ಲೋಕಾರ್ಪಣೆಯಾಗಲಿದೆ ಮೋದಿ ಕಟ್ಟಿಸಿದ ಸೆಂಟ್ರಲ್ ವಿಸ್ತಾ: ಹಳೆ ಸಂಸತ್ತಿಗೂ.. ಹೊಸ ವಿಸ್ತಾಗೂ.. ಏನೇನು ವ್ಯತ್ಯಾಸ..?

ಹೊಸ ಸಂಸತ್ ಭವನದ ವಿಸ್ತೀರ್ಣ 64,500 ಚದರ ಕಿ.ಮೀ ಇದ್ದು, ಇಲ್ಲಿನ ಭವನಗಳೂ ಕೂಡ ತೀರಾ ವಿಶಾಲವಾಗಿವೆ. ಇಷ್ಟು ದೊಡ್ಡ ಕಟ್ಟದ ಭೂಕಂಪ ವಿರೋಧಿ ತಂತ್ರಜ್ಞಾನದಿಂದ ನಿರ್ಮಾಣವಾಗಿದೆ.

Share this Video
  • FB
  • Linkdin
  • Whatsapp

ಸೆಂಟ್ರಲ್ ವಿಸ್ತಾ ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಹೊಸ ಸಂಸತ್ ಭವನ ನಿರ್ಮಾಣ ಮಾಡ್ಬೇಕು ಅನ್ನೋದೇ ಅವರ ಗುರಿಯಾಗುತ್ತು. ಹೆಜ್ಜೆ ಹೆಜ್ಜೆಗೂ ಸವಾಲು, ಅಡಿಗಡಿಗೂ ಟೀಕೆ ಎದುರಿಸಿದ ಮೋದಿ ಪಡೆ, ಕಡೆಗೂ ಹೊಸ ಸಂಸತ್ ಭವನ ಲೋಕಾರ್ಪಣೆಗೆ ಮುಂದಾಗಿದೆ. ದೆಹಲಿಯಲ್ಲಿ ಹೊಸ ಸಂಸತ್ತಿನ ನಿರ್ಮಾಣದ ಕಾರ್ಯ ಆಲ್ ಮೋಸ್ಟ್ ಮುಗಿದೇ ಹೋಗಿದೆ. ಇನ್ನೇನಿದ್ರೂ ಅದರ ಲೋಕಾರ್ಪಣೆ ಮಾತ್ರ ಬಾಕಿ ಇರೋದು. ಮೋದಿ ಪ್ರಮಾಣ ವಚನ ಸ್ವೀಕರದ ದಿನ ಕೂಡ ಮೇ. 28, ಅವತ್ತಿಗೆ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದು ಭರ್ತಿ 9 ವರ್ಷ ಕಂಪ್ಲೀಟ್ ಆಗುತ್ತೆ. ಅಷ್ಟೇ ಅಲ್ಲ, ಇದೇ ಮೇ. 28ರಂದೇ, ಸ್ವಾತಂತ್ರ ಹೋರಾಟಗಾರ, ಅಪ್ರತಿಮ ವೀರ ಸಾವರ್ಕರ್ ಅವರ ಜನ್ಮದಿನವೂ ಹೌದು. ಅದೇ ದಿನವೇ ಹೊಸ ಸಂಸತ್ ಭವನ ಲೋಕಾರ್ಪಣೆಯಾಗಲಿದೆ.

ಇದನ್ನೂ ವೀಕ್ಷಿಸಿ: ಮಿಷನ್ 123 ಅಂದವರು 19ಕ್ಕೆ ಕುಸಿದದ್ದು ಹೇಗೆ?: ಗೌಡರ ಭದ್ರಕೋಟೆ ಛಿದ್ರ ಮಾಡಿದ್ದು ಬಂಡೆನಾ.. ಬಿಜೆಪಿನಾ..?

Related Video