ಗೂಢಚಾರಿ ಸ್ಯಾಟಲೈಟ್‌ಗೆ ಬೆಚ್ಚಿದ ಅಮೆರಿಕಾ..ಜಪಾನ್.. ನಿದ್ದೆ ಬಿಟ್ಟು ಆಕಾಶದತ್ತ ನೋಡುತ್ತಿದೆ ದಕ್ಷಿಣ ಕೊರಿಯಾ !

ಕಿಮ್  ಹೊಸ ಅವತಾರಕ್ಕೆ ಬೆಚ್ಚಿದ ಶತ್ರು ದೇಶಗಳು
ಬಾಹ್ಯಾಕಾಶದಲ್ಲಿ ಗೂಢಚಾರಿ ಸ್ಯಾಟಲೈಟ್ ಲಾಂಚ್
ತನ್ನ ಕೆಲಸ ಆರಂಭಿಸಿದ ಗೂಢಚಾರಿ ಸ್ಯಾಟಲೈಟ್
ಬಾಹ್ಯಾಕಾಶದಿಂದ ರಹಸ್ಯ ಪೋಟೋ ಪಡೆದ ಕಿಮ್ 

First Published Nov 27, 2023, 9:22 AM IST | Last Updated Nov 27, 2023, 9:29 AM IST

ಉತ್ತರ ಕೊರಿಯಾದ ಪ್ರಮುಖ ಮೂರು ಶತ್ರು ರಾಷ್ಟ್ರಗಳು ಈಗ ಭಯದಲ್ಲಿವೆ. ಬಾಹ್ಯಾಕಾಶದಿಂದ ಉತ್ತರ ಕೊರಿಯಾ(North korea) ತಮ್ಮ ಮೆಲೆನೇ ದೃಷ್ಟಿ ನೆಟ್ಟಿದೆ ಅನ್ನೋದು ಆ ದೇಶಗಳಿಗೆ ಪಕ್ಕಾ ಆಗಿದೆ. ಹೀಗಾಗಿ ಆ ದೇಶಗಳು ಭಯದಲ್ಲಿವೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್(kim jong un), ಎಷ್ಟೊಂದು ಅಪಾಯಕಾರಿಯಾಗಿರೋ ಸರ್ವಾಧಿಕಾರಿ ಅನ್ನೋದನ್ನು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ತನ್ನ ಶತ್ರು ರಾಷ್ಟ್ರಗಳಿಗೆ ಕಿಮ್ ದುಸ್ವಪ್ನವಿದ್ದಂತೆ. ಪ್ರತಿ ಕ್ಷಣ ವಿರೋಧಿ ರಾಷ್ಟ್ರಗಳಿಗೆ ಭಯ ಹುಟ್ಟಿಸುತ್ತಲೇ ಇರ್ತಾನೆ. ತನ್ನ ಶತ್ರು ದೇಶಗಳಿಂದ ಕಡಿಮೆ ಮಿಲಿಟರಿ ಶಕ್ತಿ ಹೊಂದಿದ್ದರೂ ಪರವಾಗಿಲ್ಲ. ಆದ್ರೂ ಶತ್ರು ದೇಶಗಳಿಗೆ ಕಿಂಚಿತ್ತು ಭಯ ಪಡೋದಿಲ್ಲ ಈ ಭೂಪ. ಈತನ ಭಂಡ ಧೈರ್ಯಕ್ಕೆ ಬಲಿಷ್ಠ ವಿರೋಧಿಗಳು ಸಹ ಬೆಂಡಾಗುತ್ತಾರೆ. ಅಷ್ಟೊಂದು ಭಂಡ ಧೈರ್ಯವಂತ ಈ ಕಿಮ್ ಜಾಂಗ್ ಉನ್. ಕಿಮ್‌ಗೆ ಮೊದಲ ಶತ್ರು ರಾಷ್ಟ್ರವೆಂದರೆ ದಕ್ಷಿನ ಕೊರಿಯಾ(South Korea). ದಕ್ಷಿಣ ಕೊರಿಯಾ ಎಂದ್ರೆ ಸಾಕು ಕಿಮ್ ಉರಿದು ಬೀಳ್ತಾನೆ. ಉತ್ತರ ಕೊರಿಯಾಗೆ ತನ್ನ ಪಕ್ಕದ ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕಾಗಳ ದೇಶಗಳೆಂದ್ರೆ ದೊಡ್ಡ ವೈರತ್ವ. ಈ ಮೂರು ದೇಶಗಳ ವಿರುದ್ಧ ಕಿಮ್ ಸದಾ ಕೆಂಡ ಕಾರ್ತಿರ್ತಾನೆ. ಈಗ ಈ ಮೂರು ದೇಶಗಳಿಗೆ ನಡುಕ ಶುರುವಾಗಿದೆ. ತಮ್ಮ ಮೇಲೆ ಕಣ್ಣಿಡಲೆಂದೇ ಕಿಮ್ ಗೂಢಚಾರ ಉಪಗ್ರರ ಹಾರಿಸಿದ್ದಾನೆಂದು ಅವರಿಗೆಲ್ಲ ಗೊತ್ತಿದೆ. ಹೀಗಾಗಿ ಈ ಮೂರು ದೇಶಗಳು ಈಗ ಆತಂಕದಲ್ಲಿವೆ. 

ಇದನ್ನೂ ವೀಕ್ಷಿಸಿ:  ಹೇಗಿತ್ತು ಸೆಕೆಂಡ್ ಡೇ ಬೆಂಗಳೂರು ಕಂಬಳ..!? ಕಂಬಳದ ಕರೆಯಲ್ಲಿ ಕೋಣಗಳ ಜಬರ್ದಸ್ತ್ ಓಟ..!

Video Top Stories