ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!

ಸಿನಿಮಾ ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟಕ್ಕೆ ಸಾಕಾಗಿ ಹೋಗಿದೆ. ಸಿಕ್ಕ ಸಿಕ್ಕಲ್ಲಿ ಮೊಬೈಲ್​ ಆನ್ ಮಾಡಿಕೊಂಡು ಮನಸೋ ಇಚ್ಚೆ ನಟ ನಟಿಯರ ವಿಡಿಯೋ ಚಿತ್ರೀಕರಿಸಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಕಿರಿ ಕಿರಿ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಸಿನಿಮಾ ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟಕ್ಕೆ ಸಾಕಾಗಿ ಹೋಗಿದೆ. ಸಿಕ್ಕ ಸಿಕ್ಕಲ್ಲಿ ಮೊಬೈಲ್​ ಆನ್ ಮಾಡಿಕೊಂಡು ಮನಸೋ ಇಚ್ಚೆ ನಟ ನಟಿಯರ ವಿಡಿಯೋ ಚಿತ್ರೀಕರಿಸಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಕಿರಿ ಕಿರಿ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಕನ್ನಡದ ನಟಿ ಸಪ್ತಮಿ ಗೌಡ ಸಿಕ್ಕಾಪಟ್ಟೆ ಸಿಟ್ಟಾಗಿದ್ದು, ದೊಡ್ಡ ವಿವಾದ ಆಗಿತ್ತು. ಇದೀಗ ಬಾಲಿವುಡ್​ ನಟ ರಣಬೀರ್​ ಕಪೂರ್​​ ಕೆಂಡಕಾರಿದ್ದಾರೆ. ಈಗೀಗ ಈ ಸಿನಿಮಾ ನಟ ನಟಿಯರಿಗೆ ಹೊರ ಪ್ರಪಂಚಕ್ಕೆ ಹೊರಳೋದೇ ದೊಡ್ಡ ಸಂಕಷ್ಟ ಆಗಿದೆ. ಮನೆಯಿಂದ ಆಚೆ ಕಾಲಿಟ್ರೆ ಸಾಕು ರಾಶಿ ರಾಶಿ ಮೊಬೈಲ್​ ಕ್ಯಾಮೆರಾಗಳು ಸುತ್ತುವರೆಯುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದ ಸಿಕ್ಕಾಪಟ್ಟೆ ಕಿರಿ ಕಿರಿ ಆಗ್ತಿರೋ ನಟ ನಟಿಯರು ಮನಸ್ಸಿಗೆ ಬಂದಂತೆ ಬೈಯುತ್ತಿದ್ದಾರೆ. ಇದೀಗ ಬಾಲಿವುಡ್ ನಟ ರಣವೀರ್​ ಕಪೂರ್ ಕೂಡ ಅದೇ ಕೆಲಸ ಮಾಡಿದ್ದು. ಹೌದು, ಸಧ್ಯ ಬಾಲಿವುಡ್​​ನಲ್ಲಿ ರಾಮಾಯಣ ಸಿನಿಮಾ ಮಾಡುತ್ತಿರೋ ರಾಮ ರಣಬೀರ್​ ಕಪೂರ್​ ತನ್ನ ಕುಟುಂಬ ಕರೆದುಕೊಂಡು ಔಟಿಂಗ್ ಹೋಗಿದ್ದಾರೆ. ಆದ್ರೆ ಅಲ್ಲಿ ರಣಬೀರ್​​ ಪತ್ನಿ ಅಲಿಯಾರನ್ನ ಸುತ್ತುವರೆದಿದ್ದು, ಅಭಿಮಾನಿಗಳಲ್ಲ.. ಬದಲಾಗಿ ಹೆಂಗೆ ಬೇಕೋ ಹಂಗೆ ವೀಡಿಯೋ ಚಿತ್ರಿಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡೋ ಪಾಪರಾಜಿಗಳು. ಇವರನ್ನ ನೋಡುತ್ತಿದ್ದಂತೆ ಸಿಟ್ಟಿಗೆದ್ದ ರಣಬೀರ್​​ ಸರಿಯಾಗೆ ಆವಾಜ್ ಹಾಕಿದ್ದಾರೆ.

ಆ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಈ ಪಾಪರಾಜಿ ಸಂಸ್ಕೃತಿ ಕನ್ನಡ ಚಿತ್ರರಂಗದಲ್ಲು ಅಗಾಧವಾಗಿ ಬೇರು ಬಿಡುತ್ತಿದೆ. ಇದರಿಂದ ಕನ್ನಡದ ಹಲವು ನಟಿಯರು ಕಿರಿಕಿರಿ ಅನುಭವಿಸಿದ್ದಾರೆ. ಇದರ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕೂಡ ಬೇಸರಗೊಂಡಿದ್ರು. ಪಾಪರಾಜಿಗಳಿಂದ ನಮ್ಮ ಗೌರವ ಹಾಳಾಗುತ್ತಿದೆ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ರು. ಆದ್ರೆ ಅವರ ಹಾವಳಿ ಮಾತ್ರ ಕಡಿಮೆ ಆಗಿಲ್ಲ. ಇನ್ನು ಬಾಲಿವುಡ್​ ಸ್ಟಾರ್ಸ್​ ವಿಚಾರಕ್ಕೆ ಬಂದ್ರೆ ಈ ಜೂಮ್ ಹಾಕೋರ ಕಾಟ ತಪ್ಪಿದ್ದಲ್ಲ.. ತಪ್ಪೋದು ಇಲ್ಲ ಅನ್ನೋದು ನಿಜ.

Related Video