MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​

ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​

ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ, ನಟಿ ಸೋನು ಪಾಟೀಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2024ರಲ್ಲಿ ಶ್ರೀವಾಯು ಎಂಬುವವರನ್ನು ಸದ್ದಿಲ್ಲದೆ ಮದುವೆಯಾಗಿದ್ದ ಅವರು, ಇದೀಗ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Sep 02 2026, 03:01 PM IST
Share this Photo Gallery
  • FB
  • TW
  • Linkdin
  • Whatsapp
16
ಮೊದಲ ಮಗುವಿನ ನಿರೀಕ್ಷೆಯಲ್ಲಿ...
Image Credit : Sonu Patil Instagram

ಮೊದಲ ಮಗುವಿನ ನಿರೀಕ್ಷೆಯಲ್ಲಿ...

ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿಯಾಗಿದ್ದ, ನಟಿ ಸೋನು ಪಾಟೀಲ್​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅದ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ನಟಿ, 2024ರಲ್ಲಿ ಶ್ರೀವಾಯು ಎನ್ನುವವರ ಜೊತೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಗಲೂ ಮದುವೆಯಾದ ಬಳಿಕ ಸರ್​ಪ್ರೈಸ್​​ ಮಾಡಿದ್ದ ನಟಿ, ಈಗ ತುಂಬು ಗರ್ಭಿಣಿಯಾಗಿರುವ ಫೋಟೋಶೂಟ್​ ಮತ್ತು ವಿಡಿಯೋಶೂಟ್​ಗಳನ್ನು ಅಪ್​ಲೋಡ್​ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಲವು ಸೀರಿಯಲ್​, ಸಿನಿಮಾಗಳಲ್ಲಿ ನಟನೆ
Image Credit : Sonu Patil Instagram

ಹಲವು ಸೀರಿಯಲ್​, ಸಿನಿಮಾಗಳಲ್ಲಿ ನಟನೆ

‘ಮೊಗ್ಗಿನ ಮನಸ್ಸು’, ‘ಗಾಂಧಾರಿ’, ‘ಅಮೃತವರ್ಷಿಣಿ’ಯಂತಹ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸೋನು ಪಾಟೀಲ್, ‘ಧರ್ಮಸ್ಯ’, ‘ದೋಸ್ತಿ ಗ್ಯಾಂಗ್’ ಮುಂತಾದ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಇದೀಗ ಅವರು ಸೀಮಂತ ಶಾಸ್ತ್ರದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

Related Articles

Related image1
Bigg Boss ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ: ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು
Related image2
Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ
36
ಹಾಸ್ಯ ನಟಿಯಾಗುವ ಕನಸು
Image Credit : our own

ಹಾಸ್ಯ ನಟಿಯಾಗುವ ಕನಸು

ಹಾಸ್ಯ ನಟಿಯಾಗುವ ಕನಸು ಟಿವಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಪಾಟೀಲ್ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ಕಿರುತೆರೆಗೆ ಕಾಲಿಟ್ಟರು. ಹಲವು ಸೀರಿಯಲ್​ಗಳಲ್ಲಿ ನಟಿಸುತ್ತಿರುವಾಗಲೇ ಸಾಧು ಕೋಕಿಲಾ ಜತೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಮೊದಲು ನಟಿಸಿದ ಚಿತ್ರ ‘ಧರ್ಮಸ್ಯ’. ಈ ಚಿತ್ರದಲ್ಲಿ ಸಾಧು ಕೋಕಿಲ ಅವರೊಂದಿಗೆ ಹಾಸ್ಯ ನಟಿಯಾಗಿ ಕಾಣಿಸಿಕೊಂಡ ಮೇಲೆ ಚಿತ್ರೀಕರಣ ಮುಗಿಸಿದ ಕೊನೆಯ ಚಿತ್ರವೇ ಮೊದಲು ಬಿಡುಗಡೆಯಾಗಿದ್ದು ವಿಶೇಷ.

46
ಅಮ್ಮನಿಗೆ ಕಿಚ್ಚನ ನೆರವು
Image Credit : our own

ಅಮ್ಮನಿಗೆ ಕಿಚ್ಚನ ನೆರವು

ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಸೋನು ಪಾಟೀಲ್ ತಾಯಿ ಮಹಾದೇವಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ನ್ಯೂಮೊನಿಯಾ ಆಗಿತ್ತು. ಅದಕ್ಕಾಗಿ ಅವರನ್ನು ಬಾಗಲಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ನೀಡಿದ ನಂತರ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಸುದೀಪ್ ಚಾರಿಟೇಲವ್‌ ಟ್ರಸ್ಟ್‌ ಮೂಲಕ 5 ಲಕ್ಷ ರೂಪಾಯಿ ನೀಡಿ ಸಹಾಯ ಮಾಡಲಾಗಿತ್ತು.

56
ನಟಿಯ ಕುರಿತು
Image Credit : our own

ನಟಿಯ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿ ಮಾಡಿಕೊಂಡು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದವರು ಮುಂದೆ ಸಿನಿಮಾ ನಟಿ ಆದವರು. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಲೇ ಈಗ ತಮಿಳಿನ ಪ್ರಸಿದ್ಧ ರಿಯಾಲಿಟಿ ಷೋನ ಸ್ಪರ್ಧಿಯೂ ಆಗಿದ್ದಾರೆ.

66
ತಮಿಳು ರಿಯಾಲಿಟಿ ಷೋನಲ್ಲಿ ಸೋನು
Image Credit : our own

ತಮಿಳು ರಿಯಾಲಿಟಿ ಷೋನಲ್ಲಿ ಸೋನು

ಕನ್ನಡದ ಕಿರುತೆರೆಯಲ್ಲಿ ‘ಪ್ಯಾಟೇ ಹುಡ್ಗೀರ ಹಳ್ಳಿ ಲೈಫು’ ರೀತಿಯಲ್ಲೇ ತಮಿಳಿನಲ್ಲಿ ‘ಒರು ನಾಳ್ ಗ್ರಾಮತ್ತಿಲ್’ ಎನ್ನುವ ರಿಯಾಲಿಟಿ ಷೋ ಬಂದಿತ್ತು. ಇದರಲ್ಲಿ ಸಿನಿಮಾ ಹಾಗೂ ಕಿರುತೆರೆ ನಟ, ನಟಿಯರೇ ಸ್ಪರ್ಧಿಗಳು. ಇಂಥ ಶೋನಲ್ಲಿ ಸೋನು ಪಾಟೀಲ್ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಂಬಂಧಗಳು
ತಾಯ್ತನ
ಬಿಗ್ ಬಾಸ್ ಕನ್ನಡ
ಟಿವಿ ಶೋ
ತಾಯಿ
 

Latest Videos
Recommended Stories
Recommended image1
ವಿಜಯ್-ರಶ್ಮಿಕಾ ಅಲ್ಲ… ಕಿಶನ್ -ರಾಶಿಕಾ ‘ರಣಬಾಲಿ’ ಲುಕ್‌ಗೆ ಫ್ಯಾನ್ಸ್ ಫಿದಾ! ಹೇಗಿದೆ ನೋಡಿ
Recommended image2
Rashmika Deverakonda: ರಶ್ಮಿಕಾ ಮಂದಣ್ಣ ಇನ್ಮುಂದೆ ಅಧಿಕೃತವಾಗಿ 'ರಶ್ಮಿಕಾ ದೇವರಕೊಂಡ'..? ಇಲ್ನೋಡಿ.. 'ಅನ್ನಪೂರ್ಣೆ'ಯಾದ ಬಳಿಕ ಈ ಚೇಂಜ್!
Recommended image3
ANNAPURNA: ಕನ್ನಡತಿ, ತೆಲುಗುನಾಡಿನ ಸೊಸೆ ರಶ್ಮಿಕಾ ಮಂದಣ್ಣ ಈಗ ನಾಲ್ಕುನೂರು ಮನೆಗಳಲ್ಲಿ 'ಅನ್ನಪೂರ್ಣ'
Related Stories
Recommended image1
Bigg Boss ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ: ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು
Recommended image2
Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved