂರ ತಳ್ಳಿದ್ರೆ ವಿಧಿ ಮೆಚ್ಚಿತೇ…
India Latest News Live 12 January 2026 ಬಾರಪ್ಪ ತಾಕತ್ ಇದ್ರೆ ಮುಟ್ಟಿ ನೋಡು, ರಾಜ್ ಠಾಕ್ರೆಯ ರಸಮಲೈ ಟೀಕೆಗೆ ಕೆರಳಿದ ಅಣ್ಣಾಮಲೈ
ಬಾರಪ್ಪ ತಾಕತ್ ಇದ್ರೆ ಮುಟ್ಟಿ ನೋಡು, ರಾಜ್ ಠಾಕ್ರೆಯ ರಸಮಲೈ ವ್ಯಂಗ್ಯಕ್ಕೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಮುಂಬೈ ಬರುತ್ತೇನೆ. ತಾಕತ್ ಇದ್ರೆ ಮುಟ್ಟಿ ನೋಡು ಎಂದು ಅಣ್ಣಾಮಲೈ ಸವಾಲು ಹಾಕಿದ್ದಾರೆ.
India Latest News Live 12 January 2026 ಭಿಕ್ಷೆ ಬೇಡಿ ಬಂದ ಹಣದಲ್ಲಿ 500 ನಿರ್ಗತಿಕರಿಗೆ ಕಂಬಳಿ ಖರೀದಿಸಿ ಹಂಚಿದ ಭಿಕ್ಷುಕ
ಹೇಳುವುದಕ್ಕೆ ಇವರು ಭಿಕ್ಷುಕ. ಆದರೆ ಹೃದಯ ವೈಶ್ಯಾಲ್ಯತೆಯಲ್ಲಿ ಇವರು ನಿಜವಾಗಿಯೂ ಶ್ರೀಮಂತ ಎಂಬುದನ್ನು ಈ ಭಿಕ್ಷುಕ ಸಾಬೀತುಪಡಿಸಿದ್ದಾರೆ. ಹೌದು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಭಿಕ್ಷೆ ಬೇಡಿಯೇ ಜೀವನ ಮಾಡುತ್ತಿದ್ದ ರಾಜು ಎಂಬುವವರು ತಮ್ಮ ಕಷ್ಟದ ನಡುವೆಯೂ ಬೇರೆಯವರಿಗೆ ಭರವಸೆಯ ಬೆಳಕಾಗಿದ್ದಾರೆ.
India Latest News Live 12 January 2026 ಹದಿಹರೆಯದ ಪ್ರೇಮ ಪ್ರಕರಣ - 'ರೋಮಿಯೋ ಜ್ಯೂಲಿಯೆಟ್ ನಿಯಮ' ಜಾರಿಗೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ
ಹದಿಹರೆಯದವರ ಸಮ್ಮತಿಯ ಪ್ರೇಮ ಸಂಬಂಧಗಳ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯ ದುರುಪಯೋಗವನ್ನು ತಡೆಯಲು 'ರೋಮಿಯೋ ಜ್ಯೂಲಿಯೆಟ್ ನಿಯಮ' ಜಾರಿಗೆ ತರುವ ಬಗ್ಗೆ ಚಿಂತಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
India Latest News Live 12 January 2026 ಮಾಜಿ ಉಪ ರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಆರೋಗ್ಯದಲ್ಲಿ ಏರುಪೇರು, ಏಮ್ಸ್ ಆಸ್ಪತ್ರೆ ದಾಖಲು
ಮಾಜಿ ಉಪ ರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಆರೋಗ್ಯದಲ್ಲಿ ಏರುಪೇರು, ಎರಡು ಬಾರಿ ಪ್ರಜ್ಞೆ ತಪ್ಪಿದ ಧನ್ಕರ್ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ವೈದ್ಯರ ತಂಡ ಧನ್ಕರ್ ಆರೋಗ್ಯದ ಮೇಲೆ ನಿಗಾವಹಿಸಿದೆ.
India Latest News Live 12 January 2026 ಮಾರಕ ಇಂಜೆಕ್ಷನ್ ನೀಡಿ 300 ಬೀದಿನಾಯಿಗಳ ಮಾರಣಹೋಮ - 9 ಜನರ ವಿರುದ್ಧ ಕೇಸ್
ಇಂಜೆಕ್ಷನ್ ನೀಡಿ 300 ಬೀದಿನಾಯಿಗಳನ್ನು ಹತ್ಯೆ ಮಾಡಿದಂತಹ ಅಮಾನವೀಯ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಸರಪಂಚರು ಸೇರಿದಂತೆ ಒಟ್ಟು 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
India Latest News Live 12 January 2026 ವಿರೇಂದ್ರ ಸೆಹ್ವಾಗ್ ಜೆರ್ಸಿ ನಂಬರ್ 3 ಸಲ ಬದಲಾಗಿದ್ದೇಕೆ? ಅತ್ತೆ-ಸೊಸೆ ಜಗಳ ನಿಲ್ಲಿಸಲು ವೀರೂ ಮಾಡಿದ್ದೇನು?
ಬೆಂಗಳೂರು: ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಜೆರ್ಸಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಸಲ ಬದಲಾಗಿದೆ. ಒಮ್ಮೆಯಂತೂ ನಂಬರ್ ಇಲ್ಲದೇ ಸೆಹ್ವಾಗ್ ಕ್ರಿಕೆಟ್ ಆಡಿದ್ದಾರೆ. ಅತ್ತೆ-ಸೊಸೆಯ ಜಗಳದ ಕಥೆಯನ್ನು ಸ್ವತಃ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ.
India Latest News Live 12 January 2026 ವಿದೇಶದಿಂದ ರಹಸ್ಯವಾಗಿ ಆಗಮಿಸಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನೇ ಕೊಂದ ಮಗ
ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಡಿಸೆಂಬರ್ 24ರಂದು ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಕೊಲೆ ಮಾಡಿದ್ದು, ಬೇರೆ ಯಾರೋ ಹೊರಗಿನವರಲ್ಲ ಬದಲಾಗಿ ಮಹಿಳೆಯ ಸ್ವಂತ ಮಗನೇ ಎಂಬ ವಿಚಾರ ತಿಳಿದು ಇಡೀ ಗ್ರಾಮವೇ ಆಘಾತಕ್ಕೀಡಾಗಿದೆ.
India Latest News Live 12 January 2026 ಸ್ವಾತಂತ್ರ್ಯ ಬಳಿಕ ಇದೇ ಮೊದಲು, ಮಕರ ಸಂಕ್ರಾಂತಿಗೆ ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್
ಸ್ವಾತಂತ್ರ್ಯ ಬಳಿಕ ಇದೇ ಮೊದಲು, ದೇಶದ ಪ್ರಧಾನ ಮಂತ್ರಿಗಳ ಕಚೇರಿ ವಿಳಾಸ ಸ್ವಾತಂತ್ರ್ಯ ಬಳಿಕ ಇದುವರೆಗೂ ಬದಲಾಗಿಲ್ಲ. ಇದೀಗ ಪ್ರಧಾನಿ ಮೋದಿ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಸೌತ್ ಬ್ಲಾಕ್‌ನಿಂದ ಮೋದಿ ಆಫೀಸ್ ಸ್ಥಳಾಂತರವಾಗುತ್ತಿರುವುದೆಲ್ಲಿಗೆ?
India Latest News Live 12 January 2026 ವಿಜಯ್ ಹಜಾರೆ ಟ್ರೋಫಿ - ಮುಂಬೈ ಬಗ್ಗುಬಡಿದು ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ! ಮತ್ತೆ ಅಬ್ಬರಿಸಿದ ಪಡಿಕ್ಕಲ್
ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ ವಿಜೆಡಿ ನಿಯಮದನ್ವಯ 55 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ, ಬ್ಯಾಡ್ ಲೈಟ್‌ನಿಂದ ಪಂದ್ಯ ಸ್ಥಗಿತಗೊಂಡಾಗ ಕರ್ನಾಟಕ ಸುಸ್ಥಿತಿಯಲ್ಲಿತ್ತು.
India Latest News Live 12 January 2026 ಹಿಜಾಬ್ ಧರಿಸಿ ರೀಲ್ಸ್ ಮಾಡ್ತಿರುವ ಮುಸ್ಲಿಂ ಇನ್‌ಫ್ಲುಯೆನ್ಸರ್‌ಗೆ ಜೀವ ಬೆದರಿಕೆ
ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ಧರಿಸಿಯೇ ರೀಲ್ಸ್ ಮಾಡ್ತಿರುವ ತನಗೆ ತನ್ನದೇ ಸಮುದಾಯ ಜನರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮಹಿಳೆಯೂ ಆಗಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಾಹಿದಾ ಅಕ್ಧಾರ್ ಅವರು ಆರೋಪಿಸಿದ್ದಾರೆ.
India Latest News Live 12 January 2026 ಸಂಕ್ರಾತಿಗೆ ಸಂಭ್ರಮದಲ್ಲಿ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ದೇಶಾದ್ಯಂತ ಬಂಗಾರದ ಸಂಚಲನ
ಸಂಕ್ರಾತಿಗೆ ಸಂಭ್ರಮದಲ್ಲಿ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಜನವರಿ 12ರಂದು ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಇದೀಗ ಜನಸಾಮಾನ್ಯರಿಗೂ ಚಿನ್ನ ಖರೀದಿ ಅಥವಾ ಹೂಡಿಕೆ ಮಾಡಬಹುದಾ?
India Latest News Live 12 January 2026 ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ - ಮುಂಬೈ ಮೇಲೆ ಕರ್ನಾಟಕ ಸವಾರಿ; ಗೆಲುವಿನ ಹೊಸ್ತಿಲಲ್ಲಿರುವಾಗಲೇ ಪಂದ್ಯ ತಾತ್ಕಾಲಿಕ ಸ್ಥಗಿತ!
ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ನೀಡಿದ 255 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಅಜೇಯ ಶತಕದ ಜೊತೆಯಾಟದ ನೆರವಿನಿಂದ ಗೆಲುವಿನತ್ತ ಸಾಗುತ್ತಿದೆ. ಬ್ಯಾಡ್ ಲೈಟ್‌ನಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
India Latest News Live 12 January 2026 ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಅತೀ ಕಡಿಮೆ ಬೆಲೆ ಆಯ್ಕೆ ಇಲ್ಲಿದೆ
ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಬ್ಯಾಂಕ್ ಸಂಬಂಧ, ಒಟಿಪಿ ಸೇರಿ ಇತರ ದಾಖಲೆಗಳಿಗಾಗಿ ಸಿಮ್ ಆ್ಯಕ್ಟೀವ್ ಇಡುವುದೇ ಇದೀಗ ದುಬಾರಿಯಾಗುತ್ತಿದೆ.ಇದಕ್ಕೆ ಅತೀ ಕಡಿಮೆ ಬೆಲೆಯ ಆಯ್ಕೆ ಇಲ್ಲಿದೆ.
India Latest News Live 12 January 2026 ಹೂವಿನ ಮಾಲೆ ವಧುವರರಿಗೆ ಕೊಡುವ ಬದಲು ತಾವೇ ಹಾಕಿದ ಬಾಲಕರು - ವೀಡಿಯೋ ಭಾರಿ ವೈರಲ್
ಭಾರತದಲ್ಲಿ ನಡೆದ ದೇಸಿ ವರ ಹಾಗೂ ವಿದೇಶಿ ವಧುವಿನ ಮದುವೆಯೊಂದರ ವಿಡಿಯೋ ವೈರಲ್ ಆಗಿದೆ. ವೆಡ್ಡಿಂಗ್ ಪ್ಲಾನರ್‌ಗಳ ಎಡವಟ್ಟಿನಿಂದ, ವಧು-ವರರು ಹಾರ ಬದಲಿಸಿಕೊಳ್ಳುವ ಬದಲು ಇಬ್ಬರು ಬಾಲಕರು ಅವರ ಕೊರಳಿಗೆ ಹಾರ ಹಾಕಿದ್ದಾರೆ. ಈ ತಮಾಷೆಯ ಘಟನೆ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
India Latest News Live 12 January 2026 ಭಾರತೀಯರಿಗೆ ಫ್ರೀ ವೀಸಾ ಟ್ಸಾನ್ಸಿಟ್ ಸೌಲಭ್ಯ ಘೋಷಿಸಿದ ಜರ್ಮನಿ, ಇದರು ಲಾಭವೇನು?
ಭಾರತೀಯರಿಗೆ ಫ್ರೀ ವೀಸಾ ಟ್ಸಾನ್ಸಿಟ್ ಸೌಲಭ್ಯ ಘೋಷಿಸಿದ ಜರ್ಮನಿ, ಭಾರತ ಪ್ರವಾಸದಲ್ಲಿರುವ ಜರ್ಮನಿ ಫೆಡರಲ್ ಚಾನ್ಸಿಲರ್ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಭಾರತೀಯರಿಗೆ ವೀಸಾ ಫ್ರೀ ಟ್ರಾನ್ಸಿಟ್ ಸೌಲಭ್ಯ ಕೂಡ ಒಂದು.
India Latest News Live 12 January 2026 ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್; ಡೆಲ್ಲಿ ಮೂಲದ ಆಟಗಾರನಿಗೆ ಬಿಸಿಸಿಐ ಸರ್ಪ್ರೈಸ್ ಕಾಲ್!
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಾಯಗೊಂಡ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಡೆಲ್ಲಿ ಮೂಲದ ಯುವ ಬ್ಯಾಟರ್ ಆಯುಷ್ ಬದೋನಿಗೆ ಭಾರತ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.
India Latest News Live 12 January 2026 ಹೆರಿಗೆ ವೇಳೆ ಹೆಂಡ್ತಿ ಜೊತೆಗಿರಲು ಬಂದ ಯೋಧ ಅಪಘಾತದಲ್ಲಿ ಸಾವು - ಸ್ಟ್ರೆಚರ್‌ನಲ್ಲಿ ಬಂದು ಅಂತಿಮ ದರ್ಶನ ಪಡೆದ ಪತ್ನಿ
ತುಂಬು ಗರ್ಭಿಣಿಯ ಆರೈಕೆ ಹಾಗೂ ಡೆಲಿವರಿ ಸಮಯದಲ್ಲಿ ಆಕೆಗೆ ಭಾವನಾತ್ಮಕ ಬೆಂಬಲವಾಗಿ ಇರಲು ರಜೆ ಮೇಲೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗು ಜನಿಸುವುದಕ್ಕೆ ಕೆಲವೇ ಕ್ಷಣಗಳಿರುವಾಗ ಅವರು ಸಾವನ್ನಪ್ಪಿದ್ದಾರೆ.