ಜಗತ್ತನ್ನೇ ಕಂಗೆಡಿಸಿದ ಇಸ್ರೇಲ್-ಇರಾನ್ ಯುದ್ಧಕ್ಕೆ ಒಂದು ತಿಂಗಳು: ಮುಂದುವರಿದ ಭೀಕರ ಸಂಘರ್ಷ

ಇರಾನ್‌ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್‌ ಆರಂಭಿಸಿದ ಯುದ್ಧ ಒಂದು ತಿಂಗಳು ಪೂರೈಸಿದೆ. ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಹತ್ಯೆ ಬಳಿಕ ಯುದ್ಧ ಮುಗಿದೇಹೋಗುತ್ತದೆ ಎಂದು ಭಾವಿಸಿದ್ದ ಅಮೆರಿಕದ ನಂಬಿಕೆ ಹುಸಿಯಾಗಿದೆ.

Share this Video
  • FB
  • Linkdin
  • Whatsapp

ಇರಾನ್‌ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್‌ ಆರಂಭಿಸಿದ ಯುದ್ಧ ಒಂದು ತಿಂಗಳು ಪೂರೈಸಿದೆ. ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಹತ್ಯೆ ಬಳಿಕ ಯುದ್ಧ ಮುಗಿದೇಹೋಗುತ್ತದೆ ಎಂದು ಭಾವಿಸಿದ್ದ ಅಮೆರಿಕದ ನಂಬಿಕೆ ಹುಸಿಯಾಗಿದೆ. ಖಮೇನಿ ಜೊತೆ ಇನ್ನೂ ಹಲವು ಉನ್ನತ ನಾಯಕರು ಸಾವನ್ನಪ್ಪಿದರೂ ಇರಾನ್‌ ಛಲಬಿಡದ ತ್ರಿವಿಕ್ರಮನಂತೆ ಹೋರಾಟ ಮುಂದುವರಿಸಿದೆ. ಈ ಒಂದು ತಿಂಗಳ ಸಮರ, ಜಗತ್ತಿನ ಮೇಲೆ ಅದರ ಪರಿಣಾಮ ಹಾಗೂ ಇನ್ನಿತರ ಕೆಲವು ಕುತೂಹಲಕರ ಮಾಹಿತಿಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕದನ ಶುರುವಾಗಿದ್ದು ಹೇಗೆ?: ಫೆ.28ರಂದು ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ವಾಯುದಾಳಿ ಆರಂಭಿಸಿದವು. ರಾಜಧಾನಿ ಟೆಹ್ರಾನ್‌, ಮಿನಾಬ್‌ ಹಾಗೂ ಇನ್ನಿತರ ಪ್ರಮುಖ ನಗರಗಳು ದಾಳಿಗೆ ತುತ್ತಾದವು. ಅಮೆರಿಕವು ಇರಾನ್‌ನ ರಕ್ಷಣಾ ಮೂಲಸೌಕರ್ಯ ಹಾಗೂ 10,000 ನೆಲೆಗಳನ್ನು ನಾಶಪಡಿಸಿತು. ಪ್ರತಿದಾಳಿ ಆರಂಭಿಸಿದ ಇರಾನ್‌, ಇಸ್ರೇಲ್‌ ಮಾತ್ರವಲ್ಲದೆ ಅಮೆರಿಕ ಸ್ನೇಹಿ ಕೊಲ್ಲಿ ರಾಷ್ಟ್ರಗಳ ಮೇಲೂ ನಿರಂತರ ಆಕ್ರಮಣ ಆರಂಭಿಸಿತು.

ಸಾವು-ನೋವು, ನಷ್ಟ: ಯುದ್ಧ ಪ್ರಾರಂಭವಾದಾಗಿನಿಂದ ಇರಾನ್‌ನಲ್ಲಿ 1,900, ಇಸ್ರೇಲ್‌ನಲ್ಲಿ 18, ಲೆಬನಾನ್‌ನಲ್ಲಿ 1,100 ಜನ ಸಾವನ್ನಪ್ಪಿದ್ದಾರೆ. ಇರಾಕ್‌ನಲ್ಲಿ 80 ಭದ್ರತಾ ಪಡೆ ಸಿಬ್ಬಂದಿ, ಲೆಬನಾನ್‌ನಲ್ಲಿ ಕನಿಷ್ಠ 3 ಇಸ್ರೇಲಿ ಸೈನಿಕರು, 13 ಅಮೆರಿಕ ಯೋಧರು, ಆಕ್ರಮಿತ ವೆಸ್ಟ್‌ ಬ್ಯಾಂಕ್‌ನಲ್ಲಿ ನಾಲ್ವರು ಮತ್ತು ಕೊಲ್ಲಿ ದೇಶಗಳಲ್ಲಿ 20 ಜನ ಸಾವನ್ನಪ್ಪಿದ್ದಾರೆ. ಯುದ್ಧದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ ಸುಮಾರು 4,500 ಎಂದು ವರದಿಯಾಗಿದೆ. ಯುದ್ಧದ ಆರಂಭದ 3 ವಾರಗಳಲ್ಲಿ ಅಮೆರಿಕಕ್ಕೆ 11,620 ಕೋಟಿ ರು.ಗಳಿಂದ 24,070 ಕೋಟಿ ರು.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Related Video