Asianet Suvarna News Asianet Suvarna News

ತಾಲಿಬಾನ್ ಪ್ರೀತಿ: ಪಾಕ್ ಮರ್ಯಾದೆಯನ್ನೇ ಹರಾಜು ಹಾಕಿದ ಇಮ್ರಾನ್ ಖಾನ್

Sep 20, 2021, 12:09 PM IST

ಕಾಬೂಲ್ (ಸೆ. 20): ಅಫ್ಘಾನಿಸ್ತಾನಲ್ಲಿ ತಾಲಿಬಾನ್ ಯಾವಾಗ ಎಂಟ್ರಿ ಆಯ್ತೋ, ಅದೇ ತಲಿಬಾನ್ ಜೊತೆ ಪಾಕ್ ಕೂಡಾ ಪರೋಕ್ಷವಾಗಿ ಎಂಟ್ರಿಯಾಗಿತ್ತು. ತಮಗೂ ತಾಲಿಬಾನ್‌ಗೂ ಸಂಬಂಧ ಇಲ್ಲ ಎನ್ನುತ್ತಿದ್ದ ಪಾಕ್, ಜಗತ್ತಿನ ಮುಂದೆ ಬೆತ್ತಲಾಗಿದೆ. ಅದರಲ್ಲೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. 

ಅಫ್ಘನ್ ಮಹಿಳೆಯರ ಕಲರ್ ಸ್ಟ್ರೈಕ್‌ಗೆ ಥಂಡಾ ಹೊಡೆದ ತಾಲಿಬಾನ್..!

'ಪ್ರಸ್ತುತ ಅಷ್ಘಾನಿಸ್ತಾನದ ಸಮಸ್ಯೆ ಏಷ್ಯಾದ ಭಾಗದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅಮೆರಿಕ ತಾಲಿಬಾನಿಗಳ ಬಗ್ಗೆ ಧನಾತ್ಮಕ ನಿಲುವು ತಳೆಯುವುದು ಅನಿವಾರ್ಯವಾಗಿದೆ. ಒಂದು ವೇಳೆ ಪಾಕಿಸ್ತಾನ ಅಮೆರಿಕದ ವಿರುದ್ಧ ತಾಲಿಬಾನಿನ್‌ ಗೆಲುವಿಗೆ ಸಹಾಯ ಮಾಡಿದ್ದರೆ, ಪಾಕಿಸ್ತಾನವು ಅಮೆರಿಕ ಹಾಗೂ ಯರೋಪ್‌ಗಿಂತಲೂ ಪ್ರಬಲ ಶಕ್ತಿ ಎನಿಸಿಕೊಳ್ಳುತ್ತಿತ್ತು' ಎಂದು ಹೇಳಿದ್ದಾರೆ.