ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!

ಸಲ್ಮಾನ್ ಖಾನ್ ಪ್ರಕರಣ ಮತ್ತು ಲಾರೆನ್ಸ್ ಬಿಷ್ಣೋಯ್ ವಿವಾದವನ್ನ ಇಟ್ಟುಕೊಂಡು ನಿರ್ಮಾಪಕ ಅಮಿತ್ ಜಾನಿ 'ಕಾಲಾ ಹಿರನ್' ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಬಾಲಿವುಡ್‌ನಲ್ಲಿ ಹಲ್ ಚಲ್ ಎಬ್ಬಿಸಿದೆ.

Share this Video
  • FB
  • Linkdin
  • Whatsapp

ಬಾಲಿವುಡ್‌ನ 'ಸುಲ್ತಾನ್' ಸಲ್ಮಾನ್ ಖಾನ್‌ಗೆ (Salman Khan) ಸದ್ಯ ಟೈಮೇ ಚೆನ್ನಾಗಿಲ್ಲ. ಒಂದೆಡೆ ಬಿಷ್ಣೋಯ್ ಗ್ಯಾಂಗ್‌ನಿಂದ ನಿರಂತರ ಬೆದರಿಕೆಗಳು ಬರುತ್ತಿದ್ದರೆ, ಮತ್ತೊಂದೆಡೆ ಅದೇ ವಿಚಾರ ಇಟ್ಟುಕೊಂಡು ಸಲ್ಮಾನ್ ಖಾನ್ ಇಮೇಜ್‌ಗೆ ಧಕ್ಕೆ ತರಲು ಹೊಸ ಸಿನಿಮಾವೊಂದು ಸಜ್ಜಾಗಿದೆ. ಹೌದು.. ಅದರ ಹೆಸರೇ 'ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ'! ಈ ಚಿತ್ರದ ವಿರುದ್ಧ ಈಗ ಸ್ವತಃ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಿನಿಮಾ ಬ್ಯಾನ್ ಮಾಡಿ ಅಂತ ಅರ್ಜಿ ಸಲ್ಲಿಸಿದ್ದಾರೆ. ಏನಿದು ಹೊಸ ವಿವಾದ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್ ಭಾಯ್‌ಜಾನ್‌ಗೆ ಹೊಸ ಟೆನ್ಷನ್..! 
1998ರ ಕೃಷ್ಣಮೃಗ ಬೇಟೆ ಪ್ರಕರಣ ಸಲ್ಮಾನ್ ಖಾನ್ ಜೀವನದ ಅತ್ಯಂತ ಕರಾಳ ಅಧ್ಯಾಯ. ಈ ಕೇಸ್​ನಲ್ಲಿ ಸಲ್ಮಾನ್ ಜೈಲು ಸೇರಿದ್ರು. ಈಗಲೂ ಈ ಕೇಸಿನ ವಿಚಾರಣೆ ನಡೀತಾನೇ ಇದೆ. ಅದರ ನಡುವೆ ಬಿಷ್ಣೋಯ್ ಸಮುದಾಯದ ಡಾನ್ ಲಾರೆನ್ಸ್ ಬಿಷ್ಣೋಯ್, ಕೃಷ್ಣ ಮೃಗವನ್ನ ಕೊಂದಂತೆ ಸಲ್ಮಾನ್ ಖಾನ್ ಅವ್ರನ್ನೂ ಕೊಲ್ತಿನಿ ಅಂತ ಬೆನ್ನುಬಿದ್ದಿದ್ದಾನೆ. ಸೋ ಸಲ್ಮಾನ್ ಜೀವಭಯದಲ್ಲಿ ಟೈಟ್ ಸೆಕ್ಯೂರಿಟಿ ನಡುವೆ ಓಡಾಡ್ತಾ ಇರೋ ಮ್ಯಾಟರ್ ಗೊತ್ತೇ ಇದೆ.

ಈಗ ಇದೇ ಪ್ರಕರಣ ಮತ್ತು ಲಾರೆನ್ಸ್ ಬಿಷ್ಣೋಯ್ ವಿವಾದವನ್ನ ಇಟ್ಟುಕೊಂಡು ನಿರ್ಮಾಪಕ ಅಮಿತ್ ಜಾನಿ 'ಕಾಲಾ ಹಿರನ್' ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಬಾಲಿವುಡ್‌ನಲ್ಲಿ ಹಲ್ ಚಲ್ ಎಬ್ಬಿಸಿದೆ. ಈ ಸಿನಿಮಾದ ವಿರುದ್ಧ ಇದೀಗ ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

Related Video