
ಹೊಟ್ಟೆಗೆ ಹಿಟ್ಟಿಲ್ಲ, ಮೊಬೈಲಿಗೆ ನೆಟ್ ಇಲ್ಲ: ದಿವಾಳಿಯನ್ನೂ ನಾಚಿಸುತ್ತಿದೆ ಪಾಕಿಸ್ತಾನದ ಪರಿಸ್ಥಿತಿ!
- ಪಾಕಿಸ್ತಾನದಲ್ಲಿ ಎದುರಾಗಿದೆ ತೀವ್ರ ವಿದ್ಯುತ್ ಸಮಸ್ಯೆ
- ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗೆ ಕತ್ತರಿ
- ಪಾಕಿಸ್ತಾನದ ಅಸಲಿ ಕತೆ, ಆದರೂ ಆಹಂಕಾರ ಕಡಿಮೆ ಇಲ್ಲ
ಭಾರತದಲ್ಲಿ ಏನೇ ದುರ್ಘಟನೆ ನಡೆದ್ರೂ.. ಪ್ರತಿಭಟನೆಗಳು ಆದ್ರೂ ಭಾರತದ ವಿರುದ್ಧ ಟ್ವೀಟರ್ನಲ್ಲಿ ಟ್ರೆಂಡ್ ಆಗೋ ಹ್ಯಾಷ್ ಟ್ಯಾಗ್ಗಳು ಕಂಡು ಬಂದಿದ್ದರೆ ಅತು ಅತಿ ಹೆಚ್ಚು ಪೋಸ್ಟ್ ಆಗ್ತಾ ಇದ್ದಿದ್ದು ಪಾಕಿಸ್ತಾನದಲ್ಲಿ.. ಆದ್ರೆ ಇನ್ನು ಮುಂದೆ ಟ್ರೆಂಡ್ ಮಾಡೋದು ಕಷ್ಟವಿದೆ. ಯಾಕೆಂದ್ರೆ ಪಾಕಿಸ್ತಾನದಲ್ಲಿ ಆರ್ಥಿಕತೆ ಅನ್ನೋದು ತಳ ಸೀದು ಹೋಗಿದೆ. ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ಪಾಕಿಸ್ತಾನದಲ್ಲಿ ವಿದ್ಯುತ್ ಕಡಿತದ ವಿಚಾರದ ನಡುವೆಯೂ ಕೂಡ ಇನ್ನೊಂದು ತಪರಾಕಿ ನೀಡಿದೆ.. ಅದೇ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸ್ತೀವಿ ಅನ್ನೋ ಮಾತನ್ನಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ