ರಷ್ಯಾ ವಿರುದ್ಧವೇ ತಿರುಗಿ ಬಿದ್ದ ವ್ಯಾಗ್ನರ್‌ ಪಡೆ: ನನ್ನ ಬೆನ್ನಿಗೆ ಚೂರಿ ಇರಿದರು ಎಂದ ಪುಟಿನ್‌

ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿ ಒಂದೂವರೆ ವರ್ಷ ಕಳೆದರೂ ಯಶಸ್ಸು ಸಿಗದೆ ಬಸವಳಿದಿದ್ದ ರಷ್ಯಾಗೆ ಇದೀಗ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಆ ದೇಶದಲ್ಲಿ ಇದೀಗ ಆಂತರಿಕ ಯುದ್ಧ ಆರಂಭವಾಗಿದೆ.

First Published Jun 25, 2023, 11:37 AM IST | Last Updated Jun 25, 2023, 11:37 AM IST

ಮಾಸ್ಕೋ: ಉಕ್ರೇನ್ ಮೇಲೆ ಯುದ್ದ ಸಾರಿ ಬಿಗಿ ಹಿಡಿತ ಸಾಧಿಸಲು ಹೊರಟ ರಷ್ಯಾದಲ್ಲಿ ಇದೀಗ ಆಂತರಿಕ ದಂಗೆ ತಲೆನೋವು ಹೆಚ್ಚಾಗಿದೆ. ರಷ್ಯಾ ಮಿಲಿಟರಿ ಸೇನೆ ಜೊತೆಗಿದ್ದ ಖಾಸಗಿ ಸೇನೆ ವ್ಯಾಗ್ನರ್ ತಿರುಗಿ ಬಿದ್ದಿದ್ದು, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬದಲಿಸುವ ಎಚ್ಚರಿಕೆ ನೀಡಿದೆ. ವ್ಯಾಗ್ನರ್ ಸೇನೆ ನಿಯಂತ್ರಿಸಲು ಸೂಚನೆ ನೀಡಿದ ಪುಟಿನ್‌ ವಿರುದ್ಧವೇ ದಾಳಿ ಮಾಡಲಾಗುತ್ತಿದೆ. ರಷ್ಯಾ ಸೇನೆಯ ಎರಡು ಹೆಲಿಕಾಪ್ಟರ್ ಹೊಡೆದುರುಳಿಸುವುದಾಗಿ ವ್ಯಾಗ್ನರ್ ಸೇನೆ ಹೇಳಿದೆ. ಇತ್ತ ಬಾಂಬ್ ದಾಳಿಯನ್ನೂ ನಡೆಸಿದೆ. ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದರೇ, ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಲಾಭವನ್ನು ನಮ್ಮ ದೇಶ ಪಡೆದುಕೊಳ್ಳುತ್ತಿತ್ತು. ರಷ್ಯಾ ನಮಗೆ ಉತ್ತಮ ಬೆಲೆಗೆ ಪೆಟ್ರೋಲ್‌ ಕೊಟ್ಟಿತ್ತು. ಈ ಅಂತರಿಕ ಯುದ್ಧ ಭಾರತದ ಪೆಟ್ರೋಲ್‌ ಬೆಲೆ ಮೇಲೆ ಪರಿಣಾಮ ಬೀರಲಿದೆ. 

ಇದನ್ನೂ ವೀಕ್ಷಿಸಿ: ವ್ಯಕ್ತಿಯ ಕತ್ತುಕೊಯ್ದು ರಕ್ತ ಕುಡಿದು‌ ವಿಕೃತಿ ಮೆರೆದ ಕಿರಾತಕ: ವಿಡಿಯೋ ವೈರಲ್‌

Video Top Stories