
ಟ್ರಂಪ್ ಬಿಟ್ಟ ಛೂಬಾಣ.. ಅಮೆರಿಕಾಗೇ ತಿರುಗುಬಾಣ! ಟ್ರಂಪ್ ಆಟಕ್ಕೆ ಬ್ರೇಕ್ ಹಾಕಿದೆ ಹೊಸ ಲೆಕ್ಕಾಚಾರ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾವಾದಿ ಸುಂಕ ನೀತಿಗಳು ಜಾಗತಿಕ ರಾಜಕಾರಣದಲ್ಲಿ ಹೊಸ ತಲ್ಲಣಗಳನ್ನು ಸೃಷ್ಟಿಸುತ್ತಿವೆ. ಭಾರತದಂತಹ ಪ್ರಮುಖ ಕಾರ್ಯತಂತ್ರದ ಪಾಲುದಾರರೊಂದಿಗೆ ಅಮೆರಿಕದ ಸಂಬಂಧಗಳು ಪರೀಕ್ಷೆಗೆ ಒಳಪಟ್ಟಿವೆ. ಈ ಸುಂಕಗಳು ಅಮೆರಿಕಕ್ಕೆ ತಿರುಗುಬಾಣವಾಗುವ ಲಕ್ಷಣಗಳಿವೆ.
ನವದೆಹಲಿ (ಆ.23): ತನ್ನನ್ನು ತಾನು ಜಗತ್ತಿನ ದೊಡ್ಡಣ್ಣ ಎಂದು ಕರೆದುಕೊಳ್ಳುವ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದೇ ತಡ, ಅವರ ರಕ್ಷಣಾವಾದಿ ಸುಂಕ ನೀತಿಗಳು ಜಾಗತಿಕ ರಾಜಕಾರಣದಲ್ಲಿ ಹೊಸ ತಲ್ಲಣಗಳನ್ನು ಸೃಷ್ಟಿಸುತ್ತಿವೆ.
ಅದರಲ್ಲೂ ವಿಶೇಷವಾಗಿ, ಭಾರತದಂತಹ ಪ್ರಮುಖ ಕಾರ್ಯತಂತ್ರದ ಪಾಲುದಾರರೊಂದಿಗೆ ಅಮೆರಿಕದ ಸಂಬಂಧಗಳು ತೀವ್ರ ಪರೀಕ್ಷೆಗೆ ಒಳಪಟ್ಟಿವೆ. ತಾನೇ ವಿಧಿಸಿದ ಸುಂಕಗಳು ಅಮೆರಿಕಾದ ಪಾಲಿಗೆ ತಿರುಗುಬಾಣವಾಗುವ ಲಕ್ಷಣಗಳು ಸ್ಪಷ್ಟವಾಗಿವೆ.
'ಸತ್ತ ಆರ್ಥಿಕತೆ' ಎಂದ ಅಮೆರಿಕಕ್ಕೆ ಭಾರತದ ತಿರುಗೇಟು: ರಷ್ಯಾ ಜೊತೆ ಮುಕ್ತ ವ್ಯಾಪಾರ ಒಪ್ಪಂದ! ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡ ಟ್ರಂಪ್
ಡೊನಾಲ್ಡ್ ಟ್ರಂಪ್ ಅವರ ಸುಂಕ ವಿಧಿಸುವಿಕೆಯು ಕೇವಲ ವ್ಯಾಪಾರದ ವಿಷಯವಾಗಿರದೆ, ಇದು ಅಮೆರಿಕದ ಪ್ರಭುತ್ವ ಪ್ರದರ್ಶನದ ಒಂದು ಅಸ್ತ್ರವಾಗಿ ಕಂಡುಬರುತ್ತಿದೆ. ಈ ನೀತಿಯು ಒಂದು ಕಡೆ ಜಾಗತಿಕ ವ್ಯಾಪಾರ ಸಂಬಂಧಗಳನ್ನು ಹದಗೆಡಿಸುತ್ತಿದ್ದರೆ, ಮತ್ತೊಂದೆಡೆ ಅಮೆರಿಕಕ್ಕೆ ಭಾರಿ ನಷ್ಟವನ್ನುಂಟು ಮಾಡಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಭಾರತದ ವಿಷಯದಲ್ಲಿ, ಈ ಏಕಪಕ್ಷೀಯ ಸುಂಕಗಳ ಹೇರಿಕೆಯು ದಶಕಗಳಿಂದ ಬೆಳೆದುಬಂದ ಇಂಡೋ-ಅಮೆರಿಕ ಸಂಬಂಧಗಳಿಗೆ ಅಪಾಯ ತಂದೊಡ್ಡಬಹುದು ಎಂಬ ಆತಂಕ ಹೆಚ್ಚಿದೆ.