ಹೇಳುವುದಕ್ಕೆ ಇವರು ಭಿಕ್ಷುಕ. ಆದರೆ ಹೃದಯ ವೈಶ್ಯಾಲ್ಯತೆಯಲ್ಲಿ ಇವರು ನಿಜವಾಗಿಯೂ ಶ್ರೀಮಂತ ಎಂಬುದನ್ನು ಈ ಭಿಕ್ಷುಕ ಸಾಬೀತುಪಡಿಸಿದ್ದಾರೆ. ಹೌದು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಭಿಕ್ಷೆ ಬೇಡಿಯೇ ಜೀವನ ಮಾಡುತ್ತಿದ್ದ ರಾಜು ಎಂಬುವವರು ತಮ್ಮ ಕಷ್ಟದ ನಡುವೆಯೂ ಬೇರೆಯವರಿಗೆ ಭರವಸೆಯ ಬೆಳಕಾಗಿದ್ದಾರೆ.
ಉತ್ತರ ಭಾರತದಾದ್ಯಂತ ತೀವ್ರ ಚಳಿ ಆವರಿಸಿದ್ದು, ಇದು ನಿರ್ಗತಿಕರು, ಮನೆ ಇಲ್ಲದವರು ಭಿಕ್ಷುಕರು ಮುಂತಾದವರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ತೀವ್ರ ಶೀತಗಾಳಿಯ ಹೊಡೆತಕ್ಕೆ ಸಿಲುಕಿ ಅನೇಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಹೀಗಿರುವಾಗ ವ್ಯಕ್ತಿಯೊಬ್ಬರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹೌದು ಹೊರಗಿನ ಸಮಾಜದಲ್ಲಿ ಹೇಳುವುದಕ್ಕೆ ಇವರು ಭಿಕ್ಷುಕ. ಆದರೆ ವಾಸ್ತವದಲ್ಲಿ ಹೃದಯ ವೈಶ್ಯಾಲ್ಯತೆಯಲ್ಲಿ ಇವರು ನಿಜವಾಗಿಯೂ ಶ್ರೀಮಂತ ಎಂಬುದನ್ನು ಈ ಭಿಕ್ಷುಕ ಸಾಬೀತುಪಡಿಸಿದ್ದಾರೆ. ಹೌದು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಭಿಕ್ಷೆ ಬೇಡಿಯೇ ಜೀವನ ಮಾಡುತ್ತಿದ್ದ ರಾಜು ಎಂಬುವವರು ತಮ್ಮ ಕಷ್ಟದ ನಡುವೆಯೂ ಬೇರೆಯವರಿಗೆ ಭರವಸೆಯ ಬೆಳಕಾಗಿದ್ದಾರೆ. ಈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಅವರು ತಾವು ಭಿಕ್ಷೆ ಬೇಡಿ ಬಂದ ಹಣದಲ್ಲೇ ಸುಮಾರು 500 ಜನರಿಗೆ ಕಂಬಳಿಯನ್ನು ನೀಡಿ. ತೀವ್ರವಾದ ಚಳಿಯಿಂದ ಅವರ ರಕ್ಷಣೆಮಾಡಿದ್ದಾರೆ.
ತನ್ನ ಬಳಿ ಇದ್ದ ಸ್ವಲ್ಪ ಮೊತ್ತದ ಹಣದಲ್ಲೇ ರಾಜು ಅವರು 500 ಬೆಡ್‌ಶಿಟ್ ಅಥವಾ ಕಂಬಳಿಯನ್ನು ಅಗತ್ಯವಿದ್ದವರಿಗೆ ದಾನವಾಗಿ ನೀಡಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಈಗ ಅನೇಕರ ಹೃದಯ ಗೆದ್ದಿದ್ದು ಮಾನವೀಯತೆಗೆ ಸಾಕ್ಷಿಯಾಗಿದೆ. ಇವರು ಕಂಬಳಿ ವಿತರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಸೂಕ್ತ ರಕ್ಷಣೆ ಇಲ್ಲದೇ ಬೀದಿಯಲ್ಲಿ ಚಳಿಯ ರಾತ್ರಿಯನ್ನು ಕಳೆಯುವ ಅನೇಕರಿಗೆ ರಾಜು ಅವರ ಈ ನಿಸ್ವಾರ್ಥ ಸೇವೆಯಿಂದ ನೆಮ್ಮದಿ ಎನಿಸಿದೆ. ರಾಜು ಅವರ ಸಾಮಾಜಿಕ ಸೇವೆ ಇದೇ ಮೊದಲಲ್ಲ, ಕೋವಿಡ್ 19 ಸಮಯದಲ್ಲಿಯೂ ಅವರು ಇದೇ ರೀತಿಯ ಸಾಮಾಜಿಕ ಸೇವೆ ಮಾಡಿದ್ದರು. ಅವರ ಈ ಕಾರ್ಯಗಳು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿತ್ತು. ಅವರು ಮನ್ ಕೀ ಬಾತ್‌ನಲ್ಲಿ ರಾಜು ಅವರ ಕಾರ್ಯವನ್ನು ಶ್ಲಾಘಿಸಿದ್ದರು.
ಇದನ್ನೂ ಓದಿ: ಮಾರಕ ಇಂಜೆಕ್ಷನ್ ನೀಡಿ 300 ಬೀದಿನಾಯಿಗಳ ಮಾರಣಹೋಮ : 9 ಜನರ ವಿರುದ್ಧ ಕೇಸ್
ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಮಾತನಾಡಿಸಿದಾಗ ಅವರು ಹೇಳಿದು,, ಕಂಬಳಿಗಳನ್ನು ಜೋಡಿಸಲು ತಾನು ಸಣ್ಣ ಮೊತ್ತವನ್ನು ಸಂಗ್ರಹಿಸುತ್ತಿದ್ದೆಕೆಲವೊಮ್ಮೆ ಒಮ್ಮೆಗೆ ಕೇವಲ 10 ರೂ., ದೇವರು ತನಗೆ ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡುವ ಕರ್ತವ್ಯವನ್ನು ನೀಡಿದ್ದಾನೆ ಎಂದು ನಾನು ನಂಬುತ್ತೇನೆ ದೇವರು ಎಲ್ಲವನ್ನೂ ಮಾಡುತ್ತಲೇ ಇರುತ್ತಾನೆ. ಮತ್ತು ನಾನು ನನ್ನ ಕೆಲಸವನ್ನು ಮಾಡುತ್ತಲೇ ಇರುತ್ತೇನೆ ಎಂದು ಅವರು ಹೇಳಿದರು. ರಾಜು ಅವರಿಗೆ ಪ್ರಸ್ತುತ ವಾಸಿಸಲು ಸ್ಥಳವಿಲ್ಲದ ಕಾರಣ, ಶಾಶ್ವತ ಮನೆಗಾಗಿ ಸರ್ಕಾರಕ್ಕೆ ರಾಜು ಮನವಿ ಮಾಡಿದರು. ಸ್ಥಳೀಯ ನಿವಾಸಿಗಳು ರಾಜು ಅವರ ಈ ಮಾನವೀಯ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಸಮಾಜವು ಅವರಿಂದ ಕಲಿಯಬೇಕು ಮತ್ತು ದೀನದಲಿತರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶದಿಂದ ರಹಸ್ಯವಾಗಿ ಆಗಮಿಸಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನೇ ಕೊಂದ ಮಗ


