ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ಧರಿಸಿಯೇ ರೀಲ್ಸ್ ಮಾಡ್ತಿರುವ ತನಗೆ ತನ್ನದೇ ಸಮುದಾಯ ಜನರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮಹಿಳೆಯೂ ಆಗಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಾಹಿದಾ ಅಕ್ಧಾರ್ ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ಧರಿಸಿಯೇ ರೀಲ್ಸ್ ಮಾಡ್ತಿರುವ ತನಗೆ ತನ್ನದೇ ಸಮುದಾಯ ಜನರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮಹಿಳೆಯೂ ಆಗಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಾಹಿದಾ ಅಕ್ಧಾರ್ ಅವರು ಆರೋಪಿಸಿದ್ದಾರೆ. ತನ್ನದೇ ಸಮುದಾಯದ ಜನರು ತನಗೆ ಬೆದರಿಕೆಯೊಡ್ಡುತ್ತಿದ್ದು, ತಾನು ತನ್ನ ವೀಡಿಯೋಗಳ ಮೂಲಕ ತನ್ನ ಊರಾದಾದ ತಮಿಳುನಾಡಿನ ಕಡೈಯಲ್ಲೂರನ್ನು ಅವಮಾನಿಸುತ್ತಿದ್ದೇನೆ ಎಂದು ಅವರು ನನಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಸರಣಿ ವೀಡಿಯೋಗಳ ಮೂಲಕ ಹೇಳಿಕೊಂಡಿದ್ದಾರೆ. ಹಾಗೆಯೇ ಇನ್ನೂ ಕೆಲವರು ತನ್ನ ಮನೆಗೂ ಬಂದು ತನಗೂ ಹಾಗೂ ತನ್ನ ತಾಯಿಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ವಹೀದಾ ಅವರು ಆರೋಪಿಸಿದ್ದಾರೆ.
ನಾನು ಇದರ ಬಗ್ಗೆ ಮಾತನಾಡಲು ಬಯಸಿರಲಿಲ್ಲ. ಆದರೆ ಈ ಕಿರುಕುಳವೂ ಆನ್‌ಲೈನ್‌ನನ್ನು ದಾಟಿ ನನ್ನ ವೈಯಕ್ತಿಕ ಜೀವನವನ್ನು ಪ್ರವೇಶಿಸಿದೆ. ತನ್ನ ರೀಲ್ಸ್‌ಗಳು ತನ್ನ ಊರಾದ ಕಡಿಯನಲ್ಲೂರ್ ಮರ್ಯಾದೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಇದೇ ನಗರದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ನಡೆದಿವೆ. ಅವೆಲ್ಲವನ್ನು ಬದಿಗಿಟ್ಟು ಏಕೆ ತನ್ನ ವಿಚಾರವನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಹೂವಿನ ಮಾಲೆ ವಧುವರರಿಗೆ ಕೊಡುವ ಬದಲು ತಾವೇ ಹಾಕಿದ ಬಾಲಕರು: ವೀಡಿಯೋ ಭಾರಿ ವೈರಲ್
ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನ ದೌರ್ಜನ್ಯ, ಬಲವಂತದ ವಿವಾಹಗಳು, ಹದಿಹರೆಯದ ಗರ್ಭಧಾರಣೆಗಳು ಹೀಗೆ ಹತ್ತು ಹಲವು ಸಾಮಾಜಿಕ ಸಮಸ್ಯೆಗಳ ಉಲ್ಲೇಖಿಸಿದ ಅವರು ಇವು ಪಟ್ಟಣದ ಚಿತ್ರಣಕ್ಕೆ ಕಳಂಕ ತರುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಬುರ್ಖಾ ಅಥವಾ ಹಿಜಾಬ್ ಧರಿಸಿ ರೀಲ್ಸ್‌ಗಳನ್ನು ಮಾಡುತ್ತೇನೆ. ನಾನು ಬೇರೆ ಏನನ್ನೂ ಮಾಡುವುದಿಲ್ಲ. ನನ್ನ ವಿಷಯವು ಇಸ್ಲಾಂ ಅಥವಾ ಯಾವುದೇ ಧಾರ್ಮಿಕ ನಂಬಿಕೆಯನ್ನು ಅವಮಾನಿಸುವುದಿಲ್ಲ. ನಾನು ಅಲ್ಲಾ ಅಥವಾ ಇಸ್ಲಾಂ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿಲ್ಲ. ನನಗೆ ಇಷ್ಟವಾದದ್ದನ್ನು ನಾನು ಮಾಡುತ್ತಿದ್ದೇನೆ ಅದರೂ ಇವರು ನನಗೆ ನಿಂದಿಸುತ್ತಿದ್ದಾರೆ ಎಂದು ವಹೀದಾ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆರಿಗೆ ವೇಳೆ ಹೆಂಡ್ತಿ ಜೊತೆಗಿರಲು ಬಂದ ಯೋಧ ಅಪಘಾತದಲ್ಲಿ ಸಾವು: ಸ್ಟ್ರೆಚರ್‌ನಲ್ಲಿ ಬಂದು ಅಂತಿಮ ದರ್ಶನ ಪಡೆದ ಪತ್ನಿ
ಇವರಿಗೆ ಬೇಡ ಎಂದಾದರೆ ಬ್ಲಾಕ್ ಮಾಡುವ ಅವಕಾಶಗಳು ಸಾಮಾಜಿಕ ಜಾಲತಾಣದಲ್ಲಿ ಇವೆ. ಅದನ್ನು ಬಿಟ್ಟು ನನ್ನ ರೀಲ್ಸ್ ನೋಡುತ್ತಲೇ ನನ್ನನ್ನು ಟೀಕಿಸುವ ಜನರ ದ್ವಿಮುಖ ನೀತಿ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತನಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಜೀವ ಬೆದರಿಕೆ ಹಾಗೂ ನಿಂದನೆಗಳನ್ನು ಅವರು ಟೀಕಿಸಿದ್ದು, ನೈತಿಕತೆ ಅಥವಾ ಧರ್ಮದ ಹೆಸರಿನಲ್ಲಿ ಮಹಿಳೆಗೆ ಹಾನಿ ಮಾಡುವುದನ್ನು ಅಥವಾ ಬೆದರಿಕೆ ಹಾಕುವುದನ್ನು ಯಾರಾದರೂ ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ಧರ್ಮವನ್ನು ತರುವುದು, ದ್ವೇಷವನ್ನು ಸೃಷ್ಟಿಸುವುದು ಮತ್ತು ಇತರರನ್ನು ನೋಯಿಸುವುದು ಈ ಮನಸ್ಥಿತಿ ಬದಲಾಗಬೇಕು ಎಂದು ಅವರು ಹೇಳಿದ್ದಾರೆ.


