- Home
- Sports
- Cricket
- ವಿರೇಂದ್ರ ಸೆಹ್ವಾಗ್ ಜೆರ್ಸಿ ನಂಬರ್ 3 ಸಲ ಬದಲಾಗಿದ್ದೇಕೆ? ಅತ್ತೆ-ಸೊಸೆ ಜಗಳ ನಿಲ್ಲಿಸಲು ವೀರೂ ಮಾಡಿದ್ದೇನು?
ವಿರೇಂದ್ರ ಸೆಹ್ವಾಗ್ ಜೆರ್ಸಿ ನಂಬರ್ 3 ಸಲ ಬದಲಾಗಿದ್ದೇಕೆ? ಅತ್ತೆ-ಸೊಸೆ ಜಗಳ ನಿಲ್ಲಿಸಲು ವೀರೂ ಮಾಡಿದ್ದೇನು?
ಬೆಂಗಳೂರು: ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಜೆರ್ಸಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಸಲ ಬದಲಾಗಿದೆ. ಒಮ್ಮೆಯಂತೂ ನಂಬರ್ ಇಲ್ಲದೇ ಸೆಹ್ವಾಗ್ ಕ್ರಿಕೆಟ್ ಆಡಿದ್ದಾರೆ. ಅತ್ತೆ-ಸೊಸೆಯ ಜಗಳದ ಕಥೆಯನ್ನು ಸ್ವತಃ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ.

3 ವಿವಿಧ ನಂಬರ್ ಜೆರ್ಸಿಯಲ್ಲಿ ಕಾಣಿಸಿಕೊಂಡ ಸೆಹ್ವಾಗ್
ಮುಲ್ತಾನಿನ ಸುಲ್ತಾನ ಖ್ಯಾತಿಯ ವಿರೇಂದ್ರ ಸೆಹ್ವಾಗ್ ಒಟ್ಟು ಮೂರು ಬೇರೆ ಬೇರೆ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದು ಬಹುತೇಕ ಮಂದಿಗೆ ಗೊತ್ತಿದೆ. ಸೆಹ್ವಾಗ್ 44, 46 ಹಾಗೂ 2 ನಂಬರ್‌ನ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.
2011ರಲ್ಲಿ ನಂಬರ್ ಇಲ್ಲದ ಜೆರ್ಸಿಯೊಂದಿಗೆ ಕಣಕ್ಕೆ
ಇನ್ನು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರೇಂದ್ರ ಸೆಹ್ವಾಗ್ ಯಾವುದೇ ಜೆರ್ಸಿ ನಂಬರ್ ಇಲ್ಲದೇ ಕಣಕ್ಕಿಳಿದಿದ್ದರು. ಇದು ಯಾಕೆ ಎನ್ನುವುದನ್ನು ಸ್ವತಃ ಸೆಹ್ವಾಗ್ ಸಂದರ್ಶನವೊಂದರಲ್ಲಿ ತುಟಿಬಿಚ್ಚಿದ್ದಾರೆ.
44 ಸಾಯಿರಾಜ್ ಬಹುತುಲೆ ಲಕ್ಕಿ ನಂಬರ್
ಸೆಹ್ವಾಗ್ ಟೀಂ ಇಂಡಿಯಾ ಸೆಲೆಕ್ಟ್ ಆಗುವ ಸಂದರ್ಭದಲ್ಲಿ ಸಾಯಿರಾಜ್ ಬಹುತುಲೆ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆಯಿತ್ತು. ಹೀಗಾಗಿ ಜೆರ್ಸಿ ಮಾಡುವ ಕಂಪನಿ ಸಾಯಿರಾಜ್ ಬಹುತುಲೆ ಅವರ ಲಕ್ಕಿ ನಂಬರ್ 44 ಪ್ರಿಂಟ್ ಮಾಡಿತ್ತು. ಆದರೆ ಬಹುತುಲೆ ಬದಲಿಗೆ ಸೆಹ್ವಾಗ್ ಟೀಂ ಇಂಡಿಯಾಗೆ ಆಯ್ಕೆಯಾದರು.
ಆರಂಭದಲ್ಲಿ ಸೆಹ್ವಾಗ್ ಜೆರ್ಸಿ ನಂಬರ್ 44
ಹೀಗಾಗಿ ಸೆಹ್ವಾಗ್ 44 ನಂಬರ್ ಜೆರ್ಸಿಯಲ್ಲೇ ಆಡಲಾರಂಭಿಸಿದರು. ಇದಾದ ಕೆಲ ಸಮಯದ ಬಳಿಕ ಸೆಹ್ವಾಗ್ ಫಾರ್ಮ್ ಕೈಕೊಟ್ಟಿತು. ಹೀಗಾಗಿ ಸೆಹ್ವಾಗ್ ತಂಡದಿಂದ ಹೊರಬಿದ್ದರು.
ಜೋತಿಷಿ ಸಲಹೆ ಮೇರೆಗೆ 46ರ ಜೆರ್ಸಿ ನಂಬರ್ ತೊಡಲಾರಂಭಿಸಿದ ಸೆಹ್ವಾಗ್
ಹೀಗಾಗಿ ಸೆಹ್ವಾಗ್ ಅಮ್ಮ ಜೋತಿಷಿ ಮೊರೆ ಹೋದರು. ಆಗ ಜೋತಿಷಿ 46 ನಂಬರ್ ಜೆರ್ಸಿ ತೊಡಲು ಹೇಳಿದರು. ಅದರಂತೆ ಸೆಹ್ವಾಗ್ 46 ಜೆರ್ಸಿ ತೊಡಲಾರಂಭಿಸಿದರು.
ಸೆಹ್ವಾಗ್ ಪತ್ನಿ 02 ನಂಬರ್ ಜೆರ್ಸಿ ತೊಡಲು ಸಲಹೆ
ಇನ್ನು ಸೆಹ್ವಾಗ್ ಮದುವೆಯಾದ ಬಳಿಕ ಅವರ ಪತ್ನಿ ಆರತಿ, ವೀರೂಗೆ 02 ನಂಬರ್ ಜೆರ್ಸಿ ತೊಡಲು ಸಲಹೆ ನೀಡಿದರು. ಹೀಗಾಗಿ ಸೆಹ್ವಾಗ್ ಜೆರ್ಸಿ 02 ನಂಬರ್ ಜೆರ್ಸಿ ತೊಡಲು ಆರಂಭಿಸಿದರು.
ಒಮ್ಮೊಮ್ಮೆ ಒಂದೊಂದು ನಂಬರ್ ಜೆರ್ಸಿ ತೊಡಲಾರಂಭಿಸಿದ ಸೆಹ್ವಾಗ್
ಇದರಿಂದ ಅತ್ತೆ-ಸೊಸೆ ನಡುವೆ ಜೆರ್ಸಿ ನಂಬರ್ ವಿಚಾರವಾಗಿ ಮನೆಯಲ್ಲಿ ಜಗಳ ಆರಂಭವಾಯಿತು. ಹೀಗಾಗಿ ಸೆಹ್ವಾಗ್ ಒಂದು ಮ್ಯಾಚ್‌ನಲ್ಲಿ 46 ಇನ್ನೊಂದು ಮ್ಯಾಚ್‌ನಲ್ಲಿ 02 ನಂಬರ್‌ನ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಾರಂಭಿಸಿದರು.
ಸೆಹ್ವಾಗ್‌ಗೆ ಐಸಿಸಿ ಸೂಚನೆ
ಆಗ ಐಸಿಸಿ ಯಾವುದಾದರೂ ಒಂದು ನಂಬರ್ ಜೆರ್ಸಿ ತೊಡಬೇಕು ಎಂದು ಸೂಚಿಸಿತು. ಅತ್ತೆ ಸೊಸೆ ಜಗಳ ನಿಲ್ಲಿಸಲು ವಿರೇಂದ್ರ ಸೆಹ್ವಾಗ್ 46 ಹಾಗೂ 02 ನಂಬರ್ ಜೆರ್ಸಿ ಕೈಬಿಟ್ಟು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ನಂಬರ್ ಇಲ್ಲದ ಜೆರ್ಸಿಯೊಂದಿಗೆ ಕಣಕ್ಕಿಳಿದರು.
ನಂಬರ್ ಇಲ್ಲದ ಜೆರ್ಸಿಯಲ್ಲೇ ಸೆಹ್ವಾಗ್ ಶೈನಿಂಗ್
2011ರ ಏಕದಿನ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಸೆಹ್ವಾಗ್, ಬಾಂಗ್ಲಾದೇಶ ಎದುರು ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. ಇದಷ್ಟೇ ಅಲ್ಲದೇ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

