Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ

ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ಯುದ್ಧಕ್ಕೆ ಸ್ವದೇಶದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. 'ನೋ ಕಿಂಗ್ಸ್' ಹೆಸರಿನಲ್ಲಿ 90 ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸುತ್ತಿದ್ದು, ಯುದ್ಧದ ಆರ್ಥಿಕ ಹೊರೆಯಿಂದಾಗಿ ಅಮೆರಿಕದ ಖಜಾನೆ ಖಾಲಿಯಾಗುತ್ತಿದೆ. 

Share this Video
  • FB
  • Linkdin
  • Whatsapp

ವಾಷಿಂಗ್ಟನ್ (ಏ.2): ಇರಾನ್ ವಿರುದ್ಧ ಯುದ್ಧ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ಸ್ವದೇಶದಲ್ಲೇ ಭಾರಿ ವಿರೋಧ ವ್ಯಕ್ತವಾಗಿದೆ. ಅಮೆರಿಕದ 50 ರಾಜ್ಯಗಳಲ್ಲಿ 'ನೋ ಕಿಂಗ್ಸ್' (No Kings) ಹೆಸರಿನಲ್ಲಿ ಪ್ರತಿಭಟನೆಯ ಸುನಾಮಿ ಎದ್ದಿದ್ದು, ಬರೋಬ್ಬರಿ 90 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದು ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆ ಅಮೆರಿಕದಲ್ಲಿ ಅಂತರ್ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ

ಖಜಾನೆ ಖಾಲಿ, ಜನ ಹೈರಾಣ: ಪ್ರತಿ ಸೆಕೆಂಡಿಗೆ ಸುಮಾರು 2 ಲಕ್ಷ ರೂಪಾಯಿಗಳಷ್ಟು ಹಣ ಯುದ್ಧಕ್ಕಾಗಿ ವ್ಯಯವಾಗುತ್ತಿದ್ದು, ಅಮೆರಿಕದ ಖಜಾನೆ ಖಾಲಿಯಾಗುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಂಸತ್ತನ್ನು ಬದಿಗಿಟ್ಟು ಹಠಮಾರಿ ಧೋರಣೆ ತಳೆಯುತ್ತಿರುವ ಟ್ರಂಪ್ ವಿರುದ್ಧ ಜನಸಾಮಾನ್ಯರು ಸಿಡಿದೆದ್ದಿದ್ದಾರೆ. ಈ ಕಿಚ್ಚು ಕೇವಲ ಅಮೆರಿಕಕ್ಕೆ ಸೀಮಿತವಾಗದೆ ಲಂಡನ್, ಪ್ಯಾರಿಸ್ ಸೇರಿದಂತೆ ಯುರೋಪ್‌ನ ಪ್ರಮುಖ ನಗರಗಳಿಗೂ ಹರಡಿದೆ.

ಇಸ್ರೇಲ್‌ನಲ್ಲೂ ಶಾಂತಿ ಪಠಣ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಯುದ್ಧದ ಕೇಂದ್ರಬಿಂದುವಾಗಿರುವ ಇಸ್ರೇಲ್‌ನಲ್ಲೂ ಜನ ಶಾಂತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯುದ್ಧ ವಿರೋಧಿಸಿದ 21 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮಿತ್ರ ರಾಷ್ಟ್ರಗಳಲ್ಲೇ ಅಮೆರಿಕದ ನಿಲುವಿನ ಬಗ್ಗೆ ಸಂಶಯ ಮೂಡತೊಡಗಿದೆ. ಒಟ್ಟಾರೆಯಾಗಿ, ಟ್ರಂಪ್ ಅವರ ಯುದ್ಧೋನ್ಮಾದಕ್ಕೆ ಜಗತ್ತಿನಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಪರಿಸ್ಥಿತಿ ಸ್ಫೋಟಕ ಹಂತ ತಲುಪಿದೆ.

Related Video