ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ಹೊಸ ಪಾತ್ರಗಳ ಟೀಸರ್ ಬಿಡುಗಡೆಯಾಗುತ್ತಿವೆ. ನಟಿ ವಿದ್ಯಾ ಬಾಲನ್ ಅವರು 'ಕಾಂತಾ' ಎಂಬ ನಿಗೂಢ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟೈಗರ್ ಮುತ್ತುವೇಲ್ ಪಾಂಡಿಯನ್ ಎದುರು ಅಬ್ಬರಿಸಲಿದ್ದಾರೆ.ಯಾವಾಗ ಬಿಡುಗಡೆ?

Jailer 2: ರಜನಿಕಾಂತ್ ಅಭಿನಯದ ಜೈಲರ್ ಚಿತ್ರವು ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ವರದಿಯೊಂದರ ಪ್ರಕಾರ ವಿಶ್ವದಾದ್ಯಂತ 605 ರಿಂದ 650 ಕೋಟಿ ರೂ.ಗಳ ನಡುವೆ ಗಳಿಸಿತು. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಕಾಲಿವುಡ್‌ನ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಯಿತು.

ಮೊದಲ ಭಾಗದ ಯಶಸ್ಸಿನ ನಂತರ ಇದೀಗ ಜೈಲರ್ 2 ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ‘ಜೈಲರ್ 2’ ಸಿನಿಮಾದ ಹೊಸ ಪಾತ್ರಗಳ ಟೀಸರ್ ರಿವೀಲ್ ಆಗಿದ್ದು, ರಜನಿ ಫ್ಯಾನ್ಸ್‌ಗೆ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಟೈಗರ್ ಪಾತ್ರದಲ್ಲಿ ಗರ್ಜಿಸಲಿದ್ದಾರೆ ರಜನಿಕಾಂತ್

ರಜನಿಕಾಂತ್ ಅವರು ಬಹುನಿರೀಕ್ಷಿತ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲು ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ನಡುವೆ ಸನ್ ಪಿಕ್ಚರ್ಸ್‌, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿರುವ ಒಂದೊಂದಾಗಿ ವಿಭಿನ್ನ ಹಾಗೂ ನಿಗೂಢ ಪಾತ್ರಗಳ ಟೀಸರ್ ಬಿಡುಗಡೆ ಮೂಲಕ ಪ್ರೇಕ್ಷಕರಿಗೆ ಪರಿಚಯಿಸುತ್ತಿದೆ. ಇದೀಗ ವಿದ್ಯಾ ಬಾಲನ್ ಅವರ ಪಾತ್ರ ರಿವೀಲ್ ಆಗಿದ್ದು, ಸಿನಿಮಾದಲ್ಲಿ ಹಿಂದೆಂದೂ ನೋಡಿರದಂತಹ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Jailer 2 ಖಡಕ್ ಖಳ ನಾಯಕಿ ಕಾಂತಾ ಪಾತ್ರದಲ್ಲಿ ವಿದ್ಯಾ ಬಾಲನ್

ಸನ್ ಪಿಕ್ಚರ್ಸ್‌ ಇದೀಗ ‘ಜೈಲರ್ 2’ ಸಿನಿಮಾದಲ್ಲಿ ಕಾಂತ ಆಗಿ ಖಡಕ್ ಖಳನಾಯಕಿ ಆಗಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದಾರೆ.

ಪಾತ್ರ ಪರಿಚಯದ ಟೀಸರ್‌ನಲ್ಲಿ ವಿದ್ಯಾ ಬಾಲನ್ ಕಪ್ಪು ಮತ್ತು ನೀಲಿ ಬಣ್ಣದ ಸೀರೆಯಲ್ಲಿ ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ವಿದ್ಯಾ ಬಾಲನ್ ಕೈಯಲ್ಲಿ ಸಿಗರೇಟು ಕೂಡ ಇದೆ. ಮೆಟ್ಟಿಲಿನಿಂದ ಇಳಿದು ಬರುವುದು, ಸಿಗರೇಟು ಸೇದುತ್ತಾ ಕೋಪಗೊಳ್ಳುವ ಮುಖಭಾವ ನೋಡಿದರೆ ಜೈಲರ್ 2 ನಲ್ಲಿ ಅವರ ಪಾತ್ರ ಹಿಂದೆಂದೂ ನೋಡಿರದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಹೌದು. ಕಾಂತಾ ಪಾತ್ರದ ಬಗ್ಗೆ ಹೆಚ್ಚೇನೂ ಟೀಸರ್‌ನಲ್ಲಿ ಬಹಿರಂಗಪಡಿಸಿಲ್ಲ. ಆದರೆ ಟೀಸರ್‌ ನೋಡಿದರೆ ಕಾಂತಾ ನಿಗೂಢ ಚಿತ್ರದ ರಜನಿಗೆ ಮುಖ್ಯ ಎದುರಾಳಿಯಾಗಿ ಅಬ್ಬರಿಸಲಿದ್ದಾರಾ? ಎಂಬ ಕುತೂಹಲ ಮೂಡಿಸಿದೆ. ಏಕೆಂದರೆ ಟೀಸರ್‌ನಲ್ಲಿ ಅವರ ಲುಕ್ ಇತ್ತೀಚಿನ ಸಿನಿಮಾಗಳಲ್ಲಿ ಅವರು ನಿರ್ವಹಿಸಿರುವ ಪಾತ್ರಗಳಿಗಿಂತ ಸಂಪೂರ್ಣ ಬೇರೆಯೇ ಆಗಿದೆ.

Jailer 2ನಲ್ಲಿ ಇಲ್ಲಿವರೆಗೆ ಪರಿಚಯಿಸಿದ ಪಾತ್ರಗಳು

ವಿದ್ಯಾ ಬಾಲನ್ ಅವರ ಕಾಂತಾ ಪಾತ್ರವು ‘ಜೈಲರ್ 2’ ಸಿನಿಮಾದ ಪಾತ್ರ ಪರಿಚಯ ಟೀಸರ್‌ನ ಲೇಟೆಸ್ಟ್ ಅಪ್ಡೇಟ್ ಆಗಿದೆ. ಆದರೆ ಇದಕ್ಕೂ ಮುನ್ನ ಸೆಪ್ಟೆಂಬರ್ 18ರಿಂದ ಸಿನಿಮಾದ ಹೊಸ ಪಾತ್ರಗಳನ್ನು ಚಿತ್ರತಂಡ ಪರಿಚಯಿಸಲು ಆಗಾಗ ಟೀಸರ್ ಬಿಡುತ್ತಿದೆ.

ಸೂರಜ್ ವೆಂಜಾರಮೂಡುರ್ – ದಿಲೀಪ್

ಮೊದಲ ಟೀಸರ್‌ನಲ್ಲಿ ಮಲಯಾಳಂ ನಟ ಸೂರಜ್ ವೆಂಜಾರಮೂಡುರ್ ಅವರನ್ನು ದಿಲೀಪ್ ಪಾತ್ರದಲ್ಲಿ ಪರಿಚಯಿಸಲಾಗಿತ್ತು. ಟೀಸರ್‌ನಲ್ಲಿ ನಟ ಕತ್ತಲೆ ನಡುವೆ ಗಂಭೀರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ದಿಲೀಪ್‌ ಒಬ್ಬ ನಿಗೂಢ ಗ್ಯಾಂಗ್‌ಸ್ಟರ್ ಎಂದು ಪರಿಚಯಿಸಲಾಗಿದೆ. ಈ ಚಿಕ್ಕ ಝಲಕ್‌ನಲ್ಲಿ ದಿಲೀಪ್ ಮತ್ತು ಅವರ ಗ್ಯಾಂಗ್‌ ಮುಖಾಮುಖಿಗೆ ಸಿದ್ಧತೆ ನಡೆಸುತ್ತಿರುವುದು ಕಾಣಿಸಿತ್ತು. ಅವರ ವಾಯ್ಸ್‌ಓವರ್ ಮೂಲಕ ಪಾತ್ರದ ಉದ್ದೇಶದ ಸುಳಿವು ನೀಡಲಾಗಿತ್ತು.

ಎಸ್‌ಜೆ ಸೂರ್ಯ – ಬೋಧಿ ಕಲ್ಪಕ್

ನಂತರ ಮತ್ತೊಂದು ಟೀಸರ್‌ನಲ್ಲಿ ಎಸ್‌ಜೆ ಸೂರ್ಯ ಅವರನ್ನು ಬೋಧಿ ಕಲ್ಪಕ್ ಪಾತ್ರದಲ್ಲಿ ಪರಿಚಯಿಸಲಾಯಿತು. ಇದು ಕೂಡ ನಿಗೂಢ ರೀತಿಯಲ್ಲೇ ಕಾಣಿಸಿತು. ಕಥೆಯಲ್ಲಿ ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ, ಸ್ಟೈಲಿಶ್ ಲುಕ್‌ ಅನ್ನು ಮಾತ್ರ ಪ್ರೇಕ್ಷಕರಿಗೆ ತೋರಿಸಲಾಗಿತ್ತು.

ವಿದ್ಯಾ ಬಾಲನ್ – ಕಾಂತಾ

ಇದೀಗ ಸದ್ದು ಮಾಡುತ್ತಿರುವ ಟೀಸರ್‌ನಲ್ಲಿ ವಿದ್ಯಾ ಬಾಲನ್ ಅವರನ್ನು ಕಾಂತಾ ಪಾತ್ರದಲ್ಲಿ ಪರಿಚಯಿಸಲಾಗಿದೆ. ಈ ಪಾತ್ರದಲ್ಲಿ ಅವರು ವಿಭಿನ್ನ ಹಾಗೂ ಗಮನ ಸೆಳೆಯುವ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಖಳನಾಯಕಿ ಪಾತ್ರ ನಿರ್ವಹಿಸುತ್ತಿರುವಂತೆ ಕಂಡುಬರುತ್ತದೆ.

Jailer 2 ಚಿತ್ರದ ತಾರಾಗಣದಲ್ಲಿ ಯಾರಿದ್ದಾರೆ?

Scroll to load tweet…

ರಜನಿಕಾಂತ್ ಜೊತೆಗೆ ಇತ್ತೀಚೆಗೆ ಪರಿಚಯವಾದ ವಿದ್ಯಾ ಬಾಲನ್, ಎಸ್‌ಜೆ ಸೂರ್ಯ ಮತ್ತು ಸೂರಜ್ ವೆಂಜಾರಮೂಡುರ್ ಸೇರಿದಂತೆ ‘ಜೈಲರ್ 2’ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ.

ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಸೇರಿದಂತೆ ‘ಜೈಲರ್’ ಸಿನಿಮಾದ ಲೋಕಕ್ಕೆ ಸಂಬಂಧಿಸಿದ ಹಲವು ಪ್ರಮುಖ ನಟರು ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಮಿಥುನ್ ಚಕ್ರವರ್ತಿ, ಜತಿನ್ ಸರ್ನಾ ಸೇರಿದಂತೆ ಇನ್ನೂ ಹಲವು ನಟರು ಸಿನಿಮಾದ ಭಾಗವಾಗಿದ್ದಾರೆ.

ರಜನಿಕಾಂತ್ ಅವರು ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್, ಅಂದರೆ ಜನಪ್ರಿಯ ‘ಟೈಗರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ಅವರೇ ‘ಜೈಲರ್ 2’ ಸಿನಿಮಾದ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶಕರಾಗಿ ಮತ್ತೆ ತಂಡಕ್ಕೆ ಮರಳಿದ್ದಾರೆ.

Jailer 2 ಬಿಡುಗಡೆ ಯಾವಾಗ?

‘ಜೈಲರ್ 2’ ಸಿನಿಮಾದ ವಿಶ್ವಾದ್ಯಂತ ಥಿಯೇಟರ್‌ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ 2026ರ ಅಕ್ಟೋಬರ್ 15 ಎಂದು ನಿಗದಿಪಡಿಸಿದೆ.