ಪಾಕಿಸ್ತಾನಕ್ಕೆ ಪ್ರಾಣಕಂಟಕವಾಯ್ತು ಆಪರೇಶನ್‌ ಹೆರಾಫ್: 36 ಗಂಟೆಯಲ್ಲಿ 130 ಸೈನಿಕರ ಮಾರಣ ಹೋಮ

ಭಾರತದ ಜೊತೆ ಇದ್ದುಬಿಡಬೇಕು ಅನ್ನೋ ಗಟ್ಟಿ ಸಂಕಲ್ಪ.. ಪಾಕಿಸ್ತಾನದ ಕಪಿಮುಷ್ಠಿಯಿಂದ ಪಾರಾಗಬೇಕು ಅನ್ನೋ ಆವೇಶ, ಆಕ್ರೋಶ.. ಈ ಎರಡು ಕಾರಣಗಳಿಗೆ, ಪಾಕ್ ಸೈನಿಕರ ವಿರುದ್ಧ ತಿರುಗಿಬಿದ್ದಿದೆ, ಬಲೋಚ್ ವಿಮೋಚನಾ ಪಡೆ..ಏನಾಗಲಿದೆ ಅದರ ಮುಂದಿನ ನಡೆ ಇಲ್ಲಿದೆ ಡಿಟೇಲ್ಡ್ ಸ್ಟೋರಿ

Share this Video
  • FB
  • Linkdin
  • Whatsapp

ಬಲೂಚಿಸ್ತಾನ.. ಬರೋಬ್ಬರಿ 75 ವರ್ಷಗಳಿಂದಲೂ ಪಾಕಿಸ್ತಾನದಿಂದ ಬಿಡುಗಡೆ ಬೇಕು ಅಂತ ಬಯಸ್ತಾ ರೋ ಪ್ರದೇಶ.. ಆದ್ರೆ ಬಲೋಚ್ ಇಲ್ಲದೆ, ತನ್ನ ಅಸ್ತಿತ್ವವೇ ಇಲ್ಲ ಅಂತ ಅರ್ಥ ಮಾಡ್ಕೊಂಡಿದೆ ಪಾಪಿ ಪಾಕಿಸ್ತಾನ.. ಅದೇ ಕಾರಣಕ್ಕಾಗಿಯೇ ಅಲ್ಲಿನ ಜನರನ್ನ ತೀರಾ ಕೀಳಾಗಿ ಕೇವಲವಾಗಿ ನೋಡ್ಕೊಳ್ತಾ ಇದೆ.. ಇದರ ವಿರುದ್ಧ ಬಲೋಚ್ ಆರ್ಮಿ ಸಿಡಿದೆದ್ದಿದೆ.. ಇಲ್ಲೀ ತನಕ ಜಮ್ಮು ಕಾಶ್ಮೀರ ತನಗೆ ಸೇರ್ಬೇಕು ಅಂತ, ಭಾರತದಲ್ಲಿ ರಕ್ತದ ಹೊಳೆ ಹರಿಸ್ತಾ ಇತ್ತು ಪಾಕಿಸ್ತಾನ.. ಆದ್ರೆ ಪಾಕಿಸ್ತಾನದ ವಿರುದ್ಧ, ಪಾಕಿಸ್ತಾನದಲ್ಲೇ ಅಂಥದ್ದೊಂದು ರಕ್ತಕ್ರಾಂತಿ ಆರಂಭವಾಗಿದೆ.. ಅದರ ಪೂರ್ತಿ ಕತೆ ಇಲ್ಲಿದೆ ನೋಡಿ..

Related Video