
ಕಿಮ್ ಆಡೋ ಸಾವಿನ ಆಟದ ಭಯಾನಕ ವಿಡಿಯೋ !
ಕಿಮ್ ಆಡೋ ಸಾವಿನ ಆಟದ ಭಯಾನಕ ವಿಡಿಯೋ ..! ಅಮಾಯಕರಿಗೆ ಕ್ರೂರ ಶಿಕ್ಷೆ.. ಕಿಮ್ಗೆ ಅದೇನು ಆನಂದವೋ..? ನರಕಕ್ಕಿಂತಲೂ ಭೀಕರ ಉ.ಕೋರಿಯಾ ರೂಲ್ಸ್..!
ಬೆಂಗಳೂರು (ಜುಲೈ 22): ಮಿಸ್ಟರ್ ಕಿಮ್ ಜಾಂಗ್ ಉನ್, ಆಧುನಿಕ ಜಗತ್ತಿನ ಕ್ರೂರ ಸರ್ವಾಧಿಕಾರಿ ಅಂತಾನೇ ಫೇಮಸ್.. ಆತನ ಹೆಸ್ರು ಕೇಳಿದ್ರೇನೇ ಜೀವ ಗಡಗಢ ಅಂದುಬಿಡುತ್ತೆ. ಯಾಕಂದ್ರೆ, ಆತ ಮಾಡಿರೋ ಭೀಕರ ನರಮೇಧಗಳು. ಆತನ ವಿಚಿತ್ರ.. ಅಷ್ಟೆ ವಿಕೃತ ಮನಸ್ಥಿತಿ ಬಗ್ಗೆ ಹೇಳ್ತಾ ಹೋದ್ರೆ, ಗಟ್ಟಿ ಗುಂಡಿಗೆಯಲ್ಲೂ ಕೂಡಾ ಭಯ ಹುಟ್ಟಿ ಬಿಡುತ್ತೆ. ಅಂಥಾ ಭಯಾನಕ ಸರ್ವಾಧಿಕಾರಿಯ, ವಿಕೃತ ಮನಸ್ಸಿನ ಕರ್ಮಕಾಂಡ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ.
ಕಿಮ್ ಜಾಂಗ್ ಉನ್ ಸಾವು ಕಂಡರೆ, ಅದೇ ಪಟ್ಟದ ಮೇಲೆ ಕುಳಿತುಕೊಳ್ಳೊಕೆ ರೆಡಿಯಾಗಿದ್ದಾಳೆ ಕಿಮ್ ಮುದ್ದಿನ ತಂಗಿ. ಆಕೆ ಈತನಿಗಿಂತಲೂ ದೊಡ್ಡ ಕ್ರೂರಿ.ನೋಡೋಕೆ, ಆಕೆ ಸೈಲೆಂಟ್.. ಆದರೆ ವೈಲೆಂಟ್ ವಿಚಾರದಲ್ಲಿ ಅಣ್ಣನನ್ನೇ ಮೀರಿಸೋ ತಂಗಿ. ಕಿಮ್ ಗರಡಿಯಲ್ಲಿ ಪಳಗಿದ್ದಾಳೆ ಅಂದ್ರೆ ಸಾಮಾನ್ಯನಾ..? ಅಷ್ಟಕ್ಕೂ ಕಿಮ್‌ನ ಮುದ್ದಿನ ತಂಗಿ ಅಧಿಕಾರ, ಆಡಳಿತದಲ್ಲಿ ಅಣ್ಣನನ್ನೇ ಮೀರಿಸೋ ಹಾಗಿದ್ದಾಳೆ.
Rakesh Tikait : ಮತ್ತೊಬ್ಬ ಕಿಮ್ ಜಾಂಗ್ ಉನ್ ಜನರಿಗೆ ಬೇಕಾ?
ಈಕೆಗೆ ಇದಿನ್ನೂ ಆರಂಭ ಅಷ್ಟೆ. ಈ ಸಾವಿನ ಆಟದಲ್ಲಿ ಅಣ್ಣಾ ಈಗಾಗಲೇ ಪಂಟರ್ ಆಗಿದ್ದಾನೆ. ಕೆಲವೇ ದಿನಗಳ ಹಿಂದಿನ ಮಾತು. ಅನಾರೋಗ್ಯದ ಕಾರಣದಿಂದಾಗಿ ಕಿಮ್ ಜಾಂಗ್ ಉನ್ ಆಸ್ಪತ್ರೆಯಲ್ಲಿದ್ದ ವೇಳೆ, ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಆತನ ತಂಗಿ.