ಅಪರಿಚತರ ಗುಂಡಿಗೆ ಸತ್ತ ಮೋಸ್ಟ್ ವಾಂಟೆಡ್ ಉಗ್ರ!ಗುಮ್ಮನ ಭೀತಿಗೆ ನರಕವಾಯ್ತು ಉಗ್ರರಸ್ವರ್ಗ!

ಕರಾಚಿಯಲ್ಲಿ ಉರುಳಿಬಿತ್ತು ಮತ್ತೊಬ್ಬ ಉಗ್ರನ ಹೆಣ!
ಅಪರಿಚತರ ಗುಂಡಿಗೆ ಸತ್ತ ಮೋಸ್ಟ್ ವಾಂಟೆಡ್ ಉಗ್ರ!
ಎಲ್ಇಟಿ ಮೇನ್ ಲೀಡರ್‌ಗೂ ಶುರುವಾಯ್ತು ಪುಕಪುಕ!

Share this Video
  • FB
  • Linkdin
  • Whatsapp

ಇನ್ನೊಂದು ದಾಳಿ, ಇನ್ನೊಬ್ಬ ಉಗ್ರ ಮಟಾಷ್, ಮೊನ್ನೆ ತನಕ ಉಗ್ರರ ಸ್ವರ್ಗವಾಗಿದ್ದ ಪಾಕಿಸ್ತಾನ(Pakistan), ಈಗ ಅದೇ ಉಗ್ರರಿಗೆ ರೌರವನರಕವಾಗಿ ಬದಲಾಗ್ತಾ ಇದೆ. ಯಾರೋ ಬೈಕಲ್ಲಿ ಬರ್ತಾರೆ.. ಗುಂಡು ಹಾರಿಸ್ತಾರೆ.. ಮೋಸ್ಟ್ ವಾಂಟೆಡ್ ಉಗ್ರನೊಬ್ಬ(Terrorist) ನೆಗೆದುಬೀಳ್ತಾನೆ. ಯಾವಾಗ ಯಾವ ದಿಕ್ಕಿಂದ ಯಾವ ಗುಂಡು ಧಾವಿಸಿ ಬರುತ್ತೋ ಅನ್ನೋ ಭಯ. ಯಾವ ಬೀದೀಲಿ, ಯಾವ ಮೂಲೇಲಿ ನಮಗೆ ಸಾವು ಕಾದು ನಿಂತಿದ್ಯೋ ಅನ್ನೋ ಭಯ.. ಎಲ್ಲಿಗೆ ಹೋದ್ರೆ, ಎಂಥಾ ಸಾವು ಬರುತ್ತೋ ಅನ್ನೋ ಭಯ. ಇಂಥಾ ಭಯ ಕಾಡ್ತಾ ಇರೋದು, ಭಯ ಹುಟ್ಟಿಸೋಕೆ ಹುಟ್ಟಿದ್ದೀವಿ ಅಂತ ಮೆರೀತಿದ್ದ ಭಯೋತ್ಪಾದಕರಿಗೆ. ಅದರಲ್ಲೂ ತಾವು ಎಲ್ಲಿದ್ರೆ ಸೇಫ್ ಅಂತ ಭಾವಿಸಿದ್ರೋ ಅದೇ ಪಾಕಿಸ್ತಾನದಲ್ಲಿ. ಈ ವಿಲಕ್ಷಣ ವೈಪರಿತ್ಯದ ಇನ್ ಡೆಪ್ತ್ ಸ್ಟೋರಿ ಶುರುವಾಗೋದು, ಈ ಹೊಸ ಸಾವಿನಿಂದ. ಅದ್ನಾನ್ ಅಹ್ಮದ್.. ಅಲಿಯಾಸ್ ಹನ್ಝಲಾ ಅದ್ನಾನ್(Adnan Ahmed alias Abu Hanzala) ಭಾರತದ(India) ಮೋಸ್ಟ್ ವಾಂಟೆಡ್ ಉಗ್ರ. ಇಂಥಾ ಉಗ್ರನನ್ನ ಮತ್ತದೇ ವರ್ಲ್ಡ್ ಫೇಮಸ್ ಅಪರಿಚಿತ ಬಂದೂಕುಧಾರಿಗಳು ಮಟಾಷ್ ಮಾಡಿದಾರೆ. ಉಗ್ರ ಹುಳದ ಸಾವು, ಪಾಕಿಸ್ತಾವನ್ನ ಅಕ್ಷರಶಃ ಶೇಕ್ ಮಾಡಿದೆ. ಐಎಸ್ಐ ಅನ್ನೋ ಪಾಕಿಸ್ತಾನದ ಇಲಾಖೆಗೇ ದೊಡ್ಡ ಮುಖಭಂಗ ತಂದಿದೆ. ಖುದ್ದು ಐಎಸ್ಐಯೇ ಈ ಉಗ್ರನಿಗೆ 24 ಇನ್ಟು 7 ಸೆಕ್ಯುರಿಟಿ ಕೊಡ್ತಾ ಇತ್ತು. ಇವನ ಸುತ್ತಾಮುತ್ತ, ಹಗಲೂ ರಾತ್ರಿ, ಗನ್ ಹಿಡ್ಕೊಂಡು ಕಾವಲು ಕಾಯ್ತಾ ಇದ್ರು. ಆ ಸರ್ಪಗಾವಲನ್ನೂ ಮೀರಿ, ಅಪರಿಚಿತ ಬಂದೂಕುಧಾರಿಗಳು ಇವನನ್ನ ಢಮಾರ್ ಅನ್ಸಿದಾರೆ.

ಇದನ್ನೂ ವೀಕ್ಷಿಸಿ: ಕೈ ಅಧಿನಾಯಕನ ಮುಂದಿನ ಕುರುಕ್ಷೇತ್ರ ಕರ್ನಾಟಕನಾ..? ಕಾಂಗ್ರೆಸ್‌ನ ಗಾಂಧಿ ಕುಟುಂಬದ ಕುಡಿಗೆ ಕರುನಾಡು ಎಷ್ಟು ಸೇಫ್..?

Related Video