MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​

ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​

'ಬಿಗ್​ಬಾಸ್ ಅಗ್ನಿಪರೀಕ್ಷೆ'ಯಲ್ಲಿ ತನ್ನ ಮುಗ್ಧತೆಯಿಂದ ಎಲ್ಲರ ಮನಗೆದ್ದಿದ್ದ ಕುಮಾರಿ, ಆರೋಗ್ಯ ಸಮಸ್ಯೆಯಿಂದಾಗಿ ವೇದಿಕೆಯಲ್ಲೇ ಕುಸಿದು ಸ್ಪರ್ಧೆಯಿಂದ ಹೊರನಡೆದರು. ಆದರೆ, ಅವರ ಬದುಕಿಗೆ ತಿರುವು ಸಿಕ್ಕಿದ್ದು, ವಿನಯ್ ಗೌಡ ರಕ್ಷಣೆ ನೀಡಿದರೆ, ಪ್ರಾಯೋಜಕರು 5 ಲಕ್ಷ ನಗದು, ಉದ್ಯೋಗದ ಭರವಸೆ ನೀಡಿದ್ದಾರೆ.

2 Min read
Author : Suchethana D
Published : Sep 03 2026, 07:47 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​​ ಅಗ್ನಿ ಪರೀಕ್ಷೆ
Image Credit : Vinay Gowda Instagram

ಬಿಗ್​ಬಾಸ್​​ ಅಗ್ನಿ ಪರೀಕ್ಷೆ

ಬಿಗ್​ಬಾಸ್ ಅಗ್ನಿಪರೀಕ್ಷೆ (Bigg Boss Agni Pareekshe)ಯಲ್ಲಿ ಬಿಗ್​ಬಾಸ್​ಗೆ ಹೋಗುವ ಆಸೆಯಿಂದ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ 60 ಮಂದಿ ಫೈನಲ್​ ಆಗಿ ಆಯ್ಕೆಯಾಗಿದ್ದರು. ಮೂವರನ್ನು ಮಾತ್ರ ಬಿಗ್​ಬಾಸ್​ ಮನೆಯೊಳಕ್ಕೆ ಕಳುಹಿಸುವುದಾಗಿ ಹೇಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕುಮಾರಿಗೆ ಒಲಿದಿತ್ತು ಅದೃಷ್ಟ
Image Credit : Social Media

ಕುಮಾರಿಗೆ ಒಲಿದಿತ್ತು ಅದೃಷ್ಟ

ಅವರ ಪೈಕಿ ಕುಮಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಎಂಟ್ರಿ ಕೊಟ್ಟಿದ್ದರು ಲಾವಣ್ಯ ಕುಮಾರಿ. ರಕ್ಷಿತಾ ಶೆಟ್ಟಿ ಅವರನ್ನು ನೆನಪಿಸುವಂತೆ ಸಕತ್​ ಜೋಕ್​ ಮಾಡುತ್ತಿದ್ದರು ಕುಮಾರಿ. ಮುಗ್ಧವಾಗಿ ಮಾತನಾಡಿ ನಾಲ್ಕೂ ಜಡ್ಜಸ್​ ಮನೆ ಗೆದ್ದಿದ್ದರು. ‘ಸ್ಟಾರ್ ಕಂಟೆಂಡರ್’ ಆಗಿ ಸೆಲೆಕ್ಟ್ ಕೂಡ ಆಗಿದ್ದರು.

Related Articles

Related image1
ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​
Related image2
Bigg Boss ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ: ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು
36
ವೇದಿಕೆ ಮೇಲೆಯೇ ಕುಸಿದಿದ್ದ ಕುಮಾರಿ
Image Credit : Social Media

ವೇದಿಕೆ ಮೇಲೆಯೇ ಕುಸಿದಿದ್ದ ಕುಮಾರಿ

ತಮ್ಮ ಮಾತಿನ ಶೈಲಿಯಿಂದಲೇ ಎಲ್ಲರ ಮನ ಗೆದ್ದಿದ್ದ ಯುವತಿ ಇನ್ನೇನು ಬಿಗ್‌ಬಾಸ್‌ಗೆ ಸೆಲೆಕ್ಟ್‌ ಆಗುತ್ತಾಳೆ ಎನ್ನುವಾಗಲೇ, ವೇದಿಕೆ ಮೇಲೆ ಕುಸಿದು ಬಿದ್ದಿದ್ದರು. ಕುಮಾರಿ ಅವರು ಬಿಗ್​ಬಾಸ್​ ಆಟ ಮುಂದುವರೆಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇದೇ ಕಾರಣಕ್ಕೆ, ವೈದ್ಯರ ಸಲಹೆ ಮೇರೆಗೆ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಅಪ್ಪನಿಲ್ಲದೇ, ಅನಾರೋಗ್ಯಪೀಡಿತ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಬದುಕುತ್ತಿರುವ ಕುಮಾರಿಗೂ ಆರೋಗ್ಯ ಸರಿಯಿಲ್ಲ. ಟಾಸ್ಕ್‌ ಆಡುವಾಗ ಕುಸಿದಿದ್ದ ಕುಮಾರಿಯನ್ನು ಕಲರ್ಸ್‌ ತಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಗಿತ್ತು.

46
ಕೊನೆಯ ಉಸಿರು ಇರುವವರೆಗೂ ರಕ್ಷಣೆ
Image Credit : Social Media

ಕೊನೆಯ ಉಸಿರು ಇರುವವರೆಗೂ ರಕ್ಷಣೆ

ಇದೀಗ ತೀರ್ಪುಗಾರರಲ್ಲಿ ಒಬ್ಬರಾಗಿರುವ ವಿನಯ್​ ಗೌಡ ಅವರಿಗೆ ಕುಮಾರಿ ರಾಖಿ ಕಟ್ಟಿದ್ದರು. ಇದರಿಂದ ಭಾವುಕರಾಗಿರುವ ವಿನಯ್​ ಗೌಡ ಅವರು ಒಂದು ಪೋಸ್ಟ್​ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು, "ಲೋ ಪುಟ್ಟಿ, ನೀನು ಕಟ್ಟಿರುವ ಈ ರಾಖಿ ನಂಗೆ ಸಖತ್‌ ಸ್ಪೆಷಲ್, ತುಂಬಾ ಮೌಲ್ಯದಿಂದ ಕೂಡಿದೆ. ನಾನು ನಿನಗೆ ಪ್ರಾಮಿಸ್ ಮಾಡ್ತೀನಿ, ಉಸಿರು ಇರುವವರೆಗೂ ನಿನ್ನ ರಕ್ಷಣೆಗೆ ನಾನು ಸದಾ ಇರುತ್ತೇನೆ. ಯಾರಿಗೂ ಹೆದರಬೇಡ, ನಿನ್ನ ಹಿಂದೆ ಈ ಅಣ್ಣ ಯಾವಾಗ್ಲೂ ಇರ್ತಾನೆ ಎಂದಿದ್ದಾರೆ. ಜೊತೆಗೆ ಕುಮಾರಿ ಜೊತೆಗಿನ ಫೋಟೋ ಹಂಚಿಕೊಂಡು, ಭಾವುಕ ಮಾತುಗಳನ್ನ ಹೇಳಿದ್ದಾರೆ ವಿನಯ್ ಗೌಡ.

56
5 ಲಕ್ಷದ ಆಫರ್​
Image Credit : Social Media

5 ಲಕ್ಷದ ಆಫರ್​

ಇದೇ ವೇಳೆ, ಅದೃಷ್ಟ ಎನ್ನುವುದು ಹೇಗೆ ಬೇಕಾದರೂ ಬರುತ್ತದೆ ಎನ್ನುವುದಕ್ಕೆ ಕುಮಾರಿ ಸಾಕ್ಷಿಯಾಗಿದ್ದಾರೆ. ಅವರ ಮುಗ್ಧತೆಗೆ ಈಗ ಭರ್ಜರಿ ಆಫರ್​ ಸಿಕ್ಕಿದೆ. ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಗೆ 5 ಲಕ್ಷ ನಗದನ್ನು ಸಹಾಯವಾಗಿ ನೀಡಿದೆ.

66
ಕುಮಾರಿಗೆ ಶಿಕ್ಷಣ
Image Credit : Social Media

ಕುಮಾರಿಗೆ ಶಿಕ್ಷಣ

ಇಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಪೂರ್ಣಗೊಂಡ ಬಳಿಕ ಸಂಸ್ಥೆಯ ವತಿಯಿಂದ ಮತ್ತೊಂದು ದೊಡ್ಡ ಅವಕಾಶವನ್ನೂ ಘೋಷಿಸಲಾಗಿದೆ. ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಸಂಸ್ಥೆಯ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಕುಮಾರಿಗೆ ನೀಡಲಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
 

Latest Videos
Recommended Stories
Recommended image1
Hindu Rules: ಗಂಡ ಮನೆಯಲ್ಲಿ ಇಲ್ಲದಾಗ ಹೆಂಡತಿ ಈ ತಪ್ಪುಗಳನ್ನು ಮಾಡಲೇಬಾರದು, ಏನದು?
Recommended image2
Karna Serial: ಕರ್ಣನಿಗೆ ಹೆತ್ತಮ್ಮ ಸಿಕ್ಕ ಖುಷಿ- ಇನ್ನೊಂದೆಡೆ, ಗಂಡನ ಪತ್ನಿ ಬರುತ್ತಲೇ ಸಂಕಟದಲ್ಲಿ ಮಾಲತಿ
Recommended image3
ಕೈತುಂಬಾ ಕೆಲ್ಸ ಇರುವಾಗ್ಲೇ ಬೆಂಗಳೂರು ತೊರೆದ ನಟಿ ಯಮುನಾ ಶ್ರೀನಿಧಿ! ಫ್ಯಾನ್ಸ್​ ಶಾಕ್​, ಏನಾಯ್ತು ನಟಿಗೆ
Related Stories
Recommended image1
ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​
Recommended image2
Bigg Boss ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ: ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved