ಪಕ್ಷ ಕೊಟ್ಟ ನೋಟಿಸ್‌ಗೆ ಕ್ಯಾರೆ ಎನ್ನದ ರೇಣುಕಾಚಾರ್ಯ: ಪಕ್ಷದ ಬೆಳವಣಿಗೆ ಬಗ್ಗೆ ಮೋದಿಗೆ ದೂರು ಕೊಡ್ತಾರಂತೆ ಎಂಪಿಆರ್?

ರಾಜ್ಯ BJP ಶಿಸ್ತು ಸಮಿತಿ ದಿಢೀರ್ ನೋಟಿಸ್ ಕೊಟ್ಟಿದ್ದೇಕೆ? 
ನೋಟಿಸ್‌ಗೆ ಕ್ಯಾರೆ ಎನ್ನದವರಿಗೆ ಪಕ್ಷದ ಮುಂದಿನ ನಡೆಯೇನು? 
ನಳೀನ್ ಕುಮಾರ್ ಕಟೀಲ್‌ಗೆ ಸೆಡ್ಡು ಹೊಡೆದರಾ ಎಂಪಿಆರ್?

Share this Video
  • FB
  • Linkdin
  • Whatsapp

ಬಿಜೆಪಿ ಪಕ್ಷದ ಮಾಜಿ ಶಾಸಕ ರೇಣುಕಾಚಾರ್ಯ ದಿಢೀರ್ ಗರಂ ಆಗಿದ್ದಾರೆ. ವಿಧಾಸಭೆ ಎಲೆಕ್ಷನ್‌ನಲ್ಲಿ ಸೋತ ಮೇಲೆ ತಣ್ಣಗಾಗಿದ್ದ ರೇಣುಕಾಚಾರ್ಯ, ಮೊನ್ನೆಯಿಂದ ಫುಲ್‌ ರಾಂಗ್ ಆಗಿದ್ದಾರೆ. ಅಷ್ಟಕ್ಕೂ ರೇಣುಕಾಚಾರ್ಯ ರಾಂಗ್ ಆಗಿದ್ದು ಯಾರ ಮೇಲೆ ಗೊತ್ತಾ? ಅವರದೇ ಪಕ್ಷದ ಘಟಾನುಘಟಿ ನಾಯಕರ ಮೇಲೆ. ಮಾಜಿ ಶಾಸಕ ರೇಣುಕಾಚಾರ್ಯ ತಮ್ಮದೇ ಪಕ್ಷದ ನಾಯಕರ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ನ್ಯಾಮತಿ-ಹೊನ್ನಾಳಿ ಅವಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ರೇಣುಕಾಚಾರ್ಯ ನಿನ್ನೆ ಇದ್ದಕ್ಕಿದ್ದಂತೆ ಪ್ರೆಸ್ ಮೀಟ್ ಕರೆದಿದ್ರು. ಪ್ರೇಸ್‌ಮೀಟ್‌ನಲ್ಲಿ ತಮ್ಮದೇ ಪಕ್ಷದ ವಿರುದ್ಧ ರೇಣುಕಾಚಾರ್ಯ ಗುಡುಗಿದ್ದರು. ಎಲೆಕ್ಷನ್ ಸಂದರ್ಭದಲ್ಲಿ ತಮ್ಮ ಪಕ್ಷದ ನಾಯಕರು ಮಾಡಿಕೊಂಡಿದ್ದ ಎಡವಟ್ಟುಗಳನ್ನು ಬಿಚ್ಚಿಟ್ಟಿದ್ರು. ಗ್ರಾಮ ಪಂಚಾಯಿತಿ ಗೆಲ್ಲಲಾಗದವರಿಗೆ ಎಲೆಕ್ಷನ್ ಜವಾಬ್ದಾರಿ ವಹಿಸಿದ್ದರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. 

ಇದನ್ನೂ ವೀಕ್ಷಿಸಿ: ದಾವಣಗೆರೆಯಲ್ಲಿ ಕವರ್‌ ಸ್ಟೋರಿ ಕಾರ್ಯಾಚರಣೆ: ಕಳಪೆ ಜೊತೆ ಕಡಿಮೆ ತೂಕವುಳ್ಳ ಮೊಟ್ಟೆ ವಿತರಣೆ

Related Video