11:58 PM (IST) Mar 19

Karnataka News Live 19 March 2026ದಾವಣಗೆರೆಯಲ್ಲಿ ಬಹುಕೋಟಿ ಉದ್ಯೋಗ ವಂಚನೆ - ಹಿರೇಉಡ ತಾಂಡಾ ವಂಚಕರ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಉಡ ತಾಂಡಾದಲ್ಲಿ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ನೂರಾರು ನಿರುದ್ಯೋಗಿಗಳಿಂದ ಸುಮಾರು ₹60 ಕೋಟಿ ವಂಚಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಸಂಘ ಒತ್ತಾಯಿಸಿದ್ದು, ಪೊಲೀಸರ ನಿಷ್ಕ್ರಿಯತೆ ವಿರುದ್ಧ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
Read Full Story
11:43 PM (IST) Mar 19

Karnataka News Live 19 March 20268 ವರ್ಷಗಳ ಬಳಿಕ ಕೃಷಿ ಇಲಾಖೆಯಲ್ಲಿ ನೇಮಕಾತಿ - 945 ಹುದ್ದೆಗಳ ಭರ್ತಿಗೆ ಮೂರು ತಿಂಗಳೊಳಗೆ ಮುಹೂರ್ತ - ಚಲುವರಾಯ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು, ಕೃಷಿ ಇಲಾಖೆಯ 945 ಗ್ರೂಪ್‌ ‘ಬಿ’ ಮತ್ತು ‘ಸಿ’ ವೃಂದದ ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಒಳ ಮೀಸಲಾತಿ ಕಾರಣದಿಂದ ರದ್ದಾಗಿದ್ದ ಹಿಂದಿನ ಅಧಿಸೂಚನೆಯ ಬದಲಿಗೆ, ಹೊಸ ನೇಮಕಾತಿ ಅಧಿಸೂಚನೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Read Full Story
11:17 PM (IST) Mar 19

Karnataka News Live 19 March 2026ಬಾಗಲಕೋಟೆ, ದಾವಣಗೆರೆಯಲ್ಲಿ ಬಿಜೆಪಿ ಗೆಲುವು ಖಚಿತ - ಸಂಸದ ಗೋವಿಂದ ಕಾರಜೋಳ

ಎರಡೂ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇಲ್ಲ.ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

Read Full Story
11:16 PM (IST) Mar 19

Karnataka News Live 19 March 2026ಅಮೆರಿಕಾದ F-35 ಯುದ್ಧ ವಿಮಾನಕ್ಕೂ ಹೊಡೆಯಿತಾ ಇರಾನ್ - ಅಮೆರಿಕಾ ಹೇಳಿದ್ದೇನು?

ಇರಾನ್-ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ತನ್ನ ಮೂಲಸೌಕರ್ಯಗಳ ಮೇಲೆ ಮತ್ತೊಮ್ಮೆ ದಾಳಿಯಾದರೆ ಸಂಯಮ ತೋರುವುದಿಲ್ಲ ಎಂದು ಇರಾನ್ ತನ್ನ ಶತ್ರುರಾಷ್ಟ್ರಗಳಾದ ಅಮೆರಿಕಾ ಹಾಗೂ ಇಸ್ರೇಲ್‌ಗೆ ಎಚ್ಚರಿಸಿದೆ.

Read Full Story
11:02 PM (IST) Mar 19

Karnataka News Live 19 March 2026ರೀಲ್ಸ್ ಹುಚ್ಚಿಗೆ ಬಿಜೆಪಿ ನಾಯಕನ ಪುತ್ರ ಬಲಿ, ಘಟನೆ ಒಂದು ಪಾಠ ಎಂದ ಶಾಸಕ ಮಹೇಶ್ ಟೆಂಗಿನಕಾಯಿ, ಜಾಲತಾಣ ಬ್ಯಾನ್ ಯಾರಿಗೆ?

ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡುವಾಗ ನಡೆದ ಅಪಘಾತದಲ್ಲಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಬಿಜೆಪಿ ಮುಖಂಡರ ಪುತ್ರನಾದ ಈತ, ಬೈಕ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಘಟನೆಯು ಯುವಕರಲ್ಲಿ ಹೆಚ್ಚುತ್ತಿರುವ ರೀಲ್ಸ್ ಹುಚ್ಚಾಟದ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
10:33 PM (IST) Mar 19

Karnataka News Live 19 March 2026ಬೆಂಗಳೂರು ಮನೆ ಮಾಲೀಕರ 'ಡೆಪಾಸಿಟ್' ವಂಚನೆ - ₹70 ಸಾವಿರ ಪಡೆದು ₹18 ಸಾವಿರ ವಾಪಸ್; ಯುವತಿಯ ಆಕ್ರೋಶ ವೈರಲ್!

ಬೆಂಗಳೂರಿನ ಯಶವಂತಪುರದಲ್ಲಿ, ಮನೆ ಮಾಲೀಕರು ಆಸ್ತಿ ಮಾರಾಟದ ನಂತರ ಯುವತಿಯೊಬ್ಬರಿಗೆ ನೀಡಬೇಕಿದ್ದ ₹70,000 ಸೆಕ್ಯೂರಿಟಿ ಡೆಪಾಸಿಟ್‌ನಲ್ಲಿ ₹52,000 ಕಡಿತಗೊಳಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಗಾದ ಅನ್ಯಾಯದ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.

Read Full Story
09:58 PM (IST) Mar 19

Karnataka News Live 19 March 2026ಬೆಂಗಳೂರು - ಪ್ರೀತ್ಸೇ..ಪ್ರೀತ್ಸೇ.. 3 ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ, ಒಪ್ಪದ್ದಕ್ಕೆ ಮಹಿಳೆಯನ್ನು ಕೊಂದೇ ಬಿಟ್ಟ!

ಬೆಂಗಳೂರಿನ ಚಂದ್ರಾ ಲೇಔಟ್ ವ್ಯಾಪ್ತಿಯಲ್ಲಿ, ಫಿರ್ದೋಸ್ ಭಾನು ಎಂಬ ವಿವಾಹಿತ ಮಹಿಳೆಯನ್ನು ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಫೀಸ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಆರೋಪಿ ಮಹಿಳೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದು, ಸದ್ಯ ಪರಾರಿಯಾಗಿದ್ದಾನೆ.
Read Full Story
09:31 PM (IST) Mar 19

Karnataka News Live 19 March 2026ಹಾವೇರಿ - ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ; 10ಕ್ಕೂ ಅಧಿಕ ಎಮ್ಮೆಗಳು ಸಜೀವ ದಹನ, ರೈತ ಕಂಗಾಲು!

ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ರೈತರೊಬ್ಬರಿಗೆ ಸೇರಿದ 10ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನವಾಗಿವೆ. ಇದು ತಿಂಗಳ ಅವಧಿಯಲ್ಲಿ ನಡೆದ ಐದನೇ ಬೆಂಕಿ ಅವಘಡವಾಗಿದ್ದು, ಗ್ರಾಮಸ್ಥರು ಕಿಡಿಗೇಡಿಗಳ ಕೃತ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
Read Full Story
09:03 PM (IST) Mar 19

Karnataka News Live 19 March 2026ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ - ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ!

ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್ ಮಾಡುವಾಗ ನಡೆದ ಭೀಕರ ಅಪಘಾತದಲ್ಲಿ ಬಿಜೆಪಿ ಮುಖಂಡನ 15 ವರ್ಷದ ಪುತ್ರ ನಮೀಷ್ ಸಂಗಳದ ಮೃತಪಟ್ಟಿದ್ದಾನೆ. ಅತೀ ವೇಗವಾಗಿ ಬೈಕ್ ಮತ್ತು ಆಡಿ ಕಾರು ಚಲಾಯಿಸುವ ಸಾಹಸದ ವಿಡಿಯೋ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದವನೂ ಅಪ್ರಾಪ್ತನಾಗಿದ್ದ.
Read Full Story
08:48 PM (IST) Mar 19

Karnataka News Live 19 March 2026ಸರ್ಕಾರಿ ನೌಕರರ ವರ್ಗಾವಣೆಗೆ 'ಸಿಎಂ ಹಸ್ತಕ್ಷೇಪ' ಸಲ್ಲದು, ಮಾಡಲು ಇದಕ್ಕಿಂತ ದೊಡ್ಡ ಕೆಲಸಗಳಿವೆ - ಹೈಕೋರ್ಟ್ ತರಾಟೆ!

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ನೇರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವರ್ಗಾವಣೆ ವಿಚಾರಗಳನ್ನು ಆಯಾ ಇಲಾಖೆಗಳಿಗೆ ಬಿಡಬೇಕು ಮತ್ತು ಸಿಎಂ ಇಂತಹ ಸಣ್ಣ ವಿಚಾರಗಳಲ್ಲಿ ಸಮಯ ವ್ಯಯಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Read Full Story
08:46 PM (IST) Mar 19

Karnataka News Live 19 March 2026ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕಟ್ಟುನಿಟ್ಟಿನ ಕ್ರಮ - ಸಚಿವ ಈಶ್ವರ್ ಖಂಡ್ರೆ ಸೂಚನೆ

ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Read Full Story
08:23 PM (IST) Mar 19

Karnataka News Live 19 March 2026ಯುಗಾದಿಗೆ ರಿಷಬ್ ಶೆಟ್ಟಿ ಭರ್ಜರಿ ನ್ಯೂಸ್‌ - 'ಅಧ್ಯಾಯ 2' ಘೋಷಿಸಿದ ಡಿವೈನ್ ಸ್ಟಾರ್; ಯಾವ ಸಿನಿಮಾ ಇದು?

ಯುಗಾದಿ ಹಬ್ಬದಂದು ನಟ ರಿಷಬ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಡಿ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. 'ಅಧ್ಯಾಯ ಎರಡು ಇಲ್ಲಿಂದ ಶುರು' ಎಂಬ ಪೋಸ್ಟರ್ ಹಂಚಿಕೊಂಡಿದ್ದು, ಇದು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯ ಮುಂದುವರಿದ ಭಾಗವೇ ಅಥವಾ 'ಕಾಂತಾರ' ಸರಣಿಯ ಹೊಸ ಚಿತ್ರವೇ ಎಂಬ ಕುತೂಹಲ ಮೂಡಿಸಿದೆ.
Read Full Story
08:21 PM (IST) Mar 19

Karnataka News Live 19 March 20261948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ ವೈರಲ್​ - ಕನ್ನಡದಲ್ಲಿ ಏನು ಬರೆದಿದ್ದಾರೆ ನೋಡಿ

1948ರಲ್ಲಿ ಮುದ್ರಣಗೊಂಡ ಮುಸ್ಲಿಂ ಸಮುದಾಯದ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಗುರುಮಹಮ್ಮದ್ ಪ್ರಸನ್ನ' ಎಂದು ಆರಂಭವಾಗುವ ಈ ಪತ್ರಿಕೆಯಲ್ಲಿ ಬಳಸಲಾದ ಅಚ್ಚ ಕನ್ನಡ ಪದಗಳು ಮತ್ತು ಅಂದಿನ ಸಾಮರಸ್ಯದ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Read Full Story
08:05 PM (IST) Mar 19

Karnataka News Live 19 March 2026ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ - ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ಈದ್ ಆಚರಣೆಗೆ ಖಾಝಿಗಳ ಘೋಷಣೆ

ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲು ಜಿಲ್ಲಾ ಖಾಝಿಗಳು ಘೋಷಿಸಿದ್ದಾರೆ. ಒಂದು ತಿಂಗಳ ರಂಜಾನ್ ಉಪವಾಸದ ಬಳಿಕ ಕರಾವಳಿಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ನಡೆದಿದೆ.
Read Full Story
07:40 PM (IST) Mar 19

Karnataka News Live 19 March 2026'ಸೆರಗ ಸರ್ಸೆ' ವಿವಾದದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದ ಎಲ್ಲಾ ಖಾತೆ ಡಿಲೀಟ್ ಮಾಡಿದ ಗಾಯಕಿ​- ಆಗಿದ್ದೇನು

ಕೆಡಿ ಚಿತ್ರದ 'ಸೆರಗ ಸರ್ಸೆ' ಹಾಡಿನ ಅಶ್ಲೀಲ ಸಾಹಿತ್ಯದ ವಿವಾದ ಭುಗಿಲೆದ್ದಿದೆ. ನಿರ್ದೇಶಕ ಪ್ರೇಮ್ ಕ್ಷಮೆಯಾಚಿಸಿದ್ದರೆ, ನಟಿ ನೋರಾ ಫತೇಹಿ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ ಎಂದಿದ್ದಾರೆ. ಈ ನಡುವೆ, ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.

Read Full Story
07:37 PM (IST) Mar 19

Karnataka News Live 19 March 20265000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ - ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಘೋಷಣೆ

ಪ್ರಸಕ್ತ ವರ್ಷದಲ್ಲಿ ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ (ಎಲ್‌ಕೆಜಿ-ಯುಕೆಜಿ) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ.

Read Full Story
07:20 PM (IST) Mar 19

Karnataka News Live 19 March 2026ಒಂದೇ ಫ್ರೇಮ್​ನಲ್ಲಿ ಸ್ಟಾರ್​ ನಟರ ಯುಗಾದಿ ವಿಷ್​ - ರಾಜ್​, ಅಪ್ಪು, ವಿಷ್ಣು, ಅಂಬಿ ​ಕಂಡು ಫ್ಯಾನ್ಸ್​ ಪುಳಕ- AI Video Viral

ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ಯುಗಾದಿ ಹಬ್ಬದಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರಿಂದ ಹಿಡಿದು ಯಶ್, ದರ್ಶನ್, ಸುದೀಪ್‌ರಂತಹ ಇಂದಿನ ನಟರವರೆಗೆ ಎಲ್ಲರನ್ನೂ ಒಂದೇ ಫ್ರೇಮ್‌ನಲ್ಲಿ ಒಟ್ಟಿಗೆ ತರಲಾಗಿದೆ.
Read Full Story
06:34 PM (IST) Mar 19

Karnataka News Live 19 March 2026ದಿನವಿಡೀ ಕುಡೀತಿದ್ರಾ ರಾಮ ಶ್ಯಾಮ ಭಾಮ ನಟಿ ಊರ್ವಶಿ? ರಂಗನಾಥನ್ ಹೇಳಿದ ಆ ಶಾಕಿಂಗ್ ಸತ್ಯವೇನು?

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯನಟಿ ಊರ್ವಶಿ ಅವರಿಗೆ ವಿಪರೀತ ಕುಡಿಯುವ ಅಭ್ಯಾಸವಿತ್ತು ಎಂದು ನಟ ಹಾಗೂ ಪತ್ರಕರ್ತ ಬಯಿಲ್ವಾನ್ ರಂಗನಾಥನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

Read Full Story
06:29 PM (IST) Mar 19

Karnataka News Live 19 March 2026ಈ ಕನ್ನಡ ಸೀರಿಯಲ್ಸ್​ ನಟರ ಬದಲಾವಣೆಗೆ ದೇವರ ಮೊರೆ ಹೋದ ವೀಕ್ಷಕರು! ಅಷ್ಟಕ್ಕೂ ಆಗಿದ್ದೇನು?

ಬಹುತೇಕ ಕನ್ನಡ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದು, ಇದರಲ್ಲಿನ ನಾಯಕ ಪಾತ್ರಗಳನ್ನು ಪೆದ್ದು ಮತ್ತು ಮುಗ್ಧರೆಂದು ಚಿತ್ರಿಸಲಾಗುತ್ತದೆ. ಬ್ರಹ್ಮಗಂಟು, ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್​ಗಳ ನಾಯಕರು ವಿಲನ್​ಗಳ ಅಸಲಿಯತ್ತನ್ನು ತಿಳಿಯದೇ ಇರುವುದು ಪ್ರೇಕ್ಷಕರನ್ನು ಕೆರಳಿಸಿದೆ.

Read Full Story
06:14 PM (IST) Mar 19

Karnataka News Live 19 March 2026ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತ - ಆಸ್ತಿಗಾಗಿ ಹುಟ್ಟಿದ ತಂಗಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಅಣ್ಣ!

ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತನ್ನ ತಂಗಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಜಮೀನಿನಲ್ಲಿ ಪಾಲು ಕೇಳಿದ್ದಕ್ಕೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Read Full Story