ಮಾಜಿ ಉಪ ರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಆರೋಗ್ಯದಲ್ಲಿ ಏರುಪೇರು, ಎರಡು ಬಾರಿ ಪ್ರಜ್ಞೆ ತಪ್ಪಿದ ಧನ್ಕರ್ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ವೈದ್ಯರ ತಂಡ ಧನ್ಕರ್ ಆರೋಗ್ಯದ ಮೇಲೆ ನಿಗಾವಹಿಸಿದೆ.
ನವದೆಹಲಿ (ಜ.12) ಮಾಜಿ ಉಪರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥಗೊಂಡ ದನ್ಕರ್‌ನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಎರಡು ಬಾರಿ ಪ್ರಜ್ಞೆ ತಪ್ಪಿದ ಧನ್ಕರ್ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ದೆಹಲಿ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ನುರಿತ ವೈದ್ಯರ ತಂಡ ಧನ್ಕರ್ ಆರೋಗ್ಯದ ಮೇಲೆ ನಿಗಾವಹಿಸಿದೆ. 74 ವರ್ಷದ ಜಗ್‌ದೀಪ್ ಧನ್ಕರ್ ಕಳೆದ ಕೆಲ ತಿಂಗಳಿನಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಕಾರಣದಿಂದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ವಾಶ್‌ರೂಂಗೆ ಹೋದಾಗ ಪ್ರಜ್ಞೆ ತಪ್ಪಿದ ಜಗ್‌ದೀಪ್ ಧನ್ಕರ್
ಮಾಜಿ ಉಪರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಶನಿವಾರ ವಾಶ್‌ರೂಂಗೆ ಹೋದ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣವೇ ಅವರನ್ನು ಕುಟುಂಬಸ್ಥರು ವಿಶ್ರಾಂತಿಗೆ ಸೂಚಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡಿದ್ದ ಜಗ್‌ದೀಪ್ ಧನ್ಕರ್ ಮತ್ತೆ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಜಗ್‌ದೀಪ್ ಧನ್ಕರ್ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ದಾಖಲಿಸಲು ಸೂಚಿಸಿದ್ದಾರೆ. ಇದರಂತೆ ಜಗ್‌ದೀಪ್ ಧನ್ಕರ್ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಮುಂದುವರಿದಿದೆ.
ಎಂಆರ್‌ಐ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆ ನಡೆಸಲಾಗುತ್ತಿದೆ.ಜಗ್‌ದೀಪ್ ಧನ್ಕರ್ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ವೈದ್ಯ ಮೂಲಗಳು ಹೇಳಿವೆ. ಕೆಲ ಪರೀಕ್ಷೆಗಳ ಬಳಿಕ ಜಗ್‌ದೀಪ್ ಧನ್ಕರ್ ಆರೋಗ್ಯ ಸಮಸ್ಯೆ ಹಾಗೂ ಗಂಭೀರತೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ. ಸದ್ಯ ಏಮ್ಸ್ ಆಸ್ಪತ್ರೆಯಲ್ಲಿ ಜಗ್‌ದೀಪ್ ಧನ್ಕರ್ ಚೇತರಿಸಿಕೊಳ್ಳುತ್ತಿದ್ದಾರೆ. ಧನ್ಕರ್ ಅಥವಾ ಅವರ ಕುಟುಂಬಸ್ಥರು ಸದ್ಯದ ಆರೋಗ್ಯದ ಕುರಿತು ಹೆಲ್ತ್ ಅಪ್‌ಜಡೇಟ್ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಗ್‌ದೀಪ್ ಧನ್ಕರ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಕಚ್, ಉತ್ತರಖಂಡ ಹಾಗೂ ಕೇರಳದಲ್ಲಿನ ಕಾರ್ಯಕ್ರಮಗಳಲ್ಲಿ ಜಗ್‌ದೀಪ್ ಧನ್ಕರ್ ಕಾಣಿಸಿಕೊಂಡಿದ್ದರು. ಇದನ್ನು ಹೊರತುಪಡಿಸಿದರೆ ಜಗ್‌ದೀಪ್ ಧನ್ಕರ್ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಆರೋಗ್ಯ ಸಮಸ್ಯೆ,ಪ್ರಜ್ಞೆ ತಪ್ಪುತ್ತಿರುವ ಸಮಸ್ಯೆಯಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
ಜುಲೈ ತಿಂಗಳಲ್ಲಿ ರಾಜೀನೀಮೆ ನೀಡಿದ್ದ ಧನ್ಕರ್
ಆರೋಗ್ಯದ ಕಾರಣ ನೀಡಿ ಜಗ್‌ದೀಪ್ ಧನ್ಕರ್ ಉಪ ರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಬಿಜೆಪಿ ಧನ್ಕರ್ ಅವರನ್ನು ಉದ್ದೇಶಪೂರ್ವಕವಾಗಿ ಕೆಳಗಿಳಿಸಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಕಾರಣ, ಚಿಕಿತ್ಸೆ ಹಾಗೂ ವಿಶ್ರಾಂತಿಯಿಂದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಧನ್ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.


