ಬಿಗ್‌ಬಾಸ್‌ ಫಿನಾಲೆ ವಾರಕ್ಕೂ ಮುನ್ನ ನಡೆದ ಎಲಿಮಿನೇಷನ್‌ನಲ್ಲಿ, ಟಾಪ್-5 ಸ್ಪರ್ಧಿ ಎನಿಸಿದ್ದ ರಾಶಿಕಾ ಶೆಟ್ಟಿ ಮನೆಯಿಂದ ಹೊರಬಿದ್ದಿದ್ದಾರೆ. ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡಿದ ಅವರು ತಮ್ಮ ಜರ್ನಿಯನ್ನು ನೆನೆದಿದ್ದು, ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌ ನಡೆಯಲಿದೆ ಎಂದು ಸುದೀಪ್ ಘೋಷಿಸಿದ್ದಾರೆ.

ಬೆಂಗಳೂರು (ಜ.11): ಬಿಗ್‌ಬಾಸ್‌ ಮನೆಯಲ್ಲಿ ಫಿನಾಲೆ ವಾರಕ್ಕೂ ಮುನ್ನ ಕಟ್ಟಕಡೆಯ ಎಲಿಮಿನೇಷನ್‌ ನಡೆದಿದ್ದು, ಟಾಪ್‌-5 ನಿರೀಕ್ಷೆ ಹುಟ್ಟಿಸಿದ್ದ ರಾಶಿಕಾ ಶೆಟ್ಟಿ ಫಿನಾಲೆ ವೀಕ್‌ಗೆ ಎಂಟ್ರಿ ಕೊಡಲು ಸಾಧ್ಯವಾಗದೆ ಹೊರಬಿದ್ದಿದ್ದಾರೆ. ಸೂಪರ್‌ ಸಂಡೇ ವಿತ್‌ ಬಾದ್‌ಷಾ ಸುದೀಪ್‌ ಸಂಚಿಕೆಯ ಆರಂಭದಲ್ಲಿ ಗಿಲ್ಲಿ ಸೇವ್‌ ಆದರೆ, ನಂತರದಲ್ಲಿ ರಕ್ಷಿತಾ, ಧ್ರುವಂತ್‌ ಹಾಗೂ ಕಾವ್ಯಾ ಸೇವ್‌ ಆಗಿದ್ದರು. ಕೊನೆಯಲ್ಲಿ ರಘು ಹಾಗೂ ರಾಶಿಕಾ ಶೆಟ್ಟಿ ನಡುವೆ ಯಾರು ಉಳಿಯುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಕೊನೆಗೆ ರಘು ಉಳಿದುಕೊಂಡು ಫಿನಾಲೆ ವೀಕ್‌ಗೆ ಹೋದರೆ, ರಾಶಿಕಾ ಎಲಿಮಿನೇಷನ್‌ ಆಗಿ ಹೊರಬಂದರು.

ಹೊರಬಂದು ಸುದೀಪ್‌ ಅವರ ಜೊತೆ ವೇದಿಕೆಯಲ್ಲಿ ಮಾತನಾಡಿದ ಅವರು, ಫಿನಾಲೆ ವೀಕ್‌ಗೆ ಹೋಗ್ತೇನೆ ಎಂದುಕೊಂಡಿದ್ದೆ. ಆದರೆ, ಹೊರಬಂದಿದ್ದು ಕೊಂಚ ಬೇಸರವಾಗಿದೆ ಎಂದು ಹೇಳಿದರು. ನನ್ನಲ್ಲಿ ಇಷ್ಟು ಧೈರ್ಯ ಇದೆ ಅನ್ನೋದು ನನಗೆ ಗೊತ್ತಿರಲಿಲ್ಲ. ಇಲ್ಲಿ ವಿಟಿ ನೋಡಿ ನನ್ನ ಆಟ ನೋಡಿ ಖುಷಿ ಇದೆ. ಬಿಗ್‌ಬಾಸ್‌ಗೆ ಬರೋದು ನಾನು ಮಾಡಿದ ಅತಿದೊಡ್ಡ ನಿರ್ಧಾರ. ನೀವು ವೀಕೆಂಡ್‌ನಲ್ಲಿ ಬರೋದನ್ನೇ ಕಾಯ್ತಿದ್ದೆವು. ನಿಮ್ಮ ಮಾತುಗಳು ಮುಂದಿನ ಒಂದು ವಾರಕ್ಕೆ ನಮಗೆ ಸ್ಪೂರ್ತಿ ನೀಡುತ್ತಿತ್ತು. ಅದೇನೆ ಗೊಂದಲಗಳಿದ್ದರೂ ನಿಮ್ಮ ಮಾತು ಕೇಳಿದ ತಕ್ಷಣ ಎಲ್ಲವೂ ಕ್ಲಿಯರ್‌ ಆಗುತ್ತಿತ್ತು. ಬಿಗ್‌ಬಾಸ್ ನಿಮ್ಮನ್ನು ನಾನು ಮಿಸ್‌ ಮಾಡಿಕೊಳ್ತೇನೆ ಎಂದು ಹೇಳಿದರು.

ನಮ್ಮ ತಮ್ಮ ಹಾಗೂ ಅಮ್ಮ ಬಿಗ್‌ಬಾಸ್‌ ಮನೆಗೆ ಬಂದಿದ್ದು ಸ್ಮರಣೀಯ ಕ್ಷಣ ಎಂದು ರಾಶಿಕಾ ಹೇಳಿದರು. ಮಗಳ ಎಲ್ಲಾ ಗುಣ ಇಷ್ಟ ಆಯ್ತು. ಆಕೆ ಇಷ್ಟು ಸ್ಟ್ರಾಂಗ್‌ ಇದಾಳೆ ಅಂತಾ ಗೊತ್ತಿರಲಿಲ್ಲ. ಬಿಗ್‌ಬಾಸ್‌ ನೋಡಿಯೇ ಗೊತ್ತಾಯಿತು ಎಂದು ಅವರ ತಾಯಿ ಹೇಳಿದ್ದಾರೆ. ಬಿಗ್‌ಬಾಸ್‌ನಲ್ಲೇ ಶಾಶ್ವತವಾಗಿ ಉಳಿದುಕೊಂಡು ಬಿಡೋಣ ಎಂದು ಅನಿಸುತ್ತಿತ್ತು. ನಮ್ಮಪ್ಪನ ವಾಯ್ಸ್‌ ಬಳಿಕ ಯಾವುದಾರೂ ವಾಯ್ಸ್‌ಗೆ ಭಯಪಟ್ಟಿದ್ದೇನೆ ಎಂದರೆ ಅದು ಬಿಗ್‌ಬಾಸ್‌ ವಾಯ್ಸ್‌ ಎಂದು ರಾಶಿಕಾ ಹೇಳಿದರು. ಇದಕ್ಕೆ ತಮಾಷೆಯಾಗಿಯೇ ಉತ್ತರ ನೀಡಿದ ಸುದೀಪ್‌, ನಮ್ಮ ಮನೆಯಲ್ಲಿ ಹೀಗಿಲ್ಲ ಸರ್‌ ಎಂದರು.

ಬಿಗ್‌ಬಾಸ್‌ನಲ್ಲಿ ಟಾಸ್ಕ್‌ನಿಂದ ಹಿಡಿದು ಮನೆಯ ಎಲ್ಲಾ ವಿಚಾರಗಳಲ್ಲೂ ತೊಡಗಿಕೊಂಡಿದ್ದ ರಾಶಿಕಾ ಹೊರಹೋಗಿದ್ದು ಮನೆಯವರಿಗೂ ಶಾಕಿಂಗ್‌ ಎನಿಸಿದೆ. ಸೂರಜ್‌ನ ಬಟ್ಟೆಯನ್ನು ಸ್ವಿಮ್ಮಿಂಗ್‌ ಪೂಲ್‌ಗೆ ಹಾಕಿದ್ದು ಮಾತ್ರವೇ ರಾಶಿಕಾ ಮಾಡಿದ ತಪ್ಪು ಎಂದು ಅಶ್ವಿನಿ ಗೌಡ ಹೇಳಿದರು.

ಇನ್ನು ಯಾವಾಗ ಕಳಿಸ್ತಾರೋ ಗೊತ್ತಿಲ್ಲ, ಎಲ್ಲಾ ಟೈಮ್‌ನಲ್ಲೂ ರೆಡಿಯಾಗಿರ್ತೇನೆ ಎಂದ ಕಾವ್ಯಾ ಶೈವ ಹೇಳಿದ್ದಾರೆ. ಈ ಬಾರಿ ಮನೆಯಿಂದ ಯಾರು ಹೊರಹೋಗಬೇಕು ಎಂದಾಗ ಕಾವ್ಯಾ ತಮ್ಮ ಹೆಸರನ್ನೇ ತೆಗೆದುಕೊಂಡಿದ್ದರು. ಇದು ಸುದೀಪ್‌ ಅವರಿಗೂ ಅಚ್ಚರಿ ಎನಿಸಿತ್ತು.

ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌!

ಬಿಗ್‌ಬಾಸ್‌ ಶೋನ ಅತ್ಯಂತ ಮಹತ್ವದ ಮಿಡ್‌ವೀಕ್‌ ಎಲಿಮಿನೇಷನ್‌ ಈ ವಾರ ನಡೆಯಲಿದೆ. ನಿರೂಪಕ ಕಿಚ್ಚ ಸುದೀಪ್‌ ಸ್ವತಃ ಈ ಮಾತನ್ನು ಹೇಳಿದ್ದಾರೆ. ಪ್ರಸ್ತುತ ಮನೆಯಲ್ಲಿ ಗಿಲ್ಲಿ, ಧ್ರುವಂತ್‌, ರಕ್ಷಿತಾ, ಅಶ್ವಿನಿ, ರಘು, ಧನುಷ್‌ ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಈ ವಾರದ ಮಧ್ಯದಲ್ಲಿಯೇ ಮನೆಯಿಂದ ಹೊರಬೀಳಲಿದ್ದಾರೆ.