Asianet Suvarna News Asianet Suvarna News

ವ್ಯಕ್ತಿಯ ಕತ್ತುಕೊಯ್ದು ರಕ್ತ ಕುಡಿದು‌ ವಿಕೃತಿ ಮೆರೆದ ಕಿರಾತಕ: ವಿಡಿಯೋ ವೈರಲ್‌

ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ವಿಜಯ್‌ ಎಂಬ ವ್ಯಕ್ತಿ ಮಾರೇಶ್‌ ಎಂಬಾತನ ಕತ್ತು ಕೊಯ್ದು, ರಕ್ತ ಕುಡಿದು ವಿಕೃತಿ ಮೆರೆದಿದ್ದಾನೆ.
 

First Published Jun 25, 2023, 10:36 AM IST | Last Updated Jun 25, 2023, 10:36 AM IST

ಚಿಕ್ಕಬಳ್ಳಾಪುರ: ಪತ್ನಿಯೊಂದಿಗೆ ಅನೈತಿಕ ‌ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಪತಿರಾಯ ವ್ಯಕ್ತಿಯೊಬ್ಬನ ಕತ್ತುಕೊಯ್ದು ರಕ್ತ ಕುಡಿದು ವಿಕೃತಿ ಮೆರೆದಿದ್ದಾನೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ  ನಡೆದಿದೆ. ಬಟ್ಲಹಳ್ಳಿ ಗ್ರಾಮದ ವಿಜಯ್ ಕತ್ತು ಸೀಳಿದ ವ್ಯಕ್ತಿಯಾಗಿದ್ದು, ಚೇಳೂರಿನ ಮಾರೇಶ್ ಎಂಬ ವ್ಯಕ್ತಿ ಗಾಯಗೊಂಡಿದ್ದಾರೆ. ಈ ಸಂಬಂಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿಜಯ್‌ ರಕ್ತ ಕುಡಿಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಜಯ್ , ಗಾಯಾಳು ಮಾರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಹೈಟೆಕ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಗಾಂಜಾ ಕೃಷಿ: ಮೆಡಿಕಲ್ ಸ್ಟೂಡೆಂಟ್ಸ್ ಅರೆಸ್ಟ್!

Video Top Stories