ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ

ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಹೆಚ್ಚುತ್ತಿರುವ ಆರ್ಥಿಕ ಹೊರೆ, ಜಾಗತಿಕ ತೈಲ ಬಿಕ್ಕಟ್ಟಿನ ಆತಂಕ ಮತ್ತು ಇರಾನ್‌ನ ಪ್ರಬಲ ಪ್ರತಿರೋಧ ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳಾಗಿವೆ.

Share this Video
  • FB
  • Linkdin
  • Whatsapp

ವಾಷಿಂಗ್ಟನ್ (ಏ.1): ಇರಾನ್ ವಿರುದ್ಧ ಭೀಕರ ಯುದ್ಧಕ್ಕೆ ಇಳಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾರ್ಯವಾಗಿ ಯುದ್ಧ ನಿಲ್ಲಿಸುವ ಸುಳಿವು ನೀಡಿದ್ದಾರೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ನನ್ನ ಗುರಿಯಲ್ಲ ಎಂದು ಘೋಷಿಸಿರುವ ಟ್ರಂಪ್, ಮುಂಬರುವ 2-3 ವಾರಗಳಲ್ಲಿ ಯುದ್ಧ ಕೊನೆಗೊಳ್ಳಬಹುದು ಎಂದು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಇರಾನ್ ಮೇಲಿನ ಯುದ್ಧ ನಿಲ್ಲಿಸಲು ಟ್ರಂಪ್ ನಿರ್ಧಾರ? ಹೋರ್ಮುಜ್ ಜಲಸಂಧಿ ಮುಚ್ಚಿದ್ರೂ ಸದ್ಯ ಯುದ್ಧಕ್ಕೆ ಬ್ರೇಕ್ ಹಾಕಿದ್ದೇಕೆ ಟ್ರಂಪ್?

ಯುದ್ಧ ನಿಲ್ಲಿಸಲು ಕಾರಣಗಳೇನು?: ಮುಖ್ಯವಾಗಿ ಅಮೆರಿಕದ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಈವರೆಗಿನ ಯುದ್ಧಕ್ಕೆ ಅಮೆರಿಕ ಈಗಾಗಲೇ ಸುಮಾರು 35 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ದಿನಕ್ಕೆ ಸರಾಸರಿ 1 ಬಿಲಿಯನ್ ಡಾಲರ್ ವೆಚ್ಚವಾಗುತ್ತಿದ್ದು, 16 ಫೈಟರ್ ಜೆಟ್‌ಗಳನ್ನು ಅಮೆರಿಕ ಕಳೆದುಕೊಂಡಿದೆ. ಅಮೆರಿಕದ ಒಟ್ಟು ಸಾಲ 38 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಡಿಪಿಯ ಶೇ.122ರಷ್ಟಿದೆ.

ಜಾಗತಿಕ ತೈಲ ಬಿಕ್ಕಟ್ಟಿನ ಆತಂಕ: ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿದರೆ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಏರಿಕೆಯಾಗುವ ಭೀತಿ ಇದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಇರಾನ್ ಶಕ್ತಿಯನ್ನು ಧ್ವಂಸಗೊಳಿಸಿದ್ದೇವೆ ಎನ್ನುತ್ತಿದ್ದಾರಾದರೂ, ಇರಾನ್ ಮಣಿಯದೇ ನೀಡುತ್ತಿರುವ ಪ್ರತಿರೋಧ ಅಮೆರಿಕವನ್ನು ಚಿಂತೆಗೀಡು ಮಾಡಿದೆ. ಈ ಎಲ್ಲಾ ಕಾರಣಗಳಿಂದಾಗಿ ನಾಳೆ ಟ್ರಂಪ್ ನಡೆಸಲಿರುವ ಸುದ್ದಿಗೋಷ್ಠಿಯ ಮೇಲೆ ಇಡೀ ವಿಶ್ವದ ಕುತೂಹಲ ನೆಟ್ಟಿದೆ.

Related Video