05:27 PM (IST) Jan 11

Karnataka News Live 11 January 2026ಚಡ್ಡಿ ಹಾಕಿ ಓಡಾಡಬೇಡಮ್ಮ ಅಂತ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಹೋಂಗಾರ್ಡ್‌ಗೆ ರಕ್ತಬರುವಂತೆ ಥಳಿಸಿದ ಯುವತಿ!

ಬೆಂಗಳೂರಿನ ಕೆ.ಆರ್ ಪುರಂನಲ್ಲಿ, ಚಡ್ಡಿ ಧರಿಸಿದ್ದ ಯುವತಿಗೆ ಬುದ್ಧಿವಾದ ಹೇಳಿದ ಹಿರಿಯ ಹೋಂಗಾರ್ಡ್ ಲಕ್ಷ್ಮಿನರಸಮ್ಮ ಅವರ ಮೇಲೆ ಯುವತಿ ತೀವ್ರವಾಗಿ ಹಲ್ಲೆ ಮಾಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read Full Story
05:27 PM (IST) Jan 11

Karnataka News Live 11 January 2026Udyami Vokkaliga Expo 2026 - ಸಾಲ ಕೊಡುವ ಮುನ್ನ ಹುಷಾರ್, ನಿಮ್ಮ ನೆರಳನ್ನೂ ನಂಬಬೇಡಿ - ಡಿಕೆಶಿ ಲೈಫ್ ಲೆಸನ್

ಬೆಂಗಳೂರಿನ 'ಉದ್ಯಮಿ ಒಕ್ಕಲಿಗ ಎಕ್ಸ್‌ಪೋ'ದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಉದ್ಯಮದಲ್ಲಿ ನಂಬಿಕೆಯ ಮಹತ್ವ ಮತ್ತು ಸಾಲ ನೀಡುವಲ್ಲಿನ ಎಚ್ಚರಿಕೆ ಕುರಿತು ಸಲಹೆ ನೀಡಿದರು. ತಮ್ಮನ್ನು 'ಬಂಡೆ' ಎಂದು ಕರೆಯುವುದರ ಹಿಂದಿನ ಶ್ರಮ, ರಾಜಕೀಯ ಏರಿಳಿತಗಳನ್ನು ಹಂಚಿಕೊಂಡರು.

Read Full Story
04:40 PM (IST) Jan 11

Karnataka News Live 11 January 2026ನರೇಗಾ ಸಮರ - ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ ಎಂದು ಪಂಥಾಹ್ವಾನ!

ನರೇಗಾ ಯೋಜನೆ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ನೀಡಿದ್ದ ಚರ್ಚೆಯ ಸವಾಲನ್ನು ಡಿಸಿಎಂ ಡಿಕೆ ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ತಮ್ಮ ಕನಕಪುರ ತಾಲೂಕಿಗೆ ನರೇಗಾದಲ್ಲಿ ನಂಬರ್ ಒನ್ ಪ್ರಶಸ್ತಿ ಬಂದಿದ್ದು, ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಬೆರಳ ತುದಿಯಲ್ಲಿದೆ ಎಂದು ಹೇಳಿದ್ದಾರೆ. 

Read Full Story
03:59 PM (IST) Jan 11

Karnataka News Live 11 January 2026ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ - ಎಷ್ಟು ಬುದ್ಧಿವಂತನೋ, ಅಷ್ಟೇ ಹಠವಾದಿ, ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ - ಮಾವ ಕಣ್ಣೀರು

ದಾವಣಗೆರೆಯ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರ ಇಬ್ಬರು ಮಕ್ಕಳು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಚಂದ್ರಶೇಖರ್ ಅವರ ಹಠಮಾರಿ ಸ್ವಭಾವವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರ ಹೇಳಿಕೆ.

Read Full Story
03:29 PM (IST) Jan 11

Karnataka News Live 11 January 2026ರೆಸ್ಯೂಮ್ 2 ಲೈನ್, ಅನುಭವ ಶೂನ್ಯ; ಸೆಕ್ಯೂರಿಟಿ ಗಾರ್ಡ್‌ಗೆ ಥ್ಯಾಂಕ್ಸ್ ಹೇಳಿ ಉದ್ಯೋಗ ಗಿಟ್ಟಿಸಿದ ಮಹಿಳೆ

ರೆಸ್ಯೂಮ್ 2 ಲೈನ್, ಅನುಭವ ಶೂನ್ಯ; ರಿಜೆಕ್ಟ್ ಆಗಿದ್ದ ಮಹಿಳೆಯನ್ನು ಮತ್ತೆ ಕರದು ಉದ್ಯೋಗ ನೀಡಲಾಗಿದೆ. ಕಂಪನಿ ಸಂಸ್ಥಾಪಕರೇ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಯೂರಿಟಿ ಗಾರ್ಡ್ ಹೇಳಿದೆ ಥ್ಯಾಂಕ್ಸ್.

Read Full Story
02:18 PM (IST) Jan 11

Karnataka News Live 11 January 2026ಧಾರವಾಡ - ಅಂಡಮಾನ್–ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾಕ್ಕೆ ಬಲಿ!

ಧಾರವಾಡದ ಕೆಸಿಡಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಎಸ್. ಅನ್ನಪೂರ್ಣ ಅವರು ಕುಟುಂಬ ಸಮೇತ ಅಂಡಮಾನ್ ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಅವರ ಅನಿರೀಕ್ಷಿತ ಸಾವಿನಿಂದಾಗಿ ಕಾಲೇಜು ವಲಯ ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಶೋಕ ಮನೆಮಾಡಿದೆ.
Read Full Story
02:12 PM (IST) Jan 11

Karnataka News Live 11 January 2026BBK 12 - ಕಿಚ್ಚ ಸುದೀಪ್‌ ಮುಂದೆ ಗಿಲ್ಲಿ ನಟನಿಗೆ ವಾರ್ನ್‌ ಮಾಡಿದ ಕಾವ್ಯ ಶೈವ! ಅಂಥದ್ದೇನಾಯ್ತು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸೂಪರ್‌ ಸಂಡೇ ವಿಥ್‌ ಸುದೀಪ ಎಪಿಸೋಡ್‌ ನಡೆದಿದೆ. ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿದ್ದು, ಅದರಲ್ಲಿ ಗಿಲ್ಲಿ ನಟನಿಗೆ ಕಾವ್ಯ ಶೈವ ಅವರು ವಾರ್ನ್‌ ಮಾಡಿದ್ದಾರೆ.

Read Full Story
01:26 PM (IST) Jan 11

Karnataka News Live 11 January 2026ಬಾಯಲ್ಲಿ ಮಾತ್ರ 'ಹಣಿಶಿಣಮೆಣಶಿಣಕಾಯಿ', ಒಳಗೆ ಉಂಟಲ್ವಾ ರಸಗುಲ್ಲಾ - ರಕ್ಷಿತಾಗೆ ಅಶ್ವಿನಿ ಫುಲ್​ ಮಾರ್ಕ್ಸ್​!

ಬಿಗ್​ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಜಗಳದಿಂದಲೇ ಪರಿಚಿತರಾದ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಸ್ನೇಹವೂ ಅಷ್ಟೇ ವಿಶೇಷವಾಗಿದ್ದು, ತನ್ನ ಬಾಯಿ ಮೆಣಸಿನಕಾಯಿಯಂತೆ ಆದರೆ ಮನಸ್ಸು ರಸಗುಲ್ಲಾದಂತೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.
Read Full Story
01:12 PM (IST) Jan 11

Karnataka News Live 11 January 2026Bigg Boss Kannada Season 12 ನೋಡಿದವ್ರಿಗೆ ಕಾಡುವ ಕಟ್ಟ ಕಡೆಯ 3 ಪ್ರಶ್ನೆಗಳಿವು! ಯಾರು ಉತ್ತರ ಕೊಡ್ತಾರೆ?

Bigg Boss Kannada Season 12: ಕಿಚ್ಚ ಸುದೀಪ್‌ ನಿರೂಪಣೆಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ನೋಡಿದ ವೀಕ್ಷಕರಿಗೆ ಕೆಲ ಸಂದೇಹಗಳು ಬಂದಿವೆ. ಇದಕ್ಕೆ ಕಾರಣ ಏನು? ಹಾಗಾದರೆ ಆ ಪ್ರಶ್ನೆಗಳು ಯಾವುವು?

Read Full Story
01:11 PM (IST) Jan 11

Karnataka News Live 11 January 2026ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!

ಹುಬ್ಬಳ್ಳಿಯಲ್ಲಿ ಹಾವೇರಿ ಮೂಲದ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾ*ಚಾರ ಎಸಗಿ, ಆ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣವು ಸ್ಥಳೀಯವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದೆ.

Read Full Story
12:52 PM (IST) Jan 11

Karnataka News Live 11 January 2026ಶಾಂತಿ ಸಾಗರ ಈ ಗವಿಸಿದ್ಧೇಶ್ವರ ಮಹಾಜಾತ್ರೆ

‘ಗವಿಸಿದ್ದೇಶ್ವರ ಜಾತ್ರೆ ದೇಶದ ಎಂಟನೇ ಅದ್ಭುತ. ಇಲ್ಲಿಯ ದಾಸೋಹ, ಶ್ರೀಗಳ ಸಾಧನೆ ಎಲ್ಲವೂ ಸೇರಿದರೆ ದೇಶದ ಅಲ್ಲ, ವಿಶ್ವದ ಎಂಟನೇ ಅದ್ಭುತ!’

ಇದು, ಕೊಪ್ಪಳ ಜಾತ್ರೆ ಮತ್ತು ಗವಿಮಠ ಕುರಿತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ ಅವರ ಉದ್ಗಾರ.

Read Full Story
12:52 PM (IST) Jan 11

Karnataka News Live 11 January 2026Bigg Boss ಇತಿಹಾಸದಲ್ಲೇ ಮೊದಲು - ರೋಬೋ ಎಂಟ್ರಿ! ನಿಮ್ದೆಲ್ಲಾ ಗೊತ್ತು ಎನ್ನುತ್ತ ಕಿಚ್ಚನನ್ನೇ ಸುಸ್ತು ಮಾಡ್ತು

ಬಿಗ್​ಬಾಸ್​ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಇತಿಹಾಸದಲ್ಲೇ ಮೊದಲ ಬಾರಿಗೆ ರೋಬೋಟ್​ ಒಂದು ಮನೆಗೆ ಎಂಟ್ರಿ ಕೊಟ್ಟಿದೆ. ಈ ರೋಬೋಟ್, ನಿರೂಪಕ ಕಿಚ್ಚ ಸುದೀಪ್​ ಅವರಿಗೇ ಗೊತ್ತಿಲ್ಲದ ಶೋನ ಹಲವು ಅಂಕಿಅಂಶಗಳನ್ನು ಬಹಿರಂಗಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Read Full Story
12:39 PM (IST) Jan 11

Karnataka News Live 11 January 2026ಗಿಲ್ಲಿ ನಟ ಗೆದ್ದಾಯ್ತು; Bigg Boss ಟ್ರೋಫಿ ಬೋನಸ್‌ ಅಷ್ಟೇ; ಲೈಫ್‌ ಸೆಟಲ್‌ ಮಾಡೋ ಆದಾಯ ಬಂದಾಯ್ತು!

BBK 12 Winner Name: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗಿಲ್ಲಿ ನಟ ಅವರು ಟ್ರೋಫಿ ಗೆಲ್ಲಲಿ, ಬಿಡಲಿ ಅವರ ಮುಂದಿನ ಜೀವನ ಚೆನ್ನಾಗಿರುವ ಆದಾಯ ಹುಡುಕಿಕೊಂಡು ಬಂದಾಯ್ತು. ಹಾಗಾದರೆ ಏನದು?

Read Full Story
12:11 PM (IST) Jan 11

Karnataka News Live 11 January 2026BBK 12 - ‌ ನಿಜಕ್ಕೂ ಚಪ್ಪಾಳೆ ಕೊಡೋ ಪ್ರದರ್ಶನ ಕೊಟ್ಟಿರೋ ಸ್ಪರ್ಧಿ ಯಾರು? ಕಂಪೆನಿ HR ಬಹಿರಂಗ ಪೋಸ್ಟ್!

Bigg Boss Kannada 12 Episode: ಬಿಗ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಅಶ್ವಿನಿ ಗೌಡ, ಧ್ರುವಂತ್‌ ಅವರು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಹೀಗಿರುವಾಗ ಖಾಸಗಿ ಕಂಪೆನಿ HR ಒಬ್ಬರು ಎಲ್ಲರ ಆಟವನ್ನು ವಿಮರ್ಶೆ ಮಾಡಿದ್ದಾರೆ.

Read Full Story
12:10 PM (IST) Jan 11

Karnataka News Live 11 January 2026ವಿಶ್ವದ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್‌ ವ್ಯಾಮೋಹ ಏಕೆ?

ಗ್ರೀನ್‌ಲ್ಯಾಂಡ್‌ ದ್ವೀಪವನ್ನು ಖರೀದಿಸಲು ಸಿದ್ಧ ಎಂದು ಮೊದಲ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಸೌಮ್ಯವಾಗಿ ಹೇಳುತ್ತಿದ್ದರು. ಜ.3ರಂದು ವೆನಿಜುವೆಲಾದಲ್ಲಿ ಅಲ್ಲಿನ ಅಧ್ಯಕ್ಷರ ಬೆಡ್‌ರೂಂಗೇ ನುಗ್ಗಿ, ಪತ್ನಿ ಸಮೇತ ಅವರನ್ನು ಅಮೆರಿಕ ಕಮಾಂಡೋಗಳು ಹೊತ್ತೊಯ್ದ ಬಳಿಕ ಟ್ರಂಪ್‌ ಖದರ್ರೇ ಬದಲಾಗಿದೆ.

Read Full Story
12:01 PM (IST) Jan 11

Karnataka News Live 11 January 2026ಮದ್ವೆ ಬಳಿಕ ಕೇಳ್ತಿದ್ದ ಆ ಪ್ರಶ್ನೆಗೆ ನಟಿ ವೈಷ್ಣವಿ ಗೌಡ 7 ತಿಂಗಳಿಗೆ ಕೊಟ್ಟರು ಉತ್ತರ! ಫ್ಯಾನ್ಸ್​ ಫುಲ್​ ಖುಷ್​

'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ, ತಮ್ಮ ಮದುವೆಯಾಗಿ ಏಳು ತಿಂಗಳ ನಂತರ ಲವ್ ಸ್ಟೋರಿ ಬಗ್ಗೆ ಎದ್ದಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕಾರಿನಲ್ಲಿ ದೇವರು ಹೋಗುತ್ತಿರುವ ಎಐ ಫೋಟೋ ಹಂಚಿಕೊಳ್ಳುವ ಮೂಲಕ, ತಮ್ಮ ಮದುವೆ ದೇವರ ಕೃಪೆಯಿಂದ ನಡೆದಿದೆ ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ.
Read Full Story
11:57 AM (IST) Jan 11

Karnataka News Live 11 January 2026ಎವಿಆರ್ ರೆಡ್ಡಿ ಕನ್ನಡ ನಟಿ ವಿವಾದ, ಹಣ ಕೊಟ್ಟಿದ್ದಕ್ಕೆ ದಾಖಲೆ, ಇಬ್ಬರು ಜೊತೆಗಿರೋ ತೀರಾ ಖಾಸಗಿ ಫೋಟೋ ಲೀಕ್!

ಎವಿಆರ್ ರೆಡ್ಡಿ ಮತ್ತು ಖ್ಯಾತ ನಟಿಯ ನಡುವಿನ ಗಲಾಟೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಇಬ್ಬರೂ ಆತ್ಮೀಯವಾಗಿರುವ ಖಾಸಗಿ ಫೋಟೋಗಳು ಮತ್ತು ನಟಿಗೆ ಕೋಟಿಗಟ್ಟಲೆ ಹಣ ಹಾಗೂ ವಸ್ತುಗಳನ್ನು ನೀಡಿರುವ ದಾಖಲೆಗಳು ಇದೀಗ ವೈರಲ್ ಆಗಿವೆ. ಈ ಹಿಂದೆ ನಟಿ, ರೆಡ್ಡಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು.

Read Full Story
11:32 AM (IST) Jan 11

Karnataka News Live 11 January 2026BBK 12 - ಕೆಲ ವಿಷಯಕ್ಕೆ ಕಿಚ್ಚನ ಚಪ್ಪಾಳೆಗೆ ಧ್ರುವಂತ್‌ ಯೋಗ್ಯ; ಇನ್ನೂ ಕೆಲವಕ್ಕೆ ಅಲ್ಲ - ಕಂಪೆನಿ HR

Bigg Boss Kannada Season 12: ಧ್ರುವಂತ್‌ ಹಾಗೂ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಕಂಪೆನಿ HR ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಧ್ರುವಂತ್‌ ಅವರ ಪ್ಲಸ್, ಮೈನಸ್‌ ವಿಷಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಬೇಸರವನ್ನು ಹೊರಹಾಕಿದ್ದಾರೆ.

Read Full Story
10:56 AM (IST) Jan 11

Karnataka News Live 11 January 2026ರಾಗಾ ವಿರುದ್ಧ ಮಿತ್ರರೇ ಸಿಟ್ಟಾಗಿರುವುದೇಕೆ?

ನಿರ್ಣಯಗಳನ್ನು ತೆಗೆದುಕೊಳ್ಳುವಾಗ ರಾಹುಲ್ ಗಾಂಧಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಮುಖ ನಿರ್ಣಯಗಳನ್ನು ಘೋಷಿಸುವಾಗಲೂ ಮಿತ್ರರನ್ನು ಸಂಪರ್ಕ ಮಾಡುವುದಿಲ್ಲ. ಸಂಸತ್‌ ಅಧಿವೇಶನ ವೇಳೆ ಜರ್ಮನಿಗೆ ಹೋಗಿ ಕುಳಿತರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಸುವವರು ಯಾರು?

Read Full Story
10:12 AM (IST) Jan 11

Karnataka News Live 11 January 2026ಅಶ್ವಿನಿ ಗೌಡ, ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ; ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಬಳಿ ಕೊಡಿಸಿದ್ಯಾಕೆ? ಕಾಕತಾಳಿಯವೋ?

Bigg Boss Gilli Nata: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ, ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಹೀಗಿರುವಾಗ ಗಿಲ್ಲಿ ನಟ, ರಕ್ಷಿತಾ ಅವರೇ ಆ ಕಿಚ್ಚನ ಚಪ್ಪಾಳೆ ಒಪನ್‌ ಮಾಡಿದ್ದು ಯಾಕೆ?

Read Full Story