- Home
- Entertainment
- ನಟಿ ಕೃಷಿ ತಾಪಂಡ ಮತ್ತೊಬ್ಬ ಆತ್ಮೀಯರ ಅಗಲಿಕೆ; ಗೆಳೆಯನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್, ಭಾವುಕ ಪೋಸ್ಟ್!
ನಟಿ ಕೃಷಿ ತಾಪಂಡ ಮತ್ತೊಬ್ಬ ಆತ್ಮೀಯರ ಅಗಲಿಕೆ; ಗೆಳೆಯನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್, ಭಾವುಕ ಪೋಸ್ಟ್!
ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಆಪ್ತ ಸ್ನೇಹಿತೆ ಹಾಗೂ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ ಹಠಾತ್ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಗೆಳೆಯನ ಸಾವಿನಿಂದ ನೊಂದಿದ್ದ ನಟಿಗೆ ಇದು ಮತ್ತೊಂದು ದೊಡ್ಡ ಆಘಾತ ನೀಡಿದೆ. ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಅವರಿಗೂ ಪಲ್ಲವಿ ಆಸರೆಯಾಗಿದ್ದರು.

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಜೀವನದಲ್ಲಿ ಮತ್ತೊಬ್ಬ ಆಪ್ತ ವ್ಯಕ್ತಿಯ ಹಠಾತ್ ಅಗಲಿಕೆ ದೊಡ್ಡ ಆಘಾತ ತಂದಿದೆ. 'ಬಿಗ್ ಬಾಸ್' ಖ್ಯಾತಿಯ ಮಲ್ಲಮ್ಮ ಅವರ ಬದುಕಿಗೆ ಆಸರೆಯಾಗಿದ್ದ, 'ರಿಷಿ ಡಿಸೈನ್' ಸಂಸ್ಥೆಯ ಸಂಸ್ಥಾಪಕಿ ಹಾಗೂ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ ಅವರು ನಿಧನರಾಗಿದ್ದಾರೆ. ಪಲ್ಲವಿ ಅವರ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ನಟಿ ಕೃಷಿ ತಾಪಂಡ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದ್ದಾರೆ.
ಕೆಲ ತಿಂಗಳ ಹಿಂದೆ ಕೃಷಿ ತಾಪಂಡ ಅವರ ನಿವಾಸದಲ್ಲಿ ಆಪ್ತ ಗೆಳೆಯ ವೈಶಾಕ್ ಸಾವಿನ ಘಟನೆಯಿಂದ ನಟಿ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದರು. ಆ ದುಃಖದಿಂದ ಕಷ್ಟಪಟ್ಟು ಹೊರಬರುತ್ತಿರುವ ಬೆನ್ನಲ್ಲೇ, ಈಗ ತಮ್ಮ ಆಪ್ತ ಸ್ನೇಹಿತೆ ಪಲ್ಲವಿ ಅವರನ್ನು ಕಳೆದುಕೊಂಡಿರುವುದು ನಟಿಗೆ ಮತ್ತೊಮ್ಮೆ ಬರಸಿಡಿಲು ಎರಚಿದಂತಾಗಿದೆ.
ಪಲ್ಲವಿ ಅಗಲಿಕೆಗೆ ಕೃಷಿ ತಾಪಂಡ ಭಾವುಕ ನುಡಿಗಳು:
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಲ್ಲವಿ ಜತೆಗಿನ ಒಡನಾಟ ನೆನೆದು ಕಣ್ಣೀರಿಟ್ಟಿರುವ ಕೃಷಿ ತಾಪಂಡ, 'ಕಳೆದ ಒಂದು ವರ್ಷದಿಂದ ನೀನು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಮ್ಮ ನಗು, ಮಾತುಗಳು ಮತ್ತು ನೆನಪುಗಳನ್ನು ನಾನು ಸದಾ ಸ್ಮರಿಸುತ್ತೇನೆ. ನೀನು ನನಗಾಗಿ ಡಿಸೈನ್ ಮಾಡಿದ ಪ್ರತಿಯೊಂದು ಉಡುಪೂ ನನಗೆ ಅತ್ಯಂತ ವಿಶೇಷ. ಪಲ್ಲು, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜತೆ ಮತ್ತೊಮ್ಮೆ ಮಾತನಾಡಲು, ನಗಲು ಹಾಗೂ ಅಪ್ಪಿಕೊಳ್ಳಲು ಬಯಸುತ್ತೇನೆ. ಕೆಲವು ವಿದಾಯಗಳು ಅಷ್ಟು ಬೇಗ ಬಂದುಬಿಡುತ್ತವೆ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮಲ್ಲಮ್ಮನ ಪಾಲಿಗೆ ದಾರಿದೀಪವಾಗಿದ್ದ ಪಲ್ಲವಿ:
ಉತ್ತರ ಕರ್ನಾಟಕ ಮೂಲದ ಮಲ್ಲಮ್ಮ ಅವರನ್ನು ಬೆಂಗಳೂರಿಗೆ ಕರೆಸಿ, ತಮ್ಮ 'ರಿಷಿ ಡಿಸೈನ್' ಬೋಟಿಕ್‌ನಲ್ಲಿ ಆಶ್ರಯ ಹಾಗೂ ಕೆಲಸ ನೀಡಿ, 'ಬಿಗ್ ಬಾಸ್ ಕನ್ನಡ ಸೀಸನ್ 12'ರ ವೇದಿಕೆವರೆಗೆ ತಲುಪಿಸುವಲ್ಲಿ ಪಲ್ಲವಿ ಪ್ರಮುಖ ಪಾತ್ರ ವಹಿಸಿದ್ದರು. ಮಲ್ಲಮ್ಮ ಅವರನ್ನು ತಮ್ಮ ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಿದ್ದ ಪಲ್ಲವಿ ಅವರ ಅಕಾಲಿಕ ಮರಣ ಕಿರುತೆರೆ ಮತ್ತು ಸ್ಯಾಂಡಲ್‌ವುಡ್ ಲೋಕದಲ್ಲಿ ತೀವ್ರ ಶೋಕಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
