6 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ

ಸಿನಿಲೋಕದಲ್ಲಿ ಧುರಂಧರ್ ಮ್ಯಾಜಿಕ್ ಮುಂದುವರೆದಿದೆ. ಸದ್ಯ ಎಲ್ಲಿ ನೋಡಿದ್ರೂ ಧುರಂಧರ್-2 ಹವಾ. ಇಡೀ ಸಿನಿರಂಗದಲ್ಲಿ ಒನ್ ಅಂಡ್ ಓನ್ಲಿ ಧುರಂಧರ್​ದೇ ಚರ್ಚೆ. ಕಳೆದ ವಾರಾಂತ್ಯ ತೆರೆಗೆ ಬಂದ ಧುರಂಧರ್-2, 6 ದಿನಗಳಲ್ಲೇ 800 ಕೋಟಿ ಕ್ಲಬ್ ಸೇರ್ಪಡೆಯಾಗಿದೆ. ದಿನದಿನಕ್ಕೂ ಗಳಿಕೆ ಜಾಸ್ತಿಯಾಗುತ್ತಿದೆ.

Share this Video
  • FB
  • Linkdin
  • Whatsapp

ಧುರಂಧರ್ 4 ಗಂಟೆ ಸೀಕ್ರೆಟ್
ಸದ್ಯ ಸಿನಿ ಇಂಡಸ್ಟ್ರಿಯಲ್ಲಿ ಒನ್ ಅಂಡ್ ಓನ್ಲಿ ಧುರಂಧರ್ ಸಿನಿಮಾದ್ದೆ ಹವಾ. ಧುರಂಧರ್ 2 ಸಿನಿಮಾ ಆರೇ ದಿನಗಳಲ್ಲಿ 800 ಕೋಟಿ ಕ್ಲಬ್ ಸೇರಿದೆ. ಎಲ್ಲರೂ ಧುರಂಧರ್ ನ ಬಾಕ್ಸಾಫೀಸ್ ಕಾ ಬಾಪ್ ಅಂತ ಕೊಂಡಾಡ್ತಾ ಇದ್ದಾರೆ. ಬರೊಬ್ಬರಿ 4 ಗಂಟೆಯ ಅವಧಿಯ ಈ ಸಿನಿಮಾವನ್ನ ಜನ ಮುಗಿಬಿದ್ದು ನೋಡ್ತಾ ಇದ್ದಾರೆ. ಅಷ್ಟಕ್ಕೂ ಈ ಸಿನಿಮಾ ಇಷ್ಟುದ್ದ ಆಗಿದ್ದರ ಹಿಂದಿನ ಸೀಕ್ರೆಟ್ ಏನು ಗೊತ್ತಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

6 ದಿನ.. 800 ಕೋಟಿ ಕ್ಲಬ್.. ಧುರಂಧರ್ ಮ್ಯಾಜಿಕ್
ಯೆಸ್ ಸಿನಿಲೋಕದಲ್ಲಿ ಧುರಂಧರ್ ಮ್ಯಾಜಿಕ್ ಮುಂದುವರೆದಿದೆ. ಸದ್ಯ ಎಲ್ಲಿ ನೋಡಿದ್ರೂ ಧುರಂಧರ್-2 ಹವಾ. ಇಡೀ ಸಿನಿರಂಗದಲ್ಲಿ ಒನ್ ಅಂಡ್ ಓನ್ಲಿ ಧುರಂಧರ್​ದೇ ಚರ್ಚೆ. ಕಳೆದ ವಾರಾಂತ್ಯ ತೆರೆಗೆ ಬಂದ ಧುರಂಧರ್-2, 6 ದಿನಗಳಲ್ಲೇ 800 ಕೋಟಿ ಕ್ಲಬ್ ಸೇರ್ಪಡೆಯಾಗಿದೆ.

ಬರೊಬ್ಬರಿ 4 ಗಂಟೆಗಳ ಸುಧೀರ್ಘ ಅವಧಿಯ ಈ ಸಿನಿಮಾವನ್ನ ಜನ ಮುಗಿಬಿದ್ದು ನೋಡ್ತಾ ಇದ್ದಾರೆ. ಬಾಕ್ಸಾಫೀಸ್​ನಲ್ಲಿ ಹಣದ ಹೊಳೆ ಹರೀತಾ ಇದೆ. ಜನ ಸಾಮಾನ್ಯರು ಹಲವು ಸಿನಿತಾರೆಯರು ಕೂಡ ಸಿನಿಮಾವನ್ನ ಮನಸಾರೆ ಮೆಚ್ಚಿಕೊಂಡಿದ್ದಾರೆ.

ಧುರಂಧರ್ ಬಾಕ್ಸಾಫೀಸ್ ಕಾ ಬಾಪ್ ಎಂದ ತಲೈವಾ
ರಾಮ್ ಗೋಪಾಲ್ ವರ್ಮಾ, ರಾಜಮೌಳಿ, ಅಲ್ಲು ಅರ್ಜುನ್, ರಾಮ್​ಚರಣ್ ಮಹೇಶ್ ಬಾಬು, ನಮ್ಮ ರಿಷಬ್ ಶೆಟ್ಟಿ ಸೇರಿದಂತೆ ಸಿನಿಲೋಕದ ದಿಗ್ಗಜರು ಧುರಂಧರ್ ಮೂವಿನ ಕೊಂಡಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಧುರಂಧರ್ ಮೂವಿ ನೋಡಿ ಸೋಷಿಯಲ್ ಮಿಡಿಯಾದಲ್ಲಿ ಕೊಂಡಾಡಿದ್ದಾರೆ.

ಸುದೀರ್ಘ ಅವಧಿಯ ಸಿನಿಮಾ.. ಆದ್ರೂ ಮೆಚ್ಚಿದ ಜನ..!
ಹೌದು, ಧುರಂಧರ್ ಸಿನಿಮಾದ ರನ್ ಟೈಂ ಬರೊಬ್ಬರಿ 3 ಗಂಟೆ 49 ನಿಮಿಷ. ಇಂಟರ್ ವಲ್ ಅವಧಿ ಸೇರಿದ್ರೆ 4 ಗಂಟೆಗೂ ಹೆಚ್ಚು ಸಮಯ ಆಗತ್ತೆ. ಅಷ್ಟಾದ್ರೂ ಈ ಚಿತ್ರದ ಒಂದೊಂದು ಸೀನ್​ನ ಎಂಜಾಯ್ ಮಾಡ್ತಾ ನೋಡ್ತಾ ಇದ್ದಾರೆ.

ಕೆಲವೇ ನಿಮಿಷಗಳ ರೀಲ್ಸ್ ನ ಇಷ್ಟವಾಗದಿದ್ರೆ ಸೆಕೆಂಡ್​ಗಳಲ್ಲಿ ಬದಲಿಸೋ ಈ ಕಾಲದಲ್ಲಿ ಇಷ್ಟು ದೀರ್ಘಾವಧಿಯ ಸಿನಿಮಾವನ್ನ ಜನ ಮುಗಿಬಿದ್ದು ನೋಡ್ತಾ ಇದ್ದಾರೆ. ಇದು ನಿಜಕ್ಕೂ ಚಿತ್ರರಂಗವನ್ನ ಅಚ್ಚರಿಯಲ್ಲಿ ಮುಳುಗಿಸಿದೆ.

ಅಸಲಿಗೆ ಈ ಸಿನಿಮಾದ ಅವಧಿ ಇಷ್ಟು ದೊಡ್ಡದಾಗಿದ್ದು ಯಾಕೆ ಗೊತ್ತಾ,,? ನಿರ್ದೇಶಕ ಆಧಿತ್ಯ ಧರ್ ಹೇಳುವಂತೆ ಇದಕ್ಕಾಗಿ ಒಂದು ಪರ್ಫೆಕ್ಟ್ ಸ್ಕ್ರಿಪ್ಟ್ ಮಾಡೇ ಇರಲಿಲ್ಲವಂತೆ. ಕೆಲವು ರಿಯಲ್ ರಿಯಲ್ ಸನ್ನಿವೇಶಗಳನ್ನ ಸೇರಿಸಬೇಕು ಅಂತ ಮಾತ್ರ ಆಧಿತ್ಯ ಧರ್ ತಲೆಯಲ್ಲಿ ಇತ್ತು. ಆ ದೃಶ್ಯಗಳನ್ನ ಚಿತ್ರಿಸುತ್ತಾ ಹೋದ್ವಿ.. ಕೊನೆಗೆ ಇಷ್ಟು ದೊಡ್ಡ ಅವಧಿ ಆಯ್ತು' ಅಂದಿದ್ದಾರೆ ಆಧಿತ್ಯ ಧರ್.

ನಿಮಗೆ ಗೊತ್ತಿರೋ ಹಾಗೆ ಸಿನಿಮಾದಲ್ಲಿ ಹಲವು ರಿಯಲ್ ಇನ್ಸಿಡೆಂಟ್​ ಗಳನ್ನ ನೆನಪಿಸೋ ದೃಶ್ಯಗಳು ಇವೆ. ಧುರಂಧರ್ 2 ನಲ್ಲಿ ಭಾರತದಲ್ಲಿ 2016ರಲ್ಲಿ ನಡೆದ ನೋಟು ಅಮಾನ್ಯೀಕರಣದ ಹಿಂದಿನ ರಹಸ್ಯ ರಿವೀಲ್ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಭಾರತದ ನೋಟುಗಳನ್ನ ಛಾಪಿಸಿ ಕಳ್ಳಜಾಲದ ಮೂಲಕ ಕಳುಹಿಸಿ ಭಾರತದ ಆರ್ಥಿಕತೆಗೆ ಹೊಡೆತ ಕೊಡುವ ಜಾಲ ಆಕ್ಟಿವ್ ಆಗಿತ್ತು. ಲಕ್ಷಾಂತರ ಕೋಟಿ ಖೋಟಾ ನೋಟು ಭಾರತಕ್ಕೆ ಬರಲಿದೆ ಅನ್ನೋ ರಹಸ್ಯವನ್ನ ಹಮ್ಜಾ ಅಲಿ ಭಾರತಕ್ಕೆ ರವಾನಿಸಿದ ಮೇಲೆ ಇಲ್ಲಿ ಡಿಮಾನಟೇಷನ್ ನಡೆಯುತ್ತೆ. ಪಾಕ್​ನಲ್ಲಿ ಖೋಟಾ ನೋಟಿನ ಕಿಂಗ್ ಅನ್ನಿಸಿಕೊಂಡಿದ್ದ ಜಾವೇದ್ ಖನಿನಿ ಬಿಲ್ಡಿಂಗ್​ವೊಂದರಿಂದ ಬಿದ್ದು ಅನುಮಾನಾಸ್ಪದವಾಗಿ ಸತ್ತು ಹೋಗ್ತಾನೆ.

ಇನ್ನೂ ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್​ಸ್ಟರ್ ಅತೀಫ್ ಅಹಮದ್​ನನ್ನ ಪೊಲೀಸ್ ಕಸ್ಟಡಿಯಲ್ಲಿ ಇರೋವಾಗಲೇ, ಮಾಧ್ಯಮಗಳ ಎದುರು ಮಾತನಾಡೋವಾಗಲೇ ಶೂಟ್ ಮಾಡಿ ಸಾಯಿಸಲಾಗಿತ್ತು. ಅದರ ಹಿಂದಿನ ಅಸಲಿಯತ್ತು ಕೂಡ ಸಿನಿಮಾದಲ್ಲಿದೆ.

ಇನ್ನೂ ಎಲ್ಲಕ್ಕಿಂತ ರೋಚಕವಾದ ಸೀನ್ ಅಂದ್ರೆ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂನ ತೋರಿಸಲಾಗಿದೆ. ದಾವೂದ್ ಹಾಸಿಗೆಯಲ್ಲೇ ಜೀವನ ಕಳೆವಂತೆ ಮಾಡಿದ್ದೇ ಭಾರತದ ರಾ ಏಜೆಂಟ್ ಕೊಟ್ಟ ಸ್ಲೋ ಪಾಯಿಸನ್ ಅನ್ನೋದನ್ನ ನೋಡಿದಾಗ ಪ್ರೇಕ್ಷಕರ ರಿಯಾಕ್ಷನ್ ಸಖತ್ ಆಗಿರುತ್ತೆ.

ಪಾಕಿಸ್ತಾನ ಲ್ಯಾರಿನಲ್ಲಿ ನಡೆದ ಗ್ಯಾಂಗ್​ವಾರ್ - ಪೊಲೀಸ್ ಶೂಟ್​ಔಟ್ ಸೀನ್ ಕೂಡ ಸಿನಿಮಾದಲ್ಲಿದೆ. ಅದು ಕೂಡ ನೈಜ ನೈಜವಾಗೇ ಚಿತ್ರಿಸಲಾಗಿದೆ.

ಇಂಥಾ ಹಲವು ಘಟನೆಗಳನ್ನ ಇಟ್ಟುಕೊಂಡು ಆಧಿತ್ಯ ಧರ್ ಚಿತ್ರಿಸುತ್ತಾ ಹೋಗಿದ್ದಾರೆ. ಎಷ್ಟು ಅವಧಿ ಬರುತ್ತೆ ಅಂತ ಲೆಕ್ಕ ಇಟ್ಟಿಲ್ಲ. ತಾವು ಅಂದುಕೊಂಡಿದ್ದನ್ನೆಲ್ಲಾ ಚಿತ್ರಿಸಿ ಸಿನಿಮಾ ಮಾಡಿದ್ದಾರೆ. ಅಚ್ಚರಿ ಅಂದ್ರೆ ಅದನ್ನ ಜನ ನೋಡಿ ಇಷ್ಟಪಡ್ತಾ ಇದ್ದಾರೆ. ಆಧಿತ್ಯ ಧರ್​ನ ಜೀನಿಯಸ್ ಅಂತ ಕೊಂಡಾಡ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ.. 

Related Video