ಗಂಡಂದಿರು ತಮ್ಮ ಪತ್ನಿಯ ಕನಸಿಗೆ ಬೆನ್ನೆಲುಬಾಗಿ ನಿಂತು ಅವರನ್ನು ಓದಿಸುತ್ತಾರೆ. ಅನೇಕರು ಉದ್ಯೋಗವನ್ನು ಗಿಟ್ಟಿಸಿ ಗಂಡನ ಜೊತೆ ಸಂಸಾರ ಸರಿದೂಗಿಸುವುದಕ್ಕೆ ನೆರವಾಗುತ್ತಾರೆ. ಆದರೆ ಕನಸೆಲ್ಲಾ ಈಡೇರಿದ ಮೇಲೆ ತನಗೆ ಏಣಿಯಂತೆ ನಿಂತ ಪತಿಯನ್ನೇ ದೂರ ತಳ್ಳಿದ್ರೆ ವಿಧಿ ಮೆಚ್ಚಿತೇ…
ಭೋಪಾಲ್: ಅನೇಕ ಹೆಣ್ಣು ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಮದುವೆ ಮಾಡುತ್ತಾರೆ. ಹೀಗಾಗಿ ಅನೇಕರು ಒಳ್ಳೆಯ ಶಿಕ್ಷಣ ಪಡೆಯಬೇಕು ಒಳ್ಳೆ ಉದ್ಯೋಗಕ್ಕೆ ಸೇರಿಕೊಳ್ಳಬೇಕು ಎಂಬೆಲ್ಲಾ ಕನಸುಗಳನ್ನು ಅರ್ಧಕ್ಕೆ ಭಗ್ನಗೊಳಿಸಿ ಪೋಷಕರ ಆಸೆಯಂತೆ ಮದುವೆ ಮಾಡಿಕೊಂಡು ಹೋಗುತ್ತಾರೆ. ಆದರೆ ಪತಿಯಾಗಿ ಬಂದವನು ಸಹೃದಯಿಯಾಗಿದ್ದಲ್ಲಿ ಅನೇಕರಿಗೆ ಮದುವೆಯ ನಂತರವೂ ತಮ್ಮ ಕನಸುಗಳನ್ನು ಪೂರ್ಣಗೊಳಿಸುವ ಅವಕಾಶ ಸಿಗುತ್ತದೆ. ಹಲವು ಗಂಡಂದಿರು ತಮ್ಮ ಪತ್ನಿಯ ಕನಸಿಗೆ ಬೆನ್ನೆಲುಬಾಗಿ ನಿಂತು ಅವರನ್ನು ಓದಿಸುತ್ತಾರೆ. ಅನೇಕರು ಉದ್ಯೋಗವನ್ನು ಗಿಟ್ಟಿಸಿ ಗಂಡನ ಜೊತೆ ಸಂಸಾರ ಸರಿದೂಗಿಸುವುದಕ್ಕೆ ನೆರವಾಗುತ್ತಾರೆ. ಆದರೆ ಕನಸೆಲ್ಲಾ ಈಡೇರಿದ ಮೇಲೆ ತನಗೆ ಏಣಿಯಂತೆ ನಿಂತ ಪತಿಯನ್ನೇ ದೂರ ತಳ್ಳಿದ್ರೆ ವಿಧಿ ಮೆಚ್ಚಿತೇ ಇಂತಹದೊಂದು ಕೆಲಸವನ್ನು ಗೃಹಿಣಿಯೊಬ್ಬಳು ಮಾಡಿದ್ದು, ಈಗ ಗಂಡ ಹೆಂಡತಿ ನ್ಯಾಯಾಲಯದ ಮುಂದೆ ವಿಚ್ಛೇದನಕ್ಕಾಗಿ ನಿಂತಿದ್ದಾರೆ.
ಈ ಮಧ್ಯಪ್ರದೇಶದ ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದ ಮುಂದೆ ಬಂದ ಪ್ರಕರಣವೀಗ ಭಾರಿ ಸಂಚಲನ ಸೃಷ್ಟಿಸಿದೆ. ಪತಿ ಪೌರೋಹಿತ್ಯ ಮಾಡಿ ಕೆಲಸ ಮಾಡುತ್ತಿದ್ದು, ತಮ್ಮ ಉಳಿಕೆಯನ್ನೆಲ್ಲಾ ಪತ್ನಿಯ ಶಿಕ್ಷಣಕ್ಕೆ ಸುರಿದಿದ್ದಾಗಿ ಹೇಳಿದ್ದಾರೆ. ಆದರೆ ಏನೂ ಇಲ್ಲದೇ ಪತ್ನಿಗೆ ಶಿಕ್ಷಣ ಪಡೆದು ಉದ್ಯೋಗ ಸಿಗುತ್ತಿದ್ದಂತೆ ಆಕೆಯ ಬಣ್ಣ ಬದಲಾಗಿದೆ. ಆಕೆಗೆ ಗಂಡನ ಬಟ್ಟೆ ಆತನ ವೃತ್ತಿ, ಆತನ ನೋಟ ಎಲ್ಲವೂ ಅವಮಾನಕಾರಿ ಎಂದು ಎನಿಸಲು ಶುರುವಾಗಿದೆ. ವಿನಯವನ್ನು ಕಲಿಸಬೇಕಿದ್ದ ವಿದ್ಯೆ ಇಲ್ಲಿ ಈಕೆಗೆ ದುರಂಕಾರವನ್ನು ತಲೆಗೆ ತುಂಬಿದೆ.
ಅಂದಹಾಗೆ ಪೌರೋಹಿತ್ಯ ಮಾಡ್ತಿದ್ದ ವ್ಯಕ್ತಿಯ ಪತ್ನಿ ಸೇರಿದ್ದು, ಅಂತಿಂತ ಕೆಲಸವಲ್ಲ, ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಆಕೆಗೆ ಸಬ್ ಇನ್ಸ್‌ಪೆಕ್ಟರ್ ಕೆಲಸ ಸಿಕ್ಕಿತ್ತು. ಆದರೆ ಈಗ ಆಕೆ ಪತಿಯಿಂದ ವಿಚ್ಛೇದನ ಕೊಡಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಆತನ ಸಾಂಪ್ರದಾಯಿಕ ಉಡುಗೆ ವೇಷ ಭೂಷಣ, ವೃತ್ತಿ ತನಗೆ ಸಾಮಾಜಿಕವಾಗಿ ಮುಜುಗರ ಉಂಟು ಮಾಡುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಇತ್ತ ಆಕೆಯ ಪತಿ, ತಾನು ಆಕೆಯ ಕನಸುಗಳು ಕೈಗೂಡಲು ಆಕೆಯನ್ನು ಬೆಂಬಲಿಸಿದೆ. ಆಕೆಯ ಶಿಕ್ಷಣಕ್ಕೆ ಆರ್ಥಿಕವಾಗಿ ಸಹಾಯ ಮಾಡಿದೆ. ಆದರೆ ಈಗ ಆಕೆ ತನ್ನನ್ನು ಸ್ವೀಕರಿಸಬೇಕು ಎಂದರೆ ತನ್ನ ಗುರುತನ್ನೇ ಬದಲಿಸಿಕೊಳ್ಳಬೇಕು ಎನ್ನುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ.
ನ್ಯಾಯಾಲಯದ ದಾಖಲೆಗಳು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಕೌನ್ಸಿಲರ್‌ಗಳ ಪ್ರಕಾರ, ಮದುವೆಯ ನಂತರ ದಂಪತಿಗಳು ಮೂರರಿಂದ ನಾಲ್ಕು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಮಹಿಳೆಗೆ ಪೊಲೀಸ್ ಪಡೆಗೆ ಸೇರುವ ಸ್ಪಷ್ಟ ಮಹತ್ವಾಕಾಂಕ್ಷೆ ಇತ್ತು ಮತ್ತು ಪತಿ ಆಕೆಯ ಆ ಗುರಿಯನ್ನು ಗೌರವಿಸಿದರು ಮತ್ತು ಪ್ರೋತ್ಸಾಹಿಸಿದರು. ತಾವು ಪೌರೋಹಿತ್ಯ, ಧಾರ್ಮಿಕ ಆಚರಣೆಗಳ ಮೂಲಕ ಗಳಿಸಿದ ತನ್ನ ಆದಾಯದ ಗಮನಾರ್ಹ ಭಾಗವನ್ನು ಆಕೆಯ ಶಿಕ್ಷಣ, ತರಬೇತಿ ಮತ್ತು ಪರೀಕ್ಷೆಯ ತಯಾರಿಗಾಗಿ ಹೂಡಿಕೆ ಮಾಡಿದರು.
ಗಂಡನ ಬೆಂಬಲ ಹಾಗೂ ಆಕೆಯ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ಅವರು ಸಬ್ ಇನ್ಸ್‌ಪೆಕ್ಟರ್ ಆಗಿಯೂ ಆಯ್ಕೆಯಾದರು. ಆದರೆ ಅವರು ತರಬೇತಿ ಮುಗಿಸಿ ಸೇವೆಗೆ ಸೇರಿದ ಕೂಡಲೇ, ಪತಿಯ ಬಗ್ಗೆ ಅವರ ವರ್ತನೆ ಬದಲಾಯಿತು ಎಂದು ವರದಿಯಾಗಿದೆ.
ಧೋತಿ-ಕುರ್ತಾ ಧರಿಸುವುದನ್ನು ಮತ್ತು ಸಾಂಪ್ರದಾಯಿಕ ಶಿಖೆ (ತಲೆ ಹಿಂಭಾಗ ಸಣ್ಣ ಜುಟ್ಟು) ಇಟ್ಟುಕೊಳ್ಳುವುದನ್ನು ಪತ್ನಿ ವಿರೋಧಿಸಿದಳು. ಅವನು ತನ್ನ ಕೂದಲನ್ನು ಕತ್ತರಿಸಬೇಕು, ಉಡುಪನ್ನು ಬದಲಾಯಿಸಬೇಕು ಮತ್ತು ತನ್ನ ಪುರೋಹಿತನಂತೆ ಕಾಣುವ ಸಾಂಪ್ರದಾಯಿಕ ಧಿರಿಸನ್ನು ತ್ಯಜಿಸಬೇಕು ಎಂದು ಅವಳು ಒತ್ತಾಯಿಸಿದಳು ಎಂದು ಆರೋಪಿಸಲಾಗಿದೆ. ಇತ್ತ ಪತಿ ತನ್ನ ಉಡುಪು ನನ್ನ ನಂಬಿಕೆ ಹಾಗೂ ನನ್ನ ಗುರುತಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿ ಪತ್ನಿಯ ಮನವಿಯನ್ನು ನಿರಾಕರಿಸಿದಾಗ, ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಭಿಕ್ಷೆ ಬೇಡಿ ಬಂದ ಹಣದಲ್ಲಿ 500 ನಿರ್ಗತಿಕರಿಗೆ ಕಂಬಳಿ ಖರೀದಿಸಿ ಹಂಚಿದ ಭಿಕ್ಷುಕ
ತನ್ನ ಅರ್ಜಿಯಲ್ಲಿ, ತನ್ನ ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ತನಗೆ ಅನಾನುಕೂಲ ಮತ್ತು ಮುಜುಗರವಾಗುತ್ತಿದೆ ಮತ್ತು ಅವರ ನೋಟ ಮತ್ತು ವೃತ್ತಿಯು ಇನ್ನು ಮುಂದೆ ತನ್ನ ಸಾಮಾಜಿಕ ಮತ್ತು ವೃತ್ತಿಪರ ಜೀವನಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಪತ್ನಿ ಹೇಳಿದಳು. ಹೀಗಾಗಿ ದಂಪತಿಗಳನ್ನು ಒಂದುಗೂಡಿಸಲು ಕುಟುಂಬ ನ್ಯಾಯಾಲಯವು ಹಲವಾರು ಸಲಹಾ ಅವಧಿಗಳನ್ನು ನಡೆಸಿತಾದರೂ ಸಲಹೆಗಾರರ ಪ್ರಕಾರ, ಮಹಿಳೆ ತನ್ನ ನಿಲುವಿನಲ್ಲಿ ದೃಢವಾಗಿ ಉಳಿದು ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಮಾರಕ ಇಂಜೆಕ್ಷನ್ ನೀಡಿ 300 ಬೀದಿನಾಯಿಗಳ ಮಾರಣಹೋಮ : 9 ಜನರ ವಿರುದ್ಧ ಕೇಸ್
ತಮ್ಮ ಪಾಲುದಾರರು ಹಠಾತ್ ಜೀವನಶೈಲಿ ಅಥವಾ ಸಾಮಾಜಿಕ ಚಲನಶೀಲತೆ ಬದಲಾವಣೆಗಳಿಗೆ ಒಳಗಾದಾಗ ಇಂತಹ ಘರ್ಷಣೆಗಳು ದಂಪತಿಗಳ ಮಧ್ಯೆ ಹೆಚ್ಚಾಗಿ ಉದ್ಭವಿಸುತ್ತವೆ ಎಂದು ಕುಟುಂಬ ಸಲಹೆಗಾರ ಶೈಲ್ ಅವಸ್ಥಿ ಹೇಳಿದರು. ಒಬ್ಬ ಸಂಗಾತಿಯ ಸಾಮಾಜಿಕ ಸ್ಥಾನಮಾನವು ವೇಗವಾಗಿ ಬದಲಾದಾಗ, ಜೀವನಶೈಲಿಯ ವ್ಯತ್ಯಾಸಗಳು ತೀಕ್ಷ್ಣವಾಗುತ್ತವೆ, ಆಕ್ಷೇಪಣೆಗಳು ಬೆಳೆಯುತ್ತವೆ, ಇರುವುದನ್ನು ಇರುವಂತೆ ಸ್ವೀಕರಿಸುವುದು ಕಡಿಮೆಯಾಗುತ್ತದೆ ಮತ್ತು ಭಾವನಾತ್ಮಕ ಅಂತರವು ಹೆಚ್ಚಾಗುತ್ತದೆ. ದಂಪತಿಗಳು ಹೊಂದಿಕೊಳ್ಳಲು ವಿಫಲವಾದರೆ, ಪರಿಸ್ಥಿತಿ ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಆದರೆ ಬೇಸರದ ವಿಚಾರ ಎಂದರೆ ಮಹಿಳೆಯ ಕನಸನ್ನು ಬೆಂಬಲಿಸಿದ ಮತ್ತು ಅವಳ ಏಳಿಗೆಗೆ ಹಣಕಾಸು ಒದಗಿಸಿದ ಪುರುಷನೇ ಈಗ ಮಹಿಳೆ ಆತನ ಸರಳತೆ, ನಂಬಿಕೆ ಮತ್ತು ಸಾಂಪ್ರದಾಯಿಕ ಜೀವನಕ್ಕಾಗಿ ತಿರಸ್ಕರಿಸಿರುವುದು ದುಃಖಕರ ವಿಚಾರವಾಗಿದೆ.


