ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ
ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ, ಇದು 17 ದಿನದ ಪ್ರವಾಸ. ಈ ಟೂರ್‌ನಲ್ಲಿ ಇಡೀ ರಾಮಾಯಣ ದರ್ಶನವಾಗಲಿದೆ. ಇದರ ಬೆಲೆ ಧಾರ್ಮಿ ಕ್ಷೇತ್ರ, ಪ್ರವಾಸಿ ತಾಣಗಳ ವಿವರ ಇಲ್ಲಿದೆ.

ಶ್ರೀ ರಾಮಾಯಣ ಯಾತ್ರಾ ಟೂರ್
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಮಾರ್ಚ್ ಅಂತ್ಯದ ವೇಳೆ ಬಹುತೇಕ ಪರೀಕ್ಷೆಗಳು ಅಂತ್ಯಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ವಿಶೇಷ ಶ್ರೀ ರಾಮಾಯಾಣ ಯಾತ್ರಾ ಟೂರ್ ಘೋಷಿಸಿದೆ. ಮಾರ್ಚ್ 30 ರಿಂದ ಈ ಧಾರ್ಮಿಕ ಪ್ರವಾಸ ಆರಂಭಗೊಳ್ಳಲಿದೆ. ವಿಶೇಷ ಅಂದರೆ ಇದು 17 ದಿನಗಳ ಸುದೀರ್ಘ ಪ್ರವಾಸ. ಇಷ್ಟೇ ಅಲ್ಲ 17 ದಿನದಲ್ಲಿ ರಾಮಾಯಾಣ ದರ್ಶನವಾಗಲಿದೆ. ರಾಮಾಯಣ ಕಾಲದ ವಿಶೇಷ ಸ್ಥಳ, ದೇವಸ್ಥಾನ, ಪೌರಾಣಿಕ ಮಹತ್ವದ ಸ್ಥಳಗಳಿಗೆ ಭೇಟಿ, ದೇವಸ್ಥಾನ ದರ್ಶನ, ಪ್ರವಾಸಿ ತಾಣಗಳ ದರ್ಶನ ಪಡೆಯುವ ವಿಶೇಷ ಟೂರ್ ಇದಾಗಿದೆ.
ಭಾರತ ಹಾಗೂ ನೇಪಾಳದ ಐತಿಹಾಸಿಕ ಸ್ಥಳಗಳಿಗೆ ಭೇಟಿ
ಶ್ರೀ ರಾಮಾಯಣ ದರ್ಶನ ಭಾರತ ಹಾಗೂ ನೇಪಾಳಕ್ಕೆ ಹೊಂದಿದೆ. ಸೀತಾ ಮಾ ಹುಟ್ಟೂರು, ಸೀತಾ ಮಾ ದೇವಸ್ಥಾನಗಳು ನೇಪಾಳದಲ್ಲಿದೆ. ಪ್ರಮುಖವಾಗಿ ಆಯೋಧ್ಯೆ, ನಂದಿಗ್ರಾಮ, ಸೀತಾಮಾ, ಜನಕಪುರ, ಬುಕ್ಸರ್, ವಾರಣಾಸಿ, ಪ್ರಯಾಗರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ ಸೇರಿದಂತೆ ಪ್ರಮುಖ ಸ್ಥಳಗಳ ದರ್ಶನ ಈ ಟೂರ್‌ನಲ್ಲಿದೆ.
ಅಂಜನಾದ್ರಿ ಬೆಟ್ಟ, ಹನುಮಾನ ದೇವಸ್ಥಾನ ದರ್ಶನ
ದೆಹಲಿಯ ಸಫ್ಧರ್‌ಜಂಗ್ ರೈಲು ನಿಲ್ದಾಣದಿಂದ ಈ ಯಾತ್ರ ಆರಂಭಗೊಳ್ಳಲಿದೆ. ದೆಹಲಿಯಿಂದ ನೇರವಾಗಿ ಆಯೋಧ್ಯೆ ತಲುಪಲಿದೆ. ಬಳಿಕ ಶ್ರೀರಾಮಾಯಣದಲ್ಲಿ ಬರುವ ಎಲ್ಲಾ ಸ್ಥಳಗಳಿಗೆ ಈ ಯಾತ್ರೆ ಸಂದರ್ಶನ ನಡೆಸಲಿದೆ. ಒಟ್ಟು 7,560 ಕಿಲೋಮೀಟರ್ ಯಾತ್ರೆ ಇದಾಗಿದೆ. ವಿಶೇಷ ಅಂದರೆ ಹಂಪಿ ಬಳಿ ಇರುವ ಹುಮಾನ್ ಹುಟ್ಟಿದ ಸ್ಥಳ ಅಂಜನಾದ್ರಿ ಬೆಟ್ಟ ಹಾಗೂ ದೇವಸ್ಥಾನ ದರ್ಶನವೂ ಈ ಯಾತ್ರೆಯಲ್ಲಿದೆ.
ಶ್ರೀ ರಾಮಾಯಣ ಯಾತ್ರೆ ಟಿಕೆಟ್ ಬೆಲೆ
ಶ್ರೀ ರಾಮಾಯಣ ಯಾತ್ರೆ ರೈಲು ಟಿಕೆಟ್ ಬೆಲೆ ಘೋಷಿಸಲಾಗಿದೆ. 3AC ಟಿಕೆಟ್ ದರ 1,14,100 ರೂಪಾಯಿ, ಇನ್ನು 2AC ಟಿಕೆಟ್ ದರ 1,51,225 ರೂಪಾಯಿ, 1AC ಟಿಕೆಟ್ ಬೆಲೆ 1,64,940 ರೂಪಾಯಿ. ಈ ಯಾತ್ರೆಯ ಅತೀ ಕಡಿಮೆ ಬೆಲೆ ಟಿಕೆಟ್ ಎಂದರೆ ಮೂವರು ಕುಳತುಕೊಳ್ಳುವ ಆಸನದ ಟಿಕೆಟ್ ಇದರ ಬೆಲೆ 1,11,630 ರೂಪಾಯಿ. ಈ ಯಾತ್ರೆಯಲ್ಲಿ ಭಾರತೀಯ ರೈಲ್ವೇ ಪ್ರಯಾಣ, ಆಹಾರ, ವಸತಿ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಿದೆ.
ಸಂದರ್ಶನದ ಸ್ಥಳ
ಬುಕ್ಸರ್, ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ
ವಾರಣಾಸಿ, ತುಳಸಿ ಮಾನಸ ದೇವಸ್ಥಾನ, ಸಂಕಟ ಮೋಚನ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಗಂಗಾ ಆರತಿ
ಸೀತಾಮಾಯಿ, ಸೀತಾ ಸಮಾಹಿತ ಸ್ಥಳ (ಸೀತಾ ಮಾ ದೇವಸ್ಥಾನ)
ಪ್ರಯಾಗರಾಜ್, ತ್ರೀವೇಣಿ ಸಂಗಮ, ಹನುಮಾನ ದೇವಸ್ಥಾನ,
ಶ್ರಿಂಗವೇರಪುರ, ರಿಶಿ ದೇವಸ್ಥಾನ
ಚಿತ್ರಕೂಟ,
ನಾಸಿಕ್
ಹಂಪಿ,
ರಾಮೇಶ್ವರಂ,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

