ಬೆದರಿಸಲು ಯಾರಪ್ಪಾ ನೀನು? ರಾಜ್ ಠಾಕ್ರೆಯ ರಸಮಲೈ ಟೀಕೆಗೆ ಕೆರಳಿದ ಅಣ್ಣಾಮಲೈ
ಬೆದರಿಸಲು ಯಾರಪ್ಪಾ ನೀನು?, ರಾಜ್ ಠಾಕ್ರೆಯ ರಸಮಲೈ ವ್ಯಂಗ್ಯಕ್ಕೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಮುಂಬೈ ಬರುತ್ತೇನೆ. ತಾಕತ್ ಇದ್ರೆ ಮುಟ್ಟಿ ನೋಡು ಎಂದು ಅಣ್ಣಾಮಲೈ ಸವಾಲು ಹಾಕಿದ್ದಾರೆ.

ಆ ರಸಮಲೈ ಯಾರು?
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ನಡುವಿನ ವಾಕ್ಸಮರ ತಾರಕ್ಕೇರಿದೆ. ಮುಂಬೈ ಅಂತಾರಾಷ್ಟ್ರೀಯ ನಗರ ಎಂದು ಹೇಳಿಕೆ ನೀಡಿದ್ದ ಅಣ್ಣಾಮಲೈ ವಿರುದ್ದ ರಾಜ್ ಠಾಕ್ರೆ ಆಕ್ರೋಶ ಹೊರಹಾಕಿದ್ದರು. ಮುಂಬೈ ವಿಷಯಗಳ ಕುರಿತು ಹೇಳಿಕೆ ನೀಡಲು ಆ ರಸಮಲೈ ಯಾರು ಎಂದು ಅಣ್ಣಾಮಲೈ ಲೇವಡಿ ಮಾಡಿದ್ದರು.
ರಾಜ್ ಠಾಕ್ರೆಗೆ ಸವಾಲೆಸೆದ ಅಣ್ಣಾಮಲೈ
ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರ ವೇದಿಕೆಯಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ರಾಜ್ ಠಾಕ್ರೆ ಹೇಳಿಕೆಗೆ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಈ ರೀತಿಯ ಬೆದರಿಕೆಗೆ ನಾನು ಹೆದರವುದಿಲ್ಲ. ನಾನು ರೈತನ ಮಗ, ರಾಜ್ ಠಾಕ್ರೆ, ಆದಿತ್ಯ ಠಾಕ್ರೆ ಯಾರು? ನನಗೆ ಬೆದರಿಕೆ ಹಾಕಲು ಅವರು ಯಾರು ಎಂದು ಅಣ್ಮಾಮಲೈ ಪ್ರಶ್ನಿಸಿದ್ದಾರೆ.
ಕಾಲು ಕಟ್ ಮಾಡುತ್ತೀರಾ, ಮುಂಬೈಗೆ ಬರುತ್ತೇನೆ
ಮುಂಬೈ ಬಂದರೆ ಕಾಲು ಕಟ್ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಗೆ ನನ್ನ ಮುಂದೆ ಬೇಡ. ನಾನು ಮುಂಬೈಗೆ ಬರುತ್ತೇನೆ. ನೋಡೇ ಬಿಡೋಣ ಏನು ಮಾಡುತ್ತೀರಿ ಎಂದು ಅಣ್ಣಾಮಲೈ, ರಾಜ್ ಠಾಕ್ರೆ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದಾರೆ. ಕೆಲವರು ಸಭೆ ಮಾಡಿ ಮಾಡಿ ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಮುಂಬೈನಲ್ಲಿ ಪ್ರಚಾರ ಮಾಡಿದ್ದ ಅಣ್ಣಾಮಲೈ
ಮಂಬೈ ಪಾಲಿಕೆ ಚುನಾವಣೆ ಪ್ರಯುಕ್ತ ಅಣ್ಮಾಮಲೈ ಧಾರಾವಿ ಸೇರಿದಂತೆ ಹಲವು ತಮಿಳಿಗರ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಚಾರ ಮಾಡಿದ್ದರು. ಈ ವೇಳೆ ಮುಂಬೈ ಕೇವಲ ಮಹಾರಾಷ್ಟ್ರದ ನಗರವಲ್ಲ, ಇದು ಅಂತಾರಾಷ್ಟ್ರೀಯ ನಗರ. ಮುಂಬೈ ನಗರದ ಬಜೆಟ್ 75,000 ಕೋಟಿ ರೂಪಾಯಿ ಎಂದು ಅಣ್ಣಾಮಲೈ ಹೇಳಿದ್ದರು.
ಮುಂಬೈನಲ್ಲಿ ಪ್ರಚಾರ ಮಾಡಿದ್ದ ಅಣ್ಣಾಮಲೈ
ತಿರುಗೇಟು ನೀಡೋ ಭರದಲ್ಲಿ ಠಾಕ್ರೆಯಿಂದ ನಿಂದನೆ
ಅಣ್ಣಾಮಲೈಗೆ ತಿರುಗೇಟು ನೀಡೋ ಭರದಲ್ಲಿ ರಾಜ್ ಠಾಕ್ರೆ ನಿಂದನೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಇತರ ರಾಜ್ಯಗಳಿಂದ ಬಂದು ಮರಾಠಿ ಸಂಸ್ಕೃತಿ ಮೇಲೆ ಸವಾರಿ ಮಾಡುತ್ತಿದ್ದಾರೆ. ಹಿಂದಿ ಸೇರಿ ಇತರ ಭಾಷೆ ಹೇರುತ್ತಿದ್ದಾರೆ. ಇತರ ಭಾಷಿಕರು ಮುಂಬೈ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಬಾಳ ಠಾಕ್ರೆಯ ಕ್ರಾಂತಿಕಾರಿ ಆಂದೋಲನ ಲುಂಗಿ ಉಟಾವೋ, ಪುಂಗಿ ಬಜಾವೋ ಮತ್ತೆ ಜಾರಿಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಅಣ್ಣಾಮಲೈಗೆ ರಸಮಲೈ ಎಂದು ನಿಂದಿಸಿ, ದಕ್ಷಿಣ ಭಾರತೀಯರ ವಿರುದ್ದ ಕೆಂಡ ಕಾರಿದ್ದರು.
ತಿರುಗೇಟು ನೀಡೋ ಭರದಲ್ಲಿ ಠಾಕ್ರೆಯಿಂದ ನಿಂದನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

